ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಬಿಗ್ ಬಾಸ್ ಮನೆಯಲ್ಲಿ ಮಂಜ ಕೆಟ್ಟ ಮಾತುಗಳನ್ನು ಆಡಿದ್ದಕ್ಕಾಗಿ ಎಲಿಮಿನೇಟ್ ಮಾಡಲಾಯಿತು. ಆ ಬಗ್ಗೆ ಸಂಗೀತಾ ಭಟ್ ಪ್ರತಿಕ್ರಿಯೆ ನೀಡಿದ್ದಾರೆ. ‘ಮಂಜ ಅವರಿಗೆ ಮಾತೇ ಮುಳುವಾಯಿತು. ಇದು ವ್ಯಕ್ತಿತ್ವದ ಆಟ. ನಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ನಾವು ಮಾತನಾಡಬೇಕು. ಫ್ಯಾಮಿಲಿ ವಿಷಯವನ್ನು ಅಲ್ಲಿಗೆ ತರಬಾರದು’ ಎಂದು ಅವರು ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಮಂಜ ಕೆಟ್ಟ ಮಾತುಗಳನ್ನು ಆಡಿದ್ದಕ್ಕಾಗಿ ಅವರನ್ನು ಎಲಿಮಿನೇಟ್ ಮಾಡಲಾಯಿತು. ಆ ಬಗ್ಗೆ ನಟಿ ಸಂಗೀತಾ ಭಟ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಮಂಜ ಅವರಿಗೆ ಮಾತೇ ಮುಳುವಾಯಿತು. ಇದು ವ್ಯಕ್ತಿತ್ವದ ಆಟ. ನಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ನಾವು ಮಾತನಾಡಬೇಕು. ಫ್ಯಾಮಿಲಿ ವಿಷಯವನ್ನು ಅಲ್ಲಿಗೆ ತರಬಾರದು. ಪ್ರತಿಯೊಬ್ಬರು ಸಂದರ್ಭವನ್ನು ನಿಭಾಯಿಸುವ ರೀತಿ ಬೇರೆ ಆಗಿರುತ್ತದೆ. ಅವರು ಮುಂದೆ ಈ ರೀತಿಯ ತಪ್ಪು ಮಾಡಲ್ಲ ಎಂಬ ನಂಬಿಕೆ ನನಗೆ ಇದೆ. ಮಂಜ ಮುಂದಿನ ದಿನಗಳಲ್ಲಿ ಉತ್ತಮ ಜೀವನ ಕಟ್ಟಿಕೊಳ್ಳಬಹುದು’ ಎಂದು ಸಂಗೀತಾ ಭಟ್ ಅವರು ಹೇಳಿದ್ದಾರೆ. ಮುಂದಿನ ಸೀಸನ್ನಲ್ಲಿ ಕೂಡ ಅಗ್ನಿ ಪರೀಕ್ಷೆ ಮೂಲಕ ಕಾಮನರ್ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಬರಬೇಕು ಎಂದು ಅವರು ಅಭಿಪ್ರಾಯ ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
