ಸಂಗೀತಾ ಶೃಂಗೇರಿ ಮಾಡಿದ ತಪ್ಪಿನಿಂದ ಬಿಗ್​ ಬಾಸ್​ ಮನೆ ಮಂದಿಗೆ ಉಪವಾಸವೇ ಗತಿ

Updated on: Dec 18, 2023 | 5:33 PM

ಸಂಗೀತಾ ಶೃಂಗೇರಿ ಅವರು ಮಾಡಿದ ತಪ್ಪಿನಿಂದ ಅನೇಕ ದಿನಸಿ ವಸ್ತುಗಳನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಇದರಿಂದ ವಿನಯ್​ ಗೌಡ, ತುಕಾಲಿ ಸಂತೋಷ್​ ಮುಂತಾದವರು ಬೇಸರಗೊಂಡಿದ್ದಾರೆ. ದಿನಸಿ ವಸ್ತು ಕಡಿಮೆ ಇರುವುದರಿಂದ ಬಿಗ್​ ಬಾಸ್​ ಮನೆಯ ಸ್ಪರ್ಧಿಗಳಿಗೆ ಉಪವಾಸವೇ ಗತಿ ಎಂಬಂತಾಗಿದೆ.

ನಟಿ ಸಂಗೀತಾ ಶೃಂಗೇರಿ (Sangeetha Sringeri) ಅವರು ಬಿಗ್​ ಬಾಸ್​ ಮನೆಯಲ್ಲಿ ಎಲ್ಲರ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಒಂದು ಎಡವಟ್ಟು. ಇಡೀ ಮನೆಗೆ ಬೇಕಾಗುವ ವಾರದ ದಿನಸಿ ಪಡೆಯಲು ಬಿಗ್​ ಬಾಸ್​ (Bigg Boss Kannada) ಒಂದು ಟಾಸ್ಕ್​ ನೀಡಿದ್ದರು. ಅದರಲ್ಲಿ ಸಂಗೀತಾ ಶೃಂಗೇರಿ ಅವರು ಮಾಡಿರುವ ತಪ್ಪಿನಿಂದ ಅನೇಕ ದಿನಸಿ ವಸ್ತುಗಳನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಇದರಿಂದ ವಿನಯ್​ ಗೌಡ (Vinay Gowda), ತುಕಾಲಿ ಸಂತೋಷ್​ ಮುಂತಾದವರು ಬೇಸರಗೊಂಡಿದ್ದಾರೆ. ದಿನಸಿ ವಸ್ತು ಕಡಿಮೆ ಇರುವುದರಿಂದ ಬಿಗ್​ ಬಾಸ್​ ಮನೆಯ ಸ್ಪರ್ಧಿಗಳಿಗೆ ಉಪವಾಸವೇ ಗತಿ ಆಗಬಹುದು ಎಂಬ ಅನುಮಾನ ಮೂಡಿದೆ. ಈ ಸಂಚಿಕೆ ಡಿಸೆಂಬರ್​ 18ರ ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಲೈವ್​ ನೋಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More