‘ಸಂಗೀತಾ ಮಾಡೋದೆಲ್ಲ ನಾಟಕೀಯವಾಗಿ ಕಾಣುತ್ತದೆ’; ಕಾರಣ ನೀಡಿದ ತನಿಷಾ

Updated on: Jan 23, 2024 | 11:10 AM

ತನಿಷಾ ಕುಪ್ಪಂಡ ಅವರು ಇತ್ತೀಚೆಗೆ ಎಲಿಮಿನೇಟ್ ಆದರು. ಅವರು ಸಂಗೀತಾ ಶೃಂಗೇರಿ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂಬುದನ್ನು ವಿವರಿಸಿದ್ದಾರೆ. ಸಂಗೀತಾ ಶೃಂಗೇರಿ ಮಾಡೋ ವಿಚಾರಗಳು ಎಷ್ಟು ನಾಟಕೀಯವಾಗಿ ಇತ್ತು ಎಂಬುದನ್ನು ತನಿಷಾ ಹೇಳಿದ್ದಾರೆ.

ತನಿಷಾ ಕುಪ್ಪಂಡ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಅವರು ಟಿವಿ9 ಕನ್ನಡದ ಜೊತೆ ಮಾತನಾಡಿದ್ದಾರೆ. ಸಂಗೀತಾ ಶೃಂಗೇರಿ ಮಾಡೋ ವಿಚಾರಗಳು ಎಷ್ಟು ನಾಟಕೀಯವಾಗಿ ಇತ್ತು ಎಂಬುದನ್ನು ತನಿಷಾ ವಿವರಿಸಿದ್ದಾರೆ. ‘ಸಂಗೀತಾ (Sangeetha Sringeri) ಅವರು ಕಾರ್ತಿಕ್​ನ ಹಿಂದೆ ಹಿಂದೆ ಬರುತ್ತಿದ್ದರು. ಅದು ನೋಡಿದವರಿಗೆ ಗೊತ್ತಾಗುತ್ತಿತ್ತೋ ಇಲ್ಲವೋ ನನಗೆ ಗೊತ್ತಿಲ್ಲ. ಸಂಗೀತಾ ಹೇಳೋದನ್ನು ಹೇಳಿಬಿಡುತ್ತಾರೆ. ನಂತರ ಕಾರ್ತಿಕ್ ಕ್ಷಮೆ ಕೇಳಲಿ ಎಂದು ನಿರೀಕ್ಷಿಸುತ್ತಾರೆ. ಕ್ಷಮೆ ಕೇಳಿದರೆ ಅದು ಜೆನ್ಯೂನ್ ಅಲ್ಲ ಎನ್ನುತ್ತಾರೆ. ಇದು ನಾಟಕೀಯವಾಗಿ ಕಾಣುತ್ತಿತ್ತು’ ಎಂದಿದ್ದಾರೆ ತನಿಷಾ ಕುಪ್ಪಂಡ. ಬಿಗ್ ಬಾಸ್ ಫಿನಾಲೆ ಸಮೀಪದಲ್ಲಿರುವಾಗ ತನಿಷಾ ಔಟ್ ಆದರು. ಅವರಿಗೆ ಈಗ ಬೇಡಿಕೆ ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More