‘ತರುಣ್-ಸೋನಲ್ ಮದುವೆಯಿಂದ ಜನರು ಜಾತಿ ಸಾಮರಸ್ಯ ಕಲಿಯಬೇಕು’: ಸಂಜನಾ ಗಲ್ರಾನಿ
ನಟಿ ಸೋನಲ್ ಮಾಂತೆರೋ ಮತ್ತು ನಿರ್ದೇಶಕ ತರುಣ್ ಸುಧೀರ್ ಅವರ ವೆಡ್ಡಿಂಗ್ ರಿಸೆಪ್ಷನ್ ಬೆಂಗಳೂರಿನಲ್ಲಿ ಸಡಗರದಿಂದ ನಡೆದಿದೆ. ಇದರಲ್ಲಿ ನಟಿ ಸಂಜನಾ ಗಲ್ರಾನಿ ಕೂಡ ಭಾಗಿ ಆಗಿದ್ದಾರೆ. ಅಂತರ್ಧರ್ಮೀಯ ವಿವಾಹ ಆಗುತ್ತಿರುವ ತರುಣ್-ಸೋನಲ್ ಅವರಿಂದ ಜನರು ಸಾಮರಸ್ಯದ ಪಾಠ ಕಲಿಯಬೇಕು ಎಂದು ಸಂಜನಾ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಇರುವ ಪೂರ್ಣಿಮಾ ಪ್ಯಾಲೇಸ್ನಲ್ಲಿ ತರುಣ್ ಸುಧೀರ್ ಮತ್ತು ಸೋನಲ್ ಮಾಂತೆರೋ ಅವರ ಆರತಕ್ಷತೆ ಸಮಾರಂಭ ಜರುಗಿದೆ. ಅನೇಕ ಸೆಲೆಬ್ರಿಟಿಗಳು ಬಂದು ಆಶೀರ್ವಾದ ಮಾಡಿದ್ದಾರೆ. ನಟಿ ಸಂಜನಾ ಗಲ್ರಾನಿ ಅವರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಅವರು ಮಾಧ್ಯಮಗಳ ಎದುರು ಈ ಮದುವೆಯ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಇದು ಸಂಭ್ರಮದ ಕ್ಷಣ. ಜಾತಿ ಭೇದ ನೋಡದೇ ಇಬ್ಬರ ಮನಸ್ಸು, ಕುಟುಂಬ ಒಂದಾಗಿದೆ. ಜಾತಿ ಭೇದ-ಭಾವ ಇಲ್ಲದೇ ನಾವು ಒಂದಾಗಿ ಇರಬೇಕು ಎಂಬುದನ್ನು ಕರ್ನಾಟಕದಲ್ಲಿ ನಾವು ಕಲಿಯಬೇಕು. ಇಂಥ ಮಿಲನದ ಜೊತೆಯೇ ನಾವು ಬದುಕಬೇಕು’ ಎಂದು ಸಂಜನಾ ಗಲ್ರಾನಿ ಹೇಳಿದ್ದಾರೆ. ಆ ವಿಡಿಯೋ ಇಲ್ಲಿದೆ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Aug 10, 2024 11:05 PM