ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ: ನಿರ್ದೇಶಕ ನಾಗಶೇಖರ್

Edited By:

Updated on: Jun 22, 2025 | 5:50 PM

‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಪ್ರಚಾರಕ್ಕೆ ರಚಿತಾ ರಾಮ್ ಬಂದಿಲ್ಲ ಎಂಬುದು ನಿರ್ದೇಶಕ ನಾಗಶೇಖರ್ ಅವರ ಅಸಮಾಧಾನಕ್ಕೆ ಕಾರಣ ಆಗಿತ್ತು. ಆ ಬಗ್ಗೆ ರಚಿತಾ ಕೂಡ ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟರು. ಅಲ್ಲದೇ, ನಾಗಶೇಖರ್ ವಿರುದ್ಧ ರಚಿತಾ ಪ್ರತ್ಯಾರೋಪ ಮಾಡಿದರು. ಅದಕ್ಕೆ ಈಗ ನಾಗಶೇಖರ್ ಪ್ರತಿಕ್ರಿಯಿಸಿದ್ದಾರೆ.

ನಿರ್ದೇಶಕ ನಾಗಶೇಖರ್ ಅವರು ನಟಿ ರಚಿತಾ ರಾಮ್ (Rachita Ram) ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು. ‘ಸಂಜು ವೆಡ್ಸ್ ಗೀತಾ 2’ (Sanju Weds Geetha 2) ಸಿನಿಮಾದ ಪ್ರಚಾರಕ್ಕೆ ರಚಿತಾ ರಾಮ್ ಬಂದಿಲ್ಲ ಎಂಬುದು ನಾಗಶೇಖರ್ ಅವರ ಅಸಮಾಧಾನಕ್ಕೆ ಕಾರಣ ಆಗಿತ್ತು. ಆ ಬಗ್ಗೆ ರಚಿತಾ ಕೂಡ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದರು. ಅಲ್ಲದೇ, ನಾಗಶೇಖರ್ ವಿರುದ್ಧ ರಚಿತಾ ರಾಮ್ ಪ್ರತ್ಯಾರೋಪ ಮಾಡಿದರು. ಅದಕ್ಕೆ ಈಗ ನಾಗಶೇಖರ್ ಪ್ರತಿಕ್ರಿಯಿಸಿದ್ದಾರೆ. ‘ಮ್ಯಾಟ್ನಿ ಸಿನಿಮಾದ ಪ್ರಚಾರಕ್ಕೆ ನಾನು ರಚಿತಾ ಅವರನ್ನು ಕಳಿಸಿಲ್ಲ ಎಂದು ರಚಿತಾ ಆರೋಪಿಸಿದ್ದಾರೆ. ದರ್ಶನ್ ಕೂಡ ಆ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದಾಗ ನಾನು ಅವರನ್ನು ಕಳಿಸಿದ್ದೆ. ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ’ ಎಂದು ನಾಗಶೇಖರ್ (Director Nagashekar) ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.