PM Narendra Modi: ಚುನಾವಣೆಯಲ್ಲಿ ಮೋದಿಗೆ ಜಯ ಸಿಗಲೆಂದು ಅಮೆರಿಕಾದಲ್ಲಿ ವಿಶೇಷ ಪೂಜೆ

|

Updated on: May 30, 2024 | 10:40 PM

Lok Sabha Elections 2024: ಈ ಬಾರಿ 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆದಿದೆ. ಈಗಾಗಲೇ 6 ಹಂತಗಳ ಚುನಾವಣೆ ಮುಕ್ತಾಯವಾಗಿದ್ದು, ಜೂನ್ 1ರಂದು 7ನೇ ಹಂತದ ಮತದಾನ ನಡೆಯಲಿದೆ. ಜೂನ್ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೇರಲಿ ಎಂದು 'ಮೋದಿ ಭಕ್ತರು' ಅಮೆರಿಕಾದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ನವದೆಹಲಿ: ನರೇಂದ್ರ ಮೋದಿ (Narendra Modi) ನೇತೃತ್ವದ ಎನ್​ಡಿಎ ಸರ್ಕಾರದ ಅಧಿಕಾರಾವಧಿ ಜೂನ್ 16ರಂದು ಮುಕ್ತಾಯವಾಗಲಿದೆ. ಜೂನ್ 4ರಂದು ಈ ಬಾರಿಯ ಲೋಕಸಭೆ ಚುನಾವಣೆಯ ಫಲಿತಾಂಶ (Lok Sabha Elections Result 2024) ಪ್ರಕಟವಾಗಲಿದೆ. ಈ ಬಾರಿಯ ಚುನಾವಣೆಯಲ್ಲೂ ಎನ್​ಡಿಎ ಭರ್ಜರಿ ಜಯ ಗಳಿಸಿ ಮತ್ತೆ ನರೇಂದ್ರ ಮೋದಿಯವರು (Narendra Modi) 3ನೇ ಅವಧಿಗೆ ಪ್ರಧಾನಿಯಾಗಲೆಂದು ಅಮೆರಿಕಾದ ಹೌಸ್ಟನ್​ನಲ್ಲಿ ವಿಶೇಷ ಸಂಕಲ್ಪ ಪೂಜೆ ನಡೆಸಲಾಗಿದೆ.

ಜೂನ್ 16ಕ್ಕೂ ಮೊದಲು ಹೊಸ ಸರ್ಕಾರ ರಚನೆಯಾಗಿ ಸಚಿವ ಸಂಪುಟವನ್ನು ರಚಿಸಬೇಕಾಗಿದೆ. ಬಿಜೆಪಿ ನಾಯಕರು ಈಗಾಗಲೇ ಎನ್​ಡಿಎ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 400 ಸ್ಥಾನಗಳನ್ನು ಪಡೆಯುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಪಟ್ಟಕ್ಕೇರುವ ನಿರೀಕ್ಷೆಯಲ್ಲಿದ್ದಾರೆ. ಚುನಾವಣಾ ಪ್ರಚಾರ ಮುಗಿಸಿರುವ ಪ್ರಧಾನಿ ಮೋದಿ ಸದ್ಯಕ್ಕೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಧ್ಯಾನ ಮಾಡುತ್ತಿದ್ದಾರೆ. ಜೂನ್ 1ರ ಸಂಜೆಯವರೆಗೂ ಮೋದಿಯವರು ಅಲ್ಲಿ ಧ್ಯಾನ ನಿರತರಾಗಿರಲಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on