AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಜ್ವಲ್ ರೇವಣ್ಣಗೆ ದೊಡ್ಡ ಪ್ರಮಾಣದ ಶಿಕ್ಷೆ ಆಗಬೇಕು ಎಂದ ಮಾಜಿ ಸಿಎಂ ಬೊಮ್ಮಾಯಿ

ಪ್ರಜ್ವಲ್ ರೇವಣ್ಣಗೆ ದೊಡ್ಡ ಪ್ರಮಾಣದ ಶಿಕ್ಷೆ ಆಗಬೇಕು ಎಂದ ಮಾಜಿ ಸಿಎಂ ಬೊಮ್ಮಾಯಿ

ಸಂಜಯ್ಯಾ ಚಿಕ್ಕಮಠ
| Updated By: ಗಂಗಾಧರ​ ಬ. ಸಾಬೋಜಿ|

Updated on: May 30, 2024 | 10:40 PM

Share

ಬರೊಬ್ಬರಿ 34ದಿನಗಳ ಬಳಿಕ ಲೈಂಗಿಕ ದೌರ್ಜನ್ಯ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಭಾರತಕ್ಕೆ ವಾಪಸ್ ಆಗುತ್ತಿದ್ದಾರೆ. ಇಂದು ಮಧ್ಯರಾತ್ರಿ ಬೆಂಗಳೂರಿಗೆ ಬಂದು ಇಳಿಯಲಿದ್ದಾರೆ. ಈ ಕುರಿತಾಗಿ ಕೊಪ್ಪಳದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದು, ಪ್ರಜ್ವಲ್​ಗೆ ದೊಡ್ಡ ಪ್ರಮಾಣದ ಶಿಕ್ಷೆ ಆಗಬೇಕು. ಅವರು ಎಷ್ಟು ಹೇಯ ಕೃತ್ಯ ಮಾಡಿದ್ದಾರೋ ಅದನ್ನು ಪ್ರಚಾರ ಮಾಡಿದ್ದು ಅಷ್ಟೇ ತಪ್ಪು ಎಂದಿದ್ದಾರೆ.

ಕೊಪ್ಪಳ, ಮೇ 30: ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಪ್ರಕರಣದಲ್ಲಿ ನಾವು ಸ್ಪಷ್ಟವಿದ್ದೇವೆ. ಅವರು ಸಹ ಬರಬೇಕು, ಕಾನೂನು ಕ್ರಮಕ್ಕೆ ಒಳಗಾಗಬೇಕು. ದೊಡ್ಡ ಪ್ರಮಾಣದ ಶಿಕ್ಷೆ ಆಗಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್​ ಎಷ್ಟು ಹೇಯ ಕೃತ್ಯ ಮಾಡಿದ್ದಾರೋ ಅದನ್ನು ಪ್ರಚಾರ ಮಾಡಿದ್ದು ಅಷ್ಟೇ ತಪ್ಪು. ಹೀಗಾಗಿ ಎಸ್​​ಐಟಿ ಎರಡನ್ನೂ ಗಂಭೀರವಾಗಿ ಪರಿಗಣಿಸಬೇಕು. ಆದರೆ ಎರಡನ್ನೂ ಮಾಡುತ್ತಿಲ್ಲ. ಎಸ್​ಐಟಿ ದಿನಾಲು ಒಂದು ಸುದ್ದಿ ಹರಿಬಿಡುವ ಮೂಲಕ ಪ್ರಕರಣವನ್ನು ಜೀವಂತವಾಗಿ ಇಡಲು ಪ್ರಯತ್ನ ಮಾಡುತ್ತೆ ಎಂದು ಹೇಳಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.