Modi in Kanniyakumari: ಧ್ಯಾನಕ್ಕೂ ಮುನ್ನ ಕನ್ಯಾಕುಮಾರಿಯ ಭಗವತಿ ಅಮ್ಮನ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಸ್ವಾಮಿ ವಿವೇಕಾನಂದರು 'ಭಾರತ ಮಾತೆಯ' ಬಗ್ಗೆ ದಿವ್ಯ ದರ್ಶನ ಪಡೆದಿದ್ದಾರೆಂದು ನಂಬಲಾದ ಧ್ಯಾನ ಮಂಟಪದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜೂನ್ 1ರ ಸಂಜೆಯವರೆಗೆ ಧ್ಯಾನ ಮಾಡಲಿದ್ದಾರೆ. ಕನ್ಯಾಕುಮಾರಿಗೆ ಪ್ರಧಾನಿ ಮೋದಿ ಆಗಮಿಸಿದ ನಂತರ ವಿವೇಕಾನಂದ ರಾಕ್ ಸ್ಮಾರಕಕ್ಕೆ ತೆರಳುವ ಮೊದಲು ನಗರದ ಭಗವತಿ ಅಮ್ಮನ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ.
ಸಾಲು ಸಾಲಾಗಿ ಲೋಕಸಭೆ ಚುನಾವಣಾ ಪ್ರಚಾರಗಳಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇನ್ನೆರಡು ದಿನ ಸಂಪೂರ್ಣ ಧ್ಯಾನದಲ್ಲಿ ಮಗ್ನರಾಗಲಿದ್ದಾರೆ. ಅದಕ್ಕಾಗಿ ಈಗಾಗಲೇ ತಮಿಳುನಾಡಿನ ಕನ್ಯಾಕುಮಾರಿಗೆ (Kanniyakumari) ತಲುಪಿರುವ ಪ್ರಧಾನಿ ಮೋದಿ (PM Modi in Kanniyakumari) ಇಂದು ಸಂಜೆಯಿಂದ ಜೂನ್ 1ರವರೆಗೆ ಒಟ್ಟು 45 ಗಂಟೆಗಳ ಕಾಲ ಕನ್ಯಾಕುಮಾರಿಯ ಕಡಲ ಮಧ್ಯದಲ್ಲಿರುವ ವಿವೇಕಾನಂದ ಸ್ಮಾರಕದಲ್ಲಿ (Vivekananda Rock Memorial) ಧ್ಯಾನ ಮಾಡಲಿದ್ದಾರೆ. ಈ ವೇಳೆ ಮೋದಿ ಅವರು ಕೇವಲ ದ್ರವ ಆಹಾರವನ್ನು ಮಾತ್ರ ಸೇವಿಸಲಿದ್ದಾರೆ.
ಧ್ಯಾನ ಆರಂಭಿಸುವುದಕ್ಕೂ ಮುನ್ನ ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ಭಗವತಿ ಅಮ್ಮನ್ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳದಲ್ಲಿಯೇ ಇಂದು ಸಂಜೆಯಿಂದ ಜೂನ್ 1ರ ಸಂಜೆಯವರೆಗೆ ಪ್ರಧಾನಿ ಮೋದಿ ಧ್ಯಾನ ಮಂಟಪದಲ್ಲಿ ಧ್ಯಾನ ಮಾಡಲಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ