ದೇವರಿಗೆ ನಮಸ್ಕಾರ ಹಾಕಿ, ಪ್ಲಾಸ್ಟಿಕ್​ ಕವರ್​ನಲ್ಲಿ ಪ್ರಸಾದ ಹಾಕಿಕೊಳ್ಳುವಂತೆ ವಿಗ್ರಹ ಕದ್ದುಕೊಂಡು ಹೋದ!

ಉತ್ತರ ಪ್ರದೇಶದ ಮೀರತ್‌ನಲ್ಲಿ ದೇವಸ್ಥಾನದೊಳಕ್ಕೆ ಎಂಟ್ರಿ ಕೊಟ್ಟ ಸಂಸ್ಕಾರಿ, ಸದ್ಭಕ್ತನೊಬ್ಬ ಅಲ್ಲಿದ್ದ ವಿಗ್ರಹಕ್ಕೆ ನಮಸ್ಕರಿಸುತ್ತಾನೆ. ಅದಾದ ಮೇಲೆ ಅಲ್ಲಿದ್ದ ವಿಗ್ರಹವನ್ನು ಕದ್ದು, ಅದರೊಂದಿಗೆ ಓಡಿಹೋಗುತ್ತಾನೆ. ಇಡೀ ವೀಡಿಯೊ ವೈರಲ್ ಆಗಿದೆ ಈಗ.

ದೇವರಿಗೆ ನಮಸ್ಕಾರ ಹಾಕಿ, ಪ್ಲಾಸ್ಟಿಕ್​ ಕವರ್​ನಲ್ಲಿ ಪ್ರಸಾದ ಹಾಕಿಕೊಳ್ಳುವಂತೆ ವಿಗ್ರಹ ಕದ್ದುಕೊಂಡು ಹೋದ!
ಪ್ಲಾಸ್ಟಿಕ್​ ಕವರ್​ನಲ್ಲಿ ಪ್ರಸಾದ ಹಾಕಿಕೊಳ್ಳುವಂತೆ ವಿಗ್ರಹ ಕದ್ದುಕೊಂಡು ಹೋದ!

Updated on: Mar 13, 2024 | 11:47 AM

ಸಂಸ್ಕಾರಿ ಕಳ್ಳನ ಈ ಚಾಕಚಕ್ಯತೆ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಆ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ಉತ್ತರ ಪ್ರದೇಶದ ಮೀರತ್‌ನ (Uttar Pradesh, Meerut) ದೇವಸ್ಥಾನದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ದೇವರನ್ನು ಗೌರವ ಭಕ್ತಿಯಿಂದ ನಮಸ್ಕರಿಸುವ ಕಳ್ಳನೊಬ್ಬ ನಾಗದೇವರ ವಿಗ್ರಹವನ್ನು ಕದ್ದುಕೊಂಡು ಹೋಗಿದ್ದಾನೆ.

ಸಂಸ್ಕಾರಿ ಸದ್ಭಕ್ತ (Sanskari Chor) ಕಳ್ಳನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿ ಕಾಣಿಸಿಕೊಂಡಿದೆ. ದೇವಾಲಯ ಪ್ರವೇಶಿಸಿ, ಅಲ್ಲಿದ್ದ ದೇವರ ವಿಗ್ರಹದ (Temple Idol) ಮುಂದೆ ನಮಸ್ಕರಿಸುವ ಮೂಲಕ ದೇವತೆಗಳಿಗೆ ಗೌರವ ಸಲ್ಲಿಸುತ್ತಾನೆ. ಸುತ್ತಲೂ ಗಾಬರಿಯಿಂದ ನೋಡಿದನು ತ್ವರಿತವಾಗಿ ನಿರ್ಗಮಿಸುವ ಮೊದಲು ನಾಗದೇವರ ವಿಗ್ರಹವನ್ನು (Snake God) ಪ್ಲಾಸ್ಟಿಕ್​ ಕವರ್​​ನಲ್ಲಿ ತುರುಕಿಕೊಂಡು ಅಲ್ಲಿಂದ ಕಾಲ್ಕೀಳುತ್ತಾನೆ. ಘಟನೆಯ ವೀಡಿಯೋ ದೇವಸ್ಥಾನದ ಆವರಣದಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋ ನೋಡಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಪ್ರತಾಪ್ ಸಿಂಹ ಬೈ ಬರ್ತ್ ರೈಟರ್ ಇರಬಹುದು, ನಾನು ಫೈಟರ್: ಗುಡುಗಿದ ಪ್ರದೀಪ್ ಈಶ್ವರ್ 

Published On - 11:46 am, Wed, 13 March 24