ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ

Updated on: Apr 29, 2025 | 10:43 AM

ಜೀ ಕನ್ನಡದಲ್ಲಿ ಬರೋ ‘ಸರಿಗಮಪ’ ಶೋ ಸಾಕಷ್ಟು ಗಮನ ಸೆಳೆದಿದೆ. ಈ ಸೀಸನ್​ನಲ್ಲಿ ಮೋನಜ್ ಅವರು ಗಮನ ಸೆಳೆಯುತ್ತಾ ಇದ್ದಾರೆ. ಈ ಸೀಸನ್​ನಲ್ಲಿ ಅವರು ಎಲ್ಲರ ಮೆಚ್ಚುಗೆ ಪಡೆಯುತ್ತಿದ್ದಾರೆ. ದೆವ್ವದ ಹಾಡಿಗೆ ಸರಿಗಮಪ ಮನೋಜ್ ಭಯಬಿದ್ದಿದ್ದಾರೆ. ಆ ಫನ್ನಿ ವಿಡಿಯೋ ಇಲ್ಲಿದೆ.

‘ಸರಿಗಮಪ’ (Sarigamapa) ವೇದಿಕೆ ಮೇಲೆ ಒಂದು ಫನ್ನಿ ಘಟನೆ ನಡೆದಿದೆ. ಈ ಹಾಡಿನ ಗಾಯಕ ಮನೋಜ್ ಅವರು ವೇದಿಕೆ ಮೇಲೆ ಬಂದಿದ್ದಾರೆ. ದೆವ್ವದ ರೀತಿ ವೇಷ ಹಾಕಿ ಬಂದವರು ಮನೋಜ್​ನ ಹೆದರಿಸೋ ಪ್ರಯತ್ನ ಮಾಡಿದ್ದಾರೆ. ಆದರೆ, ಅವರು ಹೆದರಲೇ ಇಲ್ಲ. ಮನೋಜ್ ಅವರೇ ಹೆದರಿಸೋ ಧ್ವನಿ ಮಾಡುತ್ತಿದ್ದರು. ಆದರೆ, ಹಿಂಭಾಗದಲ್ಲಿ ದೆವ್ವದ ಧ್ವನಿ ಬರುತ್ತಿದ್ದಂತೆ ಅವರು ಹೆದರಿ ಹೋದರು. ‘ಸರಿಗಮಪ’ ವೇದಿಕೆ ಮೇಲೆ ನಡೆದ ಫನ್ನಿ ಘಟನೆಯ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More