AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸರಿಗಮಪ’ 100ನೇ ಸೀಸನ್​ಗೆ ಅನುಶ್ರೀ ಆ್ಯಂಕರಿಂಗ್ ಹೇಗಿರುತ್ತೆ? ಇಲ್ಲಿದೆ ಫನ್ನಿ ವಿಡಿಯೋ

ಅನುಶ್ರೀ ಅವರ 'ಸರಿಗಮಪ 100'ನೇ ಸೀಸನ್ ಆ್ಯಂಕರಿಂಗ್ ಅನುಕರಣೆಯ ವೀಡಿಯೋ ವೈರಲ್ ಆಗಿದೆ. ಅವರ ಜೀ ಕನ್ನಡದ ರಿಯಾಲಿಟಿ ಶೋಗಳಲ್ಲಿನ ಆ್ಯಂಕರಿಂಗ್ ಮತ್ತು ಗ್ಲಾಮರ್ ಅನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ‘ನಾನು ಎಷ್ಟೇ ಸೀಸನ್ ಆದರೂ ನೋಡೋದು ಅರ್ಜುನ್ ಜನ್ಯ ಅವರನ್ನೇ’ ಎಂದು ಫನ್ನಿ ಆಗಿ ಅನುಶ್ರೀ ಹೇಳಿದರು.

‘ಸರಿಗಮಪ’ 100ನೇ ಸೀಸನ್​ಗೆ ಅನುಶ್ರೀ ಆ್ಯಂಕರಿಂಗ್ ಹೇಗಿರುತ್ತೆ? ಇಲ್ಲಿದೆ ಫನ್ನಿ ವಿಡಿಯೋ
ಅನುಶ್ರೀ
 ಶ್ರೀಲಕ್ಷ್ಮೀ ಎಚ್
| Edited By: |

Updated on: Apr 26, 2025 | 6:30 AM

Share

ಆ್ಯಂಕರ್ ಅನುಶ್ರೀ (Anushree) ಅವರು ಹಲವು ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಅವರು ನಿರೂಪಣೆ ಮಾಡುತ್ತಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿದ್ದು, ಇದರ ಮೂಲಕ ಅನೇಕರ ಸಂದರ್ಶನ ಮಾಡುತ್ತಾರೆ. ನಟಿಯಾಗಿಯೂ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು ಎನ್ನಿ. ಅವರು ಹೆಚ್ಚು ಗಮನ ಸೆಳೆದಿರೋದು ಆ್ಯಂಕರಿಂಗ್ ಮೂಲಕ ಎಂಬುದು ಬಹುತೇಕರಿಗೆ ತಿಳಿದಿದೆ. ಹಾಗಾದರೆ, ಅನುಶ್ರೀ ‘ಸರಿಗಮಪ’ ಶೋನ 10ನೇ ಸೀಸನ್​ಗೆ ಹೇಗೆ ಆ್ಯಂಕರಿಂಗ್ ಮಾಡುತ್ತಿದ್ದರು ಎನ್ನುವ ಫನ್ನಿ ವಿಡಿಯೋ ವೈರಲ್ ಆಗಿದೆ. ಇದನ್ನು ಅನುಶ್ರೀ ಅವರೇ ಅನುಕರಣೆ ಮಾಡಿ ತೋರಿಸಿದ್ದಾರೆ.

ಜೀ ಕನ್ನಡದ ಯಾವುದೇ ರಿಯಾಲಿಟಿ ಶೋ ಇರಲಿ. ಅದಕ್ಕೆ ಅನುಶ್ರೀ ಅವರ ಆ್ಯಂಕರಿಂಗ್ ಮಾಡೋದು ಫಿಕ್ಸ್. ಜೀ ಕನ್ನಡದವರು ಕೂಡ ಅವರನ್ನು ಬಿಟ್ಟು ಬೇರೆಯವರಿಗೆ ಮಣೆ ಹಾಕೋದಿಲ್ಲ ಎನ್ನಬಹುದು. ಶೋನ ಕಳೆ ಹೆಚ್ಚಲು ಅನುಶ್ರೀ ಅವರ ಆ್ಯಂಕರ್ ಹಾಗೂ ಗ್ಲಾಮರ್ ಕೂಡ ಕಾರಣ. ಇದನ್ನು ಅನೇಕರು ಒಪ್ಪಿಕೊಳ್ಳುತ್ತಾರೆ. ಅನುಶ್ರೀ ಅವರು ‘ಸರಿಗಮಪ 100’ನೇ ಸೀಸನ್​ ಹೇಗೆ ಆ್ಯಂಕರಿಂಗ್ ಮಾಡುತ್ತಾರೆ ಎಂಬುದನ್ನು ತೋರಿಸಲಾಗಿದೆ.

ಇದನ್ನೂ ಓದಿ
Image
ಮದುವೆಯಲ್ಲಿ ಹಾಡೋಕೆ ಅರಿಜಿತ್ ಸಿಂಗ್ ಪಡೆಯೋ ಹಣ ಎಷ್ಟು?
Image
ನಟಿಯಾಗೋ ಪ್ಲ್ಯಾನ್ ಇರಲಿಲ್ಲ; ರಚಿತಾ ನಟಿ​ ಆಗಿರದಿದ್ದರೆ ಏನಾಗಿರುತ್ತಿದ್ದರು
Image
ಕಾರ್ತಿಕ್ ಖಾತೆಯಿಂದ ಫೋಟೋ ಕದ್ದು ಪೋಸ್ಟರ್ ಮಾಡಿದ ಕರಣ್ ಜೋಹರ್
Image
‘ಕೆಜಿಎಫ್ 2’ ಜೋಡಿನ ಬಾಲಿವುಡ್​ನಲ್ಲಿ ಒಟ್ಟಿಗೆ ತರಲು ನಡೆದಿತ್ತು ಪ್ಲ್ಯಾನ್
View this post on Instagram

A post shared by Zee Kannada (@zeekannada)

‘ಅನುಶ್ರೀಗೆ 120 ವರ್ಷ ವಯಸ್ಸು. ಸರಿಗಮಪ 100ನೇ ಸೀಸನ್. ಹೇಗೆ ಆ್ಯಂಕರಿಂಗ್ ಮಾಡುತ್ತೀರಿ’ ಎಂದು ವಿಜಯ್ ಪ್ರಕಾಶ್ ಅವರು ‘ಸರಿಗಮಪ’ ವೇದಿಕೆ ಮೇಲೆ ಕೇಳಿದರು. ಈ ವೇಳೆ ಹಣ್ಣಣ್ಣು ಮುದುಕಿ ಆ್ಯಂಕರಿಂಗ್ ಮಾಡಿ ತೋರಿಸುವಂತೆ ಅವರು ಮಾಡಿ ತೋರಿಸಯೇ ಬಿಟ್ಟರು. ಈ ವಿಡಿಯೋ ಸಖತ್ ಫನ್ ಆಗಿತ್ತು. ಅನುಶ್ರೀ ಅವರನ್ನು ಆ್ಯಕ್ಟಿಂಗ್ ನೋಡಿ ಅನೇಕರು ಮೆಚ್ಚಿಕೊಂಡರು. ಪರಸ್ಪರ ಕಾಲೆಳೆದುಕೊಂಡರು. ‘ನಾನು ಎಷ್ಟೇ ಸೀಸನ್ ಆದರೂ ನೋಡೋದು ಅರ್ಜುನ್ ಜನ್ಯ ಅವರನ್ನೇ’ ಎಂದು ಫನ್ನಿ ಆಗಿ ಅನುಶ್ರೀ ಹೇಳಿದರು.

ಇದನ್ನೂ ಓದಿ: ಅನುಶ್ರೀಗೆ ಕೂಡಿಬಂತು ಕಂಕಣ ಭಾಗ್ಯ, ಮದುವೆಯ ಸುಳಿವು ಕೊಟ್ಟ ನಟಿ

ಅನುಶ್ರೀ ಅವರು ಇನ್ನೂ ವಿವಾಹ ಆಗಿಲ್ಲ. ಅವರ ಮದುವೆ ಯಾವಾಗ ಎನ್ನುವ ಪ್ರಶ್ನೆ ಅನೇಕ ಬಾರಿ ಕೇಳಿ ಬಂದಿದ್ದು ಇದೆ. ಆದರೆ, ಇದಕ್ಕೆ ಅವರ ಕಡೆಯಿಂದ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಇತ್ತೀಚೆಗೆ ಲೈವ್​ನಲ್ಲಿ ಮಾತನಾಡುವಾಗ ಈ ವರ್ಷವೇ ವಿವಾಹ ಆಗುತ್ತೇನೆ ಎಂದು ಅವರು ಹೇಳಿಕೊಂಡಿದ್ದರು. ಈ ಮೂಲಕ ಕುತೂಹಲ ಹುಟ್ಟುಹಾಕಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.