ಅನುಶ್ರೀಗೆ ಕೂಡಿಬಂತು ಕಂಕಣ ಭಾಗ್ಯ, ಮದುವೆಯ ಸುಳಿವು ಕೊಟ್ಟ ನಟಿ
Anchor Anushree: ನಟಿ, ಸ್ಟಾರ್ ನಿರೂಪಕಿ ಅನುಶ್ರೀ ಅವರ ಮದುವೆ ಬಗ್ಗೆ ಆಗಾಗ್ಗೆ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಆದರೆ ಪ್ರತಿಬಾರಿಯೂ ಅದು ಗಾಳಿ ಸುದ್ದಿಯಾಗುತ್ತದೆ. ಇದೀಗ ‘ವಿದ್ಯಾಪತಿ’ ಸಿನಿಮಾಕ್ಕಾಗಿ ಅನುಶ್ರೀ ಮಾಡಿದ ಇನ್ಸ್ಟಾ ಲೈವ್ನಲ್ಲಿ ಸ್ವತಃ ಅನುಶ್ರೀ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮದುವೆ ಯಾವಾಗ ಎಂಬುದನ್ನು ಅನುಶ್ರೀ ಅವರೇ ಹೇಳಿದ್ದಾರೆ.

ಆಂಕರ್ ಅನುಶ್ರೀ (Ancor Anushree), ಮೋಸ್ಟ್ ಎಲಿಜಿಬೆಲ್ ಸಿಂಗಲ್ ನಟಿಯರಲ್ಲಿ ಒಬ್ಬರು. ಬಹಳ ಸಮಯದಿಂದಲೂ ಅವರ ಮದುವೆಯ ಗಾಳಿ ಸುದ್ದಿಗಳು ಹರಿದಾಡುತ್ತಲೇ ಇವೆ. ಆದರೆ ಈ ವರೆಗೂ ಅವರು ಸಿಂಗಲ್ ಆಗಿಯೇ ಇದ್ದಾರೆ. ಅನುಶ್ರೀಗೆ ಅವರ ಅಭಿಮಾನಿಗಳು ಸಹ ಹಲವು ಬಾರಿ ಮದುವೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ, ಆದರೆ ಅನುಶ್ರೀ ಅವರದ್ದು ಪ್ರತಿಬಾರಿಯೂ ಹಾರಿಕೆಯ ಉತ್ತರವೇ ಆದರೆ ಈ ಬಾರಿ ಅನುಶ್ರೀ ಮದುವೆಯ (Marriage) ಸುಳಿವು ನೀಡಿದ್ದಾರೆ. ಇದೇ ವರ್ಷದಲ್ಲಿ ಮದುವೆ ಆಗುತ್ತಿರುವುದಾಗಿ ಹೇಳಿದ್ದಾರೆ ಅನುಶ್ರೀ. ಆದರೆ ವರ ಯಾರು?
ಅನುಶ್ರೀ ಅವರು ‘ವಿದ್ಯಾಪತಿ’ ಸಿನಿಮಾಕ್ಕಾಗಿ ವಿಶೇಷ ಇನ್ಸ್ಟಾಗ್ರಾಂ ಲೈವ್ ಒಂದನ್ನು ಮಾಡಿದ್ದರು. ಲೈವ್ನಲ್ಲಿ ಹಲವರು ಕಮೆಂಟ್ ಮಾಡಿ ಪ್ರಶ್ನೆಗಳನ್ನು ಕೇಳಿದರು. ಈ ವೇಳೆ ಹಲವರು ಅನುಶ್ರೀ ಅವರನ್ನು ಮದುವೆ ಬಗ್ಗೆ ಸಹ ಪ್ರಶ್ನೆ ಮಾಡಿದ್ದಾರೆ. ‘ವಿದ್ಯಾಪತಿ’ ಸಿನಿಮಾದ ನಾಯಕ ನಟ ನಾಗಭೂಷಣ್ ಸಹ ಅನುಶ್ರೀ ಅವರಿಗೆ ಇನ್ಸ್ಟಾಗ್ರಾಂ ಲೈವ್ನಲ್ಲಿ ಅನುಶ್ರೀ ಅವರಿಗೆ ಮದುವೆ ಬಗ್ಗೆ ಪ್ರಶ್ನೆ ಮಾಡಿದರು, ಈ ವೇಳೆ ಅವರಿಗೆ ಉತ್ತರ ನೀಡುತ್ತಾ, ತಾವು ಇದೇ ವರ್ಷ ಮದುವೆ ಆಗುವುದಾಗಿ ಹೇಳಿಕೊಂಡಿದ್ದಾರೆ.
ಮಾರ್ಚ್ನಲ್ಲಿ ಸಿಹಿ ಸುದ್ದಿ ಕೊಡುವುದಾಗಿ ಅನುಶ್ರೀ ಅವರು ಈ ಹಿಂದೆ ಹೇಳಿಕೊಂಡಿದ್ದರು. ಈಗ ಮತ್ತೆ ಮದುವೆ ಬಗ್ಗೆ ಮಾತನಾಡಿ, ಈ ವರ್ಷ ಮುಗಿಯುವುದರ ಒಳಗಾಗಿ ತಾವು ಮದುವೆ ಆಗಿಯೇ ತೀರುವುದಾಗಿ ಅನುಶ್ರೀ ಹೇಳಿಕೊಂಡಿದ್ದಾರೆ. ಆದರೆ ಅನುಶ್ರೀ ಯಾರನ್ನು ಮದುವೆ ಆಗಲಿದ್ದಾರೆ ಎಂಬ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ ಆದರೆ ಈ ವರ್ಷ ಮದುವೆ ಆಗುವುದಾಗಿ ಮಾತ್ರ ಹೇಳಿದ್ದಾರೆ.
ಇದನ್ನೂ ಓದಿ:‘ಪುನೀತ್ ಕೊಟ್ಟ ಪ್ರೀತಿಯ ಭಿಕ್ಷೆ’; ಅಪ್ಪು ಬಗ್ಗೆ ಅನುಶ್ರೀ ಪ್ರೀತಿಯ ಮಾತು
ಅನುಶ್ರೀ ನಟಿಯಾಗಿ ಎಂಟ್ರಿ ಕೊಟ್ಟು ಈಗ ಕಿರುತೆರೆಯ ಸ್ಟಾರ್ ನಿರೂಪಕಿ ಆಗಿದ್ದಾರೆ. ಕೆಲವು ಟಾಪ್ ರಿಯಾಲಿಟಿ ಶೋಗಳನ್ನು ಅವರು ಅದ್ಭುತವಾಗಿ ನಿರೂಪಣೆ ಮಾಡುತ್ತಾರೆ. ಹಲವು ಸಿನಿಮಾ ಕಾರ್ಯಕ್ರಮ, ಸರ್ಕಾರಿ ಕಾರ್ಯಕ್ರಮಗಳಿಗೂ ಸಹ ಅನುಶ್ರೀ ನಿರೂಪಣೆ ಮಾಡುತ್ತಾರೆ. ಯೂಟ್ಯೂಬ್ ಚಾನೆಲ್ ಸಹ ನಡೆಸುವ ಅನುಶ್ರೀ, ಸಿನಿಮಾ ನಟ-ನಟಿಯರ ಸಂದರ್ಶನಗಳನ್ನು ಮಾಡುತ್ತಿರುತ್ತಾರೆ. ಈಗ ನಾಗಭೂಷಣ್, ಮಲೈಕಾ ನಟಿಸಿ ಡಾಲಿ ಧನಂಜಯ್ ನಿರ್ಮಾಣ ಮಾಡಿರುವ ‘ವಿದ್ಯಾಪತಿ’ ಸಿನಿಮಾದ ಪ್ರಚಾರಕ್ಕಾಗಿ ಇನ್ಸ್ಟಾಗ್ರಾಂ ಲೈವ್ನಲ್ಲಿ ಸಂದರ್ಶನ ಮಾಡಿದ್ದಾರೆ ಅನುಶ್ರೀ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ