‘ಲಕ್ಷ್ಮೀ ಬಾರಮ್ಮ’ ಕೊನೆಯ ಎಪಿಸೋಡ್; ಆಕ್ರೋಶ ಹೊರ ಹಾಕುತ್ತಲೇ ಬೆಟ್ಟದಿಂದ ಬಿದ್ದ ಕಾವೇರಿ
‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯು ಏಪ್ರಿಲ್ 11ರಂದು ಅಂತಿಮ ಸಂಚಿಕೆಯೊಂದಿಗೆ ಕೊನೆಗೊಳ್ಳಲಿದೆ. 600 ಕ್ಕೂ ಹೆಚ್ಚು ಸಂಚಿಕೆಗಳನ್ನು ಪೂರ್ಣಗೊಳಿಸಿರುವ ಈ ಧಾರಾವಾಹಿಯ ಅಂತ್ಯದಲ್ಲಿ ಆಘಾತಕಾರಿ ಟ್ವಿಸ್ಟ್ ಇರುವುದಾಗಿ ಹೇಳಲಾಗಿದೆ. ಕಾವೇರಿಯ ಆತ್ಮಹತ್ಯಾ ಪ್ರಯತ್ನ ಮತ್ತು ಅದರ ಪರಿಣಾಮಗಳು ಕಥಾವಸ್ತುವಿನ ಮುಖ್ಯ ಅಂಶಗಳಾಗಿವೆ .

ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಾ ಇದ್ದ ‘ಲಕ್ಷ್ಮೀ ಬಾರಮ್ಮ’ (Lakshmi Baramma) ಧಾರಾವಾಹಿ ಏಪ್ರಿಲ್ 11ರಂದು ತನ್ನ ಕೊನೆಯ ಎಪಿಸೋಡ್ನ ಪ್ರಸಾರ ಮಾಡಲಿದೆ. ಈ ಧಾರಾವಾಹಿ ಈವರೆಗೆ ಬರೋಬ್ಬರಿ 600ಕ್ಕೂ ಅಧಿಕ ಎಪಿಸೋಡ್ಗಳನ್ನು ಪೂರ್ಣಗೊಳಿಸಿದೆ ಅನ್ನೋದು ವಿಶೇಷ. ಈ ಧಾರಾವಾಹಿ ಯಾವ ರೀತಿಯಲ್ಲಿ ಕೊನೆಯಾಗಲಿದೆ ಎನ್ನುವ ಕುತೂಹಲ ಮೂಡಿದೆ. ಈ ಕುತೂಹಲ ಹೆಚ್ಚಿಸುವಂಥ ಪ್ರೋಮೋನ ರಿಲೀಸ್ ಮಾಡಲಾಗಿದೆ. ಇದರಲ್ಲಿ ಒಂದು ಶಾಕಿಂಗ್ ಟ್ವಿಸ್ಟ್ನ ಕೊಡಲಾಗಿದೆ.
ಕಥಾ ನಾಯಕ ವೈಷ್ಣವ್ ಮೇಲೆ ಆತನ ತಾಯಿ ಕಾವೇರಿಗೆ ಎಲ್ಲಿಲ್ಲದ ಪ್ರೀತಿ. ಮಗನನ್ನು ಬಹಳ ಮುದ್ದಿನಿಂದ ಬೆಳೆಸಿದ್ದಳು. ಮಗ ತನ್ನ ಕೈತಪ್ಪಿ ಹೋಗಬಾರದು ಎನ್ನುವ ಕಾರಣಕ್ಕೆ ಮುಗ್ಧಳಾಗಿದ್ದ ಲಕ್ಷ್ಮೀಗೆ ವಿವಾಹ ಮಾಡಿಕೊಟ್ಟಿದ್ದಳು. ಆದರೆ, ಅಲ್ಲಾಗಿದ್ದೇ ಬೇರೆ. ವೈಷ್ಣವ್ ದಿನ ಕಳೆದಂತೆ ಲಕ್ಷ್ಮೀ ಪ್ರೇಮ ಪಾಶಕ್ಕೆ ಸಿಲುಕುತ್ತಾ ಹೋದನು. ಇದರಿಂದ ಕಾವೇರಿ ಸಾಕಷ್ಟು ಚಿಂತೆಗೆ ಒಳಗಾಗಿದ್ದಾಳೆ. ಮುಂದೇನು ಎನ್ನುವ ಪ್ರಶ್ನೆ ಅವಳನ್ನು ಕಾಡುತ್ತಾ ಇತ್ತು. ಈಗ ಅವಳಿಗೆ ಆತ್ಮಹತ್ಯೆ ಒಂದೇ ಉಳಿದಿರುವ ದಾರಿ ಎಂಬಂತಾಗಿದೆ.
View this post on Instagram
‘ನಾನು ಏನು ನಡೆಯಬಾರದು ಎಂದುಕೊಂಡಿದ್ದೆನೋ ಅದೇ ನಡೆದು ಹೋಯಿತು. ನನ್ನ ಮಗ ನನ್ನ ಕೈಯಿಂದ ಬಿಟ್ಟು ಹೋಗಬಾರದು ಎಂಬ ಕಾರಣಕ್ಕೆ ನಿನ್ನ ನನ್ನ ಸೊಸೆ ಮಾಡಿಕೊಂಡೆ. ಆದರೆ, ನೀನೇನು ಮಾಡಿದೆ, ನನ್ನ ಮಗನ ಕಿತ್ತುಕೊಂಡೆ. ಪುಟ್ಟ ನಿನ್ನ ಅಮ್ಮ ಯಾವಾಗಲೂ ನಿನ್ನ ಪ್ರೀತುಸತ್ತಾ ಇದ್ದಳು, ಪ್ರೀತಿಸ್ತಾನೆ ಇರ್ತಾಳೆ’ ಎಂದು ಹೇಳುವಾಗ ಮೇಲಿದ್ದ ಎಲ್ಲರೂ ಪ್ರಪಾತದ ಕಡೆ ಹೋಗದಂತೆ ಮನವಿ ಮಾಡಿಕೊಳ್ಳುತ್ತಾ ಇದ್ದರು. ಆದರೆ, ಕಾವೇರಿ ಮಾತು ಕೇಳಲೇ ಇಲ್ಲ.
ಇದನ್ನೂ ಓದಿ: ‘ಲಕ್ಷ್ಮೀ ಬಾರಮ್ಮ’ ಅಂತ್ಯದ ಬಗ್ಗೆ ಅಧಿಕೃತ ಘೋಷಣೆ; ಹೊಸ ಧಾರಾವಾಹಿ ‘ಮುದ್ದು ಸೊಸೆ’ ಯಾವಾಗಿನಿಂದ?
ಈ ವೇಳೆ ಕಾವೇರಿ ಕಾಲಿಗೆ ಕಲ್ಲೊಂದು ತಾಗಿದೆ. ಆಗ ಅವಳು ಬೆಟ್ಟದಿಂದ ಉರುಳುರುಳಿ ಹೋಗಿದ್ದಾಳೆ. ಬಹುತೇಕ ಧಾರಾವಾಹಿಗಳ ಅಂತ್ಯದಲ್ಲಿ ವಿಲನ್ಗಳಿಗೆ ಜ್ಞಾನೋದಯ ಮಾಡುವ ಮೂಲಕ ಧಾರಾವಾಹಿಯನ್ನು ಕೊನೆ ಮಾಡಲಾಗುತ್ತದೆ. ಆದರೆ, ‘ಲಕ್ಷ್ಮೀ ಬಾರಮ್ಮ’ದಲ್ಲಿ ವಿಲನ್ ಸಾಯುವ ಮೂಲಕ ಧಾರಾವಾಹಿ ಕೊನೆ ಆಗುತ್ತದೆಯೇ ಎನ್ನುವ ಪ್ರಶ್ನೆ ಕೆಲವರಿಗೆ ಮೂಡಿದೆ. ಇನ್ನೂ ಕೆಲವರಿಗೆ ಅವರನ್ನು ಆಸ್ಪತ್ರೆಗೆ ಸೇರಿಸಿ, ಮನ ಪರಿವರ್ತನೆ ಮಾಡೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಎಲ್ಲದಕ್ಕೂ ಶುಕ್ರವಾರದ (ಏಪ್ರಿಲ್ 11) ಎಪಿಸೋಡ್ನಲ್ಲಿ ಉತ್ತರ ಸಿಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.