ಜೀ ಕನ್ನಡದಲ್ಲಿ ‘ಕರ್ಣ’ ಧಾರಾವಾಹಿ ಯಾವಾಗಿನಿಂದ; ಕೊನೆ ಆಗಲಿರೋ ಧಾರಾವಾಹಿ ಯಾವುದು?
ಕಿರಣ್ ರಾಜ್ ಅವರು ‘ಕನ್ನಡತಿ’ ಧಾರಾವಾಹಿ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡವರು.. ಅವರಿಗೆ ಸಾಕಷ್ಟು ಖ್ಯಾತಿಯನ್ನು ಈ ಧಾರಾವಾಹಿ ತಂದುಕೊಟ್ಟಿತ್ತು. ಆ ಬಳಿಕ ಅವರಿಗೆ ಸಿನಿಮಾ ರಂಗದಿಂದ ಆಫರ್ಗಳು ಬಂದಿದ್ದು ಗೊತ್ತೇ ಇದೆ. ಅವರು ಈಗ ಮತ್ತೆ ಕಿರುತೆರೆಗೆ ಮರಳಿದ್ದಾರೆ .

‘ಕನ್ನಡತಿ’ ಖ್ಯಾತಿಯ ಕಿರಣ್ ರಾಜ್ (Kiran Raj) ಅವರು ಮತ್ತೆ ಕಿರುತೆರೆಗೆ ಮರಳುತ್ತಾರೆ ಎಂದಾಗಲೇ ಎಲ್ಲರಲ್ಲೂ ಕುತೂಹಲ ಮೂಡಿತ್ತು. ಈಗ ಅವರು ‘ಕರ್ಣ’ ಧಾರಾವಾಹಿ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಈ ಧಾರಾವಾಹಿ ಪ್ರಸಾರ ಕಾಣುವುದು ಯಾವಾಗ ಎಂಬ ಪ್ರಶ್ನೆ ಮೂಡಿದೆ. ‘ಕರ್ಣ’ ಧಾರಾವಾಹಿ ಯಾವಾಗ ಪ್ರಸಾರ ಕಾಣಲಿದೆ ಎಂಬಿತ್ಯಾದಿ ಪ್ರಶ್ನೆಗಳು ಮೂಡಿವೆ. ಇದಕ್ಕೆ ಜೀ ಕನ್ನಡದ ಕಡೆಯಿಂದ ಅಧಿಕೃತ ಮಾಹಿತಿ ಹೊರ ಬೀಳಲಿ ಎಂದು ಫ್ಯಾನ್ಸ್ ಕಾಯುತ್ತಾ ಇದ್ದಾರೆ. ನಿತ್ಯವೂ ರಾತ್ರಿ 8 ಗಂಟೆಗೆ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಪ್ರೇಕ್ಷಕರ ಸೂರೆಗೊಂಡಿದೆ. ಈ ಕಾರಣಕ್ಕೆ ಪ್ರತಿ ವಾರದ ಟಿಆರ್ಪಿಯಲ್ಲಿ ಈ ಧಾರಾವಾಹಿಗೆ ಟಾಪ್ 3ನಲ್ಲಿ ಒಂದಲ್ಲ ಒಂದು ಸ್ಥಾನ ಸಿಕ್ಕೇ ಸಿಗುತ್ತದೆ. ಹೀಗಿರುವಾಗ ಧಾರಾವಾಹಿಯನ್ನು ಕೊನೆ ಮಾಡುವ ಸಾಹಸಕ್ಕೆ ಯಾರೂ ಹೋಗುವುದಿಲ್ಲ. ಹೀಗಾಗಿ, ಇದರ ಸಮಯದಲ್ಲಿ ಬದಲಾವಣೆ ಆಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
‘ಲಕ್ಷ್ಮೀ ನಿವಾಸ’ ಧಾರಾವಾಹಿಯು ಈಗ ಒಂದು ಗಂಟೆ ಪ್ರಸಾರ ಕಾಣುತ್ತಿದೆ. ಈಗ ಇದನ್ನು ಅರ್ಧ ಗಂಟೆಗೆ ಇಳಿಸಲು ಪ್ಲ್ಯಾನ್ ನಡೆದಿದೆ ಎನ್ನಲಾಗಿದೆ. ಹೀಗಾಗಿ 8 ಗಂಟೆಗೆ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಪ್ರಸಾರ ಕಂಡರೆ, ಇನ್ನರ್ಧ ಗಂಟೆಗೆ ‘ಕರ್ಣ’ ಧಾರಾವಾಹಿ ಪ್ರಸಾರ ಕಾಣಲಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗುವ ಸಾಧ್ಯತೆ ಇದೆ. ಕಿರಣ್ ರಾಜ್ ಧಾರಾವಾಹಿಗೆ ನಾಯಕಿ ಯಾರು ಎಂಬುದು ಕೂಡ ಇನ್ನೂ ರಿವೀಲ್ ಆಗಿಲ್ಲ.
ಇದನ್ನೂ ಓದಿ: Kiran Raj: ಜೀ ಕನ್ನಡಕ್ಕೆ ಬಂದ ಕಿರಣ್ ರಾಜ್; ಬರುತ್ತಿದೆ ಹೊಸ ಧಾರಾವಾಹಿ ‘ಕರ್ಣ’
ಕಿರಣ್ ರಾಜ್ ಅವರು ಕಲರ್ಸ್ ಕನ್ನಡದ ‘ಕನ್ನಡತಿ’ ಧಾರಾವಾಹಿ ಮೂಲಕ ಫೇಮಸ್ ಆದರು. ಆ ಬಳಿಕ ಅವರು ಹಿರಿತೆರೆಯಲ್ಲಿ ಬ್ಯುಸಿ ಆದರು. ಕೆಲವು ಕನ್ನಡದ ಸಿನಿಮಾಗಳನ್ನು ಮಾಡಿದರು. ಈಗ ಅವರು ಮತ್ತೆ ಕಿರುತೆರೆಯಲ್ಲಿ ಬ್ಯುಸಿ ಆಗುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಅವರು ವೈದ್ಯನ ಪಾತ್ರ ಮಾಡುತ್ತಿದ್ದಾರೆ. ಕಥಾ ನಾಯಕ ಕರ್ಣ ದೊಡ್ಡ ಗೈನಾಕಾಲಜಿಸ್ಟ್ ಆದರೂ, ಕುಟುಂಬಕ್ಕಾಗಿ ಸಾಕಷ್ಟು ಹೋರಾಡುತ್ತಾನೆ. ಈ ರೀತಿಯಲ್ಲಿ ಕಥೆ ಮೂಡಿ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:53 am, Wed, 2 April 25