ಬಳ್ಳಾರಿಯ ಸೀರೆ ಕಳ್ಳಿಯರು ಕಳ್ಳತನ ಮಾಡುವ ಶೈಲಿ ವಿನೂತನ ಮತ್ತು ವಿಶಿಷ್ಟ!

Edited By:

Updated on: Jul 20, 2022 | 5:02 PM

ಇಬ್ಬರು ಮಹಿಳೆಯರು ಅಂಗಡಿ ಮಾಲೀಕರು ಮತ್ತು ಸೆಲ್ಸ್ಗರ್ಲ್ ಗಳ ಗಮನ ಬೇರೆಡೆ ಹರಿಸಿ ದುಬಾರಿ ಸೀರೆಗಳನ್ನು ಕದ್ದೊಯ್ಯುವ ರೀತಿ ನೋಡಿದರೆ ನೀವು ದಂಗಾಗುತ್ತೀರಿ.

ಬಳ್ಳಾರಿ: ಇಂಥದೊಂದು ವಿಡಿಯೋವನ್ನು ಇದಕ್ಕೂ ಮೊದಲು ಕೂಡ ತೋರಿಸಿದ್ದುಂಟು. ಬಳ್ಳಾರಿ ನಗರದಲ್ಲಿ ತಮ್ಮದೇ ಆದ ಶೈಲಿಯಲ್ಲಿ ಸೀರೆ ಕಳುವು ಮಾಡುವ ಮಹಿಳೆಯರ ತಂಡವಿದೆ. ಬಳ್ಳಾರಿಯ (Ballari) ಗಾಂಧಿನಗರ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ವಿಜಯಶ್ರೀ (Vijayshree) ಸೀರೆ ಅಂಗಡಿಯಲ್ಲಿ ಇಬ್ಬರು ಮಹಿಳೆಯರು ಅಂಗಡಿ ಮಾಲೀಕರು ಮತ್ತು ಸೆಲ್ಸ್ಗರ್ಲ್ ಗಳ ಗಮನ ಬೇರೆಡೆ ಹರಿಸಿ ದುಬಾರಿ (expensive) ಸೀರೆಗಳನ್ನು ಕದ್ದೊಯ್ಯುವ ರೀತಿ ನೋಡಿದರೆ ನೀವು ದಂಗಾಗುತ್ತೀರಿ.