ಸರಿಗಮ ವಿಜಿಗೆ ಮನೆಯ ಬಳಿ ಅಂತಿಮ ಶ್ರದ್ಧಾಂಜಲಿ ಸಲ್ಲಿಸಿದ ಮಗ, ಸೊಸೆ ಮತ್ತು ಮೊಮ್ಮಕ್ಕಳು
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ನಟ ಮತ್ತು ನಿರ್ದೇಶಕ ಸರಿಗಮ ವಿಜಿ ನಿನ್ನೆ ಬೆಳಗ್ಗೆ ಸುಮಾರು 9.30ಕ್ಕೆ ಯಶವಂತಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. 269 ಚಿತ್ರಗಳಲ್ಲಿ ನಟಿಸಿದ್ದ ಅವರು ಹಲವಾರು ಚಿತ್ರಗಳಿಗೆ ಸಹ ನಿರ್ದೇಶಕನಾಗಿ ದುಡಿದಿದ್ದರು. ಅಗಲಿದ ಕಲಾವಿದನ ಅಂತ್ಯಕ್ರಿಯೆ ಇದು ಮಧ್ಯಾಹ್ನ ಚಾಮರಾಜಪೇಟೆಯ ಟಿಆರ್ ಮಿಲ್ ಬಳಿಯಿರುವ ಚಿತಾಗಾರದಲ್ಲಿ ನಡೆಯಲಿದೆ.
ಬೆಂಗಳೂರು: ಸರಿಗಮ ವಿಜಿ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ನಟನ ಮಹಾಲಕ್ಷ್ಮಿಪುರಂ ನಿವಾಸದಿಂದ ಜೆಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರಕ್ಕೆ ತರಲಾಗಿದೆ. ಅದಕ್ಕೆ ಮೊದಲು ವಿಜಯ್ ಅವರ ಮಗ ಮತ್ತು ಮೊಮ್ಮಕ್ಕಳು ಪೂಜೆಯನ್ನು ನೆರವೇರಿಸಿದರು. ವಿಜಿಯವರ ಸ್ನೇಹಿತರು, ಆಪ್ತರು ಮತ್ತು ಬಂಧು ಬಳಗದವರು ಮಗನಿಗೆ ಸಾಂತ್ವನ ಹೇಳುತ್ತಿರುವ ದೃಶ್ಯಗಳನ್ನು ನೋಡಬಹುದು. ವಿಜಿಯ ಮೊಮ್ಮಕ್ಕಳು ಅಗಲಿದ ತಾತನಿಗೆ ಶ್ರದ್ಧಾಂಜಲಿಯ ಭಾಗವಾಗಿ ಊದಿನಕಡ್ಡಿ ಹಚ್ಚಿ ಪಾರ್ಥಿವ ಶರೀರದ ಸುತ್ತು ಹಾಕಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸರಿಗಮ ವಿಜಿ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಇನ್ನಿತರೆ ಮಾಹಿತಿ