AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಆತ್ಮಹತ್ಯೆ ಮಾಡಿಕೊಳ್ಳಲೆಂದು ಕಟ್ಟಡದ 13ನೇ ಮಹಡಿಯಿಂದ ಮೂರು ಬಾರಿ ಜಿಗಿದರೂ ಬದುಕಿದ ಕಾರ್ಮಿಕ

Video: ಆತ್ಮಹತ್ಯೆ ಮಾಡಿಕೊಳ್ಳಲೆಂದು ಕಟ್ಟಡದ 13ನೇ ಮಹಡಿಯಿಂದ ಮೂರು ಬಾರಿ ಜಿಗಿದರೂ ಬದುಕಿದ ಕಾರ್ಮಿಕ

ನಯನಾ ರಾಜೀವ್
|

Updated on:Jan 16, 2025 | 12:13 PM

Share

ತಾನೊಂದು ಬಗೆದರೆ ದೈವವೊಂದು ಬಗೆದಂತೆ ಎನ್ನುವ ಗಾದೆಮಾತಿದೆ. ಅದೇ ರೀತಿ ಆಯಸ್ಸು ಗಟ್ಟಿ ಇದ್ದರೆ ಎಲ್ಲಿಂದ ಬಿದ್ದರೂ ಪ್ರಾಣಕ್ಕೆ ಅಪಾಯವಾಗುವುದಿಲ್ಲ, ಅದೇ ಗ್ರಹಚಾರ ಕೆಟ್ಟಿದ್ದರೆ ಮನೆಯಲ್ಲಿ ಕುಳಿತಲ್ಲಿಯೇ ಸಾವು ಸಂಭವಿಸಬಹುದು. ಮುಂಬೈನ ವಿಖ್ರೋಲಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ 13 ನೇ ಮಹಡಿಯಿಂದ ಹಾರಿ ಕಾರ್ಮಿಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದು, ಆತನ ಪ್ರಯತ್ನ ಸಂಪೂರ್ಣ ವಿಫಲವಾಗಿದೆ. ಸಾಯಲು ನಿರ್ಧರಿಸಿದ್ದ ಕಾರ್ಮಿಕ, ಮತ್ತೆ ಎರಡು ಬಾರಿ ಕೆಳಗೆ ಜಿಗಿದಿದ್ದಾನೆ, ಆದರೆ ಸುರಕ್ಷತಾ ಜಾಲಕ್ಕೆ ಸಿಕ್ಕಿಹಾಕಿಕೊಂಡಿದ್ದರಿಂದ ಸುರಕ್ಷಿತವಾಗಿದ್ದಾರೆ. ಈ ಸಂಪೂರ್ಣ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ.

ತಾನೊಂದು ಬಗೆದರೆ ದೈವವೊಂದು ಬಗೆದಂತೆ ಎನ್ನುವ ಗಾದೆಮಾತಿದೆ. ಅದೇ ರೀತಿ ಆಯಸ್ಸು ಗಟ್ಟಿ ಇದ್ದರೆ ಎಲ್ಲಿಂದ ಬಿದ್ದರೂ ಪ್ರಾಣಕ್ಕೆ ಅಪಾಯವಾಗುವುದಿಲ್ಲ, ಅದೇ ಗ್ರಹಚಾರ ಕೆಟ್ಟಿದ್ದರೆ ಮನೆಯಲ್ಲಿ ಕುಳಿತಲ್ಲಿಯೇ ಸಾವು ಸಂಭವಿಸಬಹುದು.

ಮುಂಬೈನ ವಿಖ್ರೋಲಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ 13 ನೇ ಮಹಡಿಯಿಂದ ಹಾರಿ ಕಾರ್ಮಿಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದು, ಆತನ ಪ್ರಯತ್ನ ಸಂಪೂರ್ಣ ವಿಫಲವಾಗಿದೆ. ಸಾಯಲು ನಿರ್ಧರಿಸಿದ್ದ ಕಾರ್ಮಿಕ, ಮತ್ತೆ ಎರಡು ಬಾರಿ ಕೆಳಗೆ ಜಿಗಿದಿದ್ದಾನೆ, ಆದರೆ ಸುರಕ್ಷತಾ ಜಾಲಕ್ಕೆ ಸಿಕ್ಕಿಹಾಕಿಕೊಂಡಿದ್ದರಿಂದ ಸುರಕ್ಷಿತವಾಗಿದ್ದಾರೆ. ಈ ಸಂಪೂರ್ಣ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ.

ಘಟನೆಯ ವಿಡಿಯೋ ನೋಡಿದರೆ ಎಲ್ಲರೂ ಬೆಚ್ಚಿಬೀಳುವುದು ಗ್ಯಾರಂಟಿ, ಕಾರ್ಮಿಕನು ನಿರ್ಮಾಣ ಹಂತದಲ್ಲಿರುವ ಕಟ್ಟಡದ 13 ನೇ ಮಹಡಿಯಿಂದ ಜಿಗಿದಿದ್ದಾನೆ, ಆದರೆ 8 ನೇ ಮಹಡಿಯಲ್ಲಿ ಅಳವಡಿಸಲಾದ ಸುರಕ್ಷತಾ ಜಾಲದಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ.

ಈ ಸಮಯದಲ್ಲಿ, ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಕೆಲಸ ಮಾಡುವ ಕೆಲವರು ಕಾರ್ಮಿಕರನ್ನು ನೆಟ್ ಸಹಾಯದಿಂದ ಮೇಲಕ್ಕೆ ಬರುವಂತೆ ಕರೆಯುತ್ತಾರೆ, ಆದರೆ ಆತ ಸ್ವಲ್ಪ ಸಮಯದವರೆಗೆ ಬಲೆ ಹಿಡಿದುಕೊಂಡು ನೇತಾಡುತ್ತಾನೆ ಮತ್ತು ಸ್ವಲ್ಪ ಸಮಯದ ನಂತರ ಅವನು ಮತ್ತೆ ಕೆಳಗೆ ಜಿಗಿದಿದ್ದಾನೆ.

ಆದರೆ ಇಲ್ಲೂ ಈ ಕಾರ್ಮಿಕ ಮೂರನೇ ಮಹಡಿಯಲ್ಲಿ ಅಳವಡಿಸಿರುವ ಸುರಕ್ಷತಾ ಜಾಲದಲ್ಲಿ ಸಿಲುಕಿಕೊಂಡಿದ್ದಾನೆ. ಅಷ್ಟೇ ಅಲ್ಲ, ಆತ ಮತ್ತೆ ಮೂರನೇ ಮಹಡಿಯಿಂದ ಜಿಗಿದಿದ್ದಾನೆ, ಆದರೆ ಇದಾದ ನಂತರ ಕೆಳ ಮಹಡಿಯಲ್ಲಿದ್ದ ಅಳವಡಿಸಿದ್ದ ಸುರಕ್ಷತಾ ನೆಟ್‌ನಲ್ಲಿ ಸಿಲುಕಿಕೊಂಡಿದ್ದಾನೆ ಜೀವ ಉಳಿದಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jan 16, 2025 12:13 PM