ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಸರ್ವಧರ್ಮ ಸಮ್ಮೇಳನ
ಸರ್ವಧರ್ಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ನಾವೆಲ್ಲಾ ಧರ್ಮದ ಹಾದಿಯಲ್ಲಿ ಮುನ್ನಡೆಯಬೇಕು. ನಮ್ಮ ನಂಬಿಕೆ ಏನೇ ಇದ್ದರೂ ಮೌಲ್ಯಗಳಲ್ಲಿ ನಾವೆಲ್ಲ ಒಂದೇ. ಎಲ್ಲಾ ಧರ್ಮಗಳು ಮನುಕುಲದ ಒಳಿತನ್ನೇ ಬಯಸುತ್ತದೆ. ಈ ಲಕ್ಷ ದೀಪೋತ್ಸವದ ಮೂಲಕ ವಿಶ್ವ ಸೌಹಾರ್ದತೆಯ ದೀಪ ಬೆಳಗಲಿ. ದೇಶದ ಏಕತೆ ಮತ್ತಷ್ಟು ಬಲವಾಗಲಿ. ಸಾವಿರಾರು ಬೆಳಕಿನ ದೀಪಗಳ ಮಧ್ಯೆ, ಧರ್ಮ ಸಹಿಷ್ಣುತೆ, ಮಾನವೀಯತೆಯ ಸಂದೇಶಗಳನ್ನು ಸಾರುವ ಸರ್ವಧರ್ಮ ಸಮ್ಮೇಳನ ಅತ್ಯಂತ ಮಹತ್ವದ್ದಾಗಿದೆ. ಧರ್ಮಸ್ಥಳದ ದೈವ ಮಂಜುನಾಥ ಅಂದರೆ ಶಿವ, ಅರ್ಚಕರು ವೈಷ್ಣವರು, ಧರ್ಮಾಧಿಕಾರಿಗಳು ಜೈನರು. ಎಲ್ಲ ಧರ್ಮೀಯರು ಇಲ್ಲಿಗೆ ಭಕ್ತರು. ಧರ್ಮಸ್ಥಳ ಸರ್ವ ಧರ್ಮ ಸಮಭಾವಕ್ಕೆ ಜೀವಂತ ಉದಾಹರಣೆಯಾಗಿದೆ ಎಂದಿದ್ದಾರೆ.
ಮಂಗಳೂರು, ನವೆಂಬರ್ 18: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವದ (Dharmasthala Laksha Deepotsava) ಸಂಭ್ರಮ ನಡೆಯುತ್ತಿದೆ. ಇಂದು ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನದ 93ನೇ ಅಧಿವೇಶನ ನಡೆಯಿತು. ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಭಾಗಿಯಾಗಿದ್ದರು. ಸಚಿವ ಎಂ.ಬಿ. ಪಾಟೀಲ್, ಹರಿಹರಪುರ ಶಾರದಾ ಲಕ್ಷ್ಮೀನೃಸಿಂಹ ಪೀಠಂ ನ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಚಿಂತಕ ತನ್ವೀರ್ ಅಹಮ್ಮದ್ ಉಲ್ಲಾ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಸರ್ವಧರ್ಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ನಾವೆಲ್ಲಾ ಧರ್ಮದ ಹಾದಿಯಲ್ಲಿ ಮುನ್ನಡೆಯಬೇಕು. ನಮ್ಮ ನಂಬಿಕೆ ಏನೇ ಇದ್ದರೂ ಮೌಲ್ಯಗಳಲ್ಲಿ ನಾವೆಲ್ಲ ಒಂದೇ. ಎಲ್ಲಾ ಧರ್ಮಗಳು ಮನುಕುಲದ ಒಳಿತನ್ನೇ ಬಯಸುತ್ತದೆ. ಈ ಲಕ್ಷ ದೀಪೋತ್ಸವದ ಮೂಲಕ ವಿಶ್ವ ಸೌಹಾರ್ದತೆಯ ದೀಪ ಬೆಳಗಲಿ. ದೇಶದ ಏಕತೆ ಮತ್ತಷ್ಟು ಬಲವಾಗಲಿ. ಸಾವಿರಾರು ಬೆಳಕಿನ ದೀಪಗಳ ಮಧ್ಯೆ, ಧರ್ಮ ಸಹಿಷ್ಣುತೆ, ಮಾನವೀಯತೆಯ ಸಂದೇಶಗಳನ್ನು ಸಾರುವ ಸರ್ವಧರ್ಮ ಸಮ್ಮೇಳನ ಅತ್ಯಂತ ಮಹತ್ವದ್ದಾಗಿದೆ. ಧರ್ಮಸ್ಥಳದ ದೈವ ಮಂಜುನಾಥ ಅಂದರೆ ಶಿವ, ಅರ್ಚಕರು ವೈಷ್ಣವರು, ಧರ್ಮಾಧಿಕಾರಿಗಳು ಜೈನರು. ಎಲ್ಲ ಧರ್ಮೀಯರು ಇಲ್ಲಿಗೆ ಭಕ್ತರು. ಧರ್ಮಸ್ಥಳ ಸರ್ವ ಧರ್ಮ ಸಮಭಾವಕ್ಕೆ ಜೀವಂತ ಉದಾಹರಣೆಯಾಗಿದೆ ಎಂದಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ