ಹೊಸ ಸಿನಿಮಾ ತಂಡಗಳಿಗೆ ಕಿವಿ ಮಾತು ಹೇಳಿದ ಸತೀಶ್ ನೀನಾಸಂ
ಹೊಸಬರ ತಂಡ ಮಾಡಿರುವ ‘ವೃತ್ತ’ ಸಿನಿಮಾಕ್ಕೆ ಸತೀಶ್ ನೀನಾಸಂ ಬೆಂಬಲ ನೀಡಿದ್ದು, ತಮ್ಮದೇ ಬ್ಯಾನರ್ನಿಂದ ಬಿಡುಗಡೆ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಹೊಸ ಸಿನಿಮಾ ತಂಡಗಳಿಗೆ ಕೆಲವು ಸಲಹೆಗಳನ್ನು ಸತೀಶ್ ನೀನಾಸಂ ನೀಡಿದ್ದಾರೆ.
ನಟ ಸತೀಶ್ ನೀನಾಸಂ ಹೊಸಬರ ತಂಡವೊಂದಕ್ಕೆ ಬೆಂಬಲವಾಗಿ ನಿಂತಿದ್ದಾರೆ. ‘ವೃತ್ತ’ ಹೆಸರಿನ ಹೊಸಬರ ತಂಡವೊಂದು ಮಾಡಿರುವ ಸಿನಿಮಾವನ್ನು ತಮ್ಮದೇ ಬ್ಯಾನರ್ನಿಂದ ಪ್ರೆಸೆಂಟ್ ಮಾಡಲು ಮುಂದೆ ಬಂದಿದ್ದಾರೆ ಸತೀಶ್. ಇದೇ ಸಿನಿಮಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸತೀಶ್ ನೀನಾಸಂ ಹೊಸ ತಂಡದ ಬಗ್ಗೆ ಭರಪೂರ ಮೆಚ್ಚುಗೆ ವ್ಯಕ್ತಪಡಿಸುವ ಜೊತೆಗೆ, ಮುಂದೆ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿರುವ ಹೊಸ ತಂಡಗಳು ಹೇಗಿರಬೇಕು ಎಂದು ಹೇಳದ್ದಾರೆ. ಜೊತೆಗೆ ತಾವು ‘ಲೂಸಿಯಾ’ ಸಿನಿಮಾ ಮಾಡಿ ಪ್ರೇಕ್ಷಕರ ಮುಂದೆ ಬರಲು ರೆಡಿಯಾದಾಗ ತಮಗೆ ಆದ ಅನುಭವ ಹೇಗಿತ್ತು ಎಂಬುದನ್ನು ಸಹ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos