ಪೇಶಾವರದಲ್ಲಿ ಲ್ಯಾಂಡಿಂಗ್ ವೇಳೆ ಸೌದಿ ಏರ್‌ಲೈನ್ಸ್‌ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡ ವಿಡಿಯೋ ವೈರಲ್

|

Updated on: Jul 11, 2024 | 8:43 PM

297 ಪ್ರಯಾಣಿಕರಿದ್ದ ಸೌದಿ ಏರ್‌ಲೈನ್ಸ್ ವಿಮಾನ ಇಂದು (ಗುರುವಾರ) ಪಾಕಿಸ್ತಾನದ ಪೇಶಾವರ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಲ್ಯಾಂಡಿಂಗ್ ಗೇರ್‌ಗೆ ಬೆಂಕಿ ಹೊತ್ತಿಕೊಂಡಿದೆ. ಲ್ಯಾಂಡಿಂಗ್ ಗೇರ್‌ನಲ್ಲಿನ ಕೆಲವು ಸಮಸ್ಯೆಯಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.

ಪಾಕಿಸ್ತಾನದ ಪೇಶಾವರದಲ್ಲಿ ಇಂದು ಸೌದಿ ಏರ್​ಲೈನ್ಸ್​ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ. ಲ್ಯಾಂಡಿಂಗ್ ವೇಳೆ ಈ ದುರ್ಘಟನೆ ನಡೆದಿದೆ. ತಕ್ಷಣ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಗಿದೆ. ಇದರಿಂದ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಡಾನ್​ ವರದಿ ತಿಳಿಸಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಮತ್ತು ತುರ್ತು ಸ್ಲೈಡ್ ಬಳಸಿ ಜನರು ವಿಮಾನದಿಂದ ಹೊರಬಂದರು ಎಂದು ಇಸ್ಲಾಮಾಬಾದ್ ಮೂಲದ ಪತ್ರಿಕೆ ಹೇಳಿದೆ. ಪ್ರಯಾಣಿಕರು ಸ್ಲೈಡ್‌ನಲ್ಲಿ ವಿಮಾನದಿಂದ ನಿರ್ಗಮಿಸುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಅಗ್ನಿಶಾಮಕ ಟೆಂಡರ್‌ಗಳು ಸಮಯಕ್ಕೆ ಸರಿಯಾಗಿ ಕಾರ್ಯ ನಿರ್ವಹಿಸಿದವು. ತಕ್ಷಣ ಲ್ಯಾಂಡಿಂಗ್ ಗೇರ್‌ನಲ್ಲಿ ಬೆಂಕಿಯನ್ನು ನಿಯಂತ್ರಿಸಿದರು. ಅವರು ವಿಮಾನವನ್ನು ದೊಡ್ಡ ಅಪಘಾತದಿಂದ ರಕ್ಷಿಸಿದರು. ಎಲ್ಲಾ 276 ಪ್ರಯಾಣಿಕರು ಮತ್ತು 21 ಸಿಬ್ಬಂದಿಯನ್ನು ಗಾಳಿ ತುಂಬಬಹುದಾದ ಸ್ಲೈಡ್‌ನೊಂದಿಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಪಿಸಿಎಎ ವಕ್ತಾರ ಸೈಫುಲ್ಲಾ ಹೇಳಿದ್ದಾರೆಂದು ಡಾನ್ ವರದಿ ಮಾಡಿದೆ. ಅಗ್ನಿಶಾಮಕ ವಾಹನಗಳು ಲ್ಯಾಂಡಿಂಗ್ ಗೇರ್‌ಗೆ ಆವರಿಸಿದ ಜ್ವಾಲೆಯನ್ನು ನಂದಿಸಲು ಸಾಧ್ಯವಾಯಿತು ಎಂದು ಅವರು ಹೇಳಿದರು.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jul 11, 2024 08:42 PM