‘ಆಗ್ತಿರೋದು ನೋಡಿದಾಗ ಬೇಸರ ಶುರುವಾಯ್ತು’: ದರ್ಶನ್​ ಕೇಸ್​ ಬಗ್ಗೆ ವಿಜಯ್​ ರಾಘವೇಂದ್ರ ಮಾತು

‘ಆಗ್ತಿರೋದು ನೋಡಿದಾಗ ಬೇಸರ ಶುರುವಾಯ್ತು’: ದರ್ಶನ್​ ಕೇಸ್​ ಬಗ್ಗೆ ವಿಜಯ್​ ರಾಘವೇಂದ್ರ ಮಾತು
|

Updated on: Jul 11, 2024 | 10:56 PM

ರೇಣುಕಾ ಸ್ವಾಮಿ ಹತ್ಯೆಯ ಬಳಿಕ ಚಿತ್ರರಂಗದಲ್ಲಿ ಒಂದು ಬೇಸರದ ಛಾಯೆ ಆವರಿಸಿದೆ. ‘ಆದಷ್ಟು ಬೇಗ ಈ ಕಹಿ ಪರಿಸ್ಥಿತಿಯಿಂದ ನಮ್ಮ ಚಿತ್ರರಂಗ ಹೊರಗಡೆ ಬರಲಿ, ಕರ್ನಾಟಕ ಹೊರಗಡೆ ಬರಲಿ’ ಎಂದು ವಿಜಯ್​ ರಾಘವೇಂದ್ರ ಹೇಳಿದ್ದಾರೆ. ದರ್ಶನ್​ ಅವರು ಜೈಲು ಸೇರಿರುವುದು ತಮಗೆ ಬೇಸರ ಮೂಡಿಸಿದೆ ಎಂದು ಅವರು ಹೇಳಿದ್ದಾರೆ. ಆ ವಿಡಿಯೋ ಇಲ್ಲಿದೆ..

ನಟ ವಿಜಯ್​ ರಾಘವೇಂದ್ರ ಅವರು ದರ್ಶನ್​ ಕೇಸ್​ ಬಗ್ಗೆ ಮಾತನಾಡಿದ್ದಾರೆ. ಒಂದು ಚಿಕ್ಕ ಕಾರಣದಿಂದ ರೇಣುಕಾಸ್ವಾಮಿಯ ಕೊಲೆ ನಡೆದುಹೋಗಿದೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ. ದರ್ಶನ್​, ಪವಿತ್ರಾ ಗೌಡ ಮತ್ತು ಅವರ ಸಹಚರರು ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಎಲ್ಲ ಘಟನೆಗಳ ಬಗ್ಗೆ ವಿಜಯ್​ ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ‘ಮೊದಲಿಗೆ ಎಲ್ಲರಿಗೂ ಶಾಕ್​ ಆಯಿತು. ಬಳಿಕ ಏನೇನೋ ಕಥೆಗಳನ್ನು ಕೇಳಿ ಕುತೂಹಲ ಮೂಡಿದೆ. ಆಮೇಲೆ ಆಗುತ್ತಿರುವುದೆಲ್ಲ ನೋಡಿದಾಗ ಬೇಸರ ಆಗೋಕೆ ಶುರುವಾಯಿತು. ನಿಮಗೆ ಗೊತ್ತಿರುವುದಕ್ಕಿಂತ ಕಡಿಮೆ ವಿಚಾರ ನನಗೆ ಗೊತ್ತು. ಕಾನೂನು ಇದೆ. ಸಿನಿಮಾರಂಗದಲ್ಲಿ ನಮ್ಮದು ಒಂದು ಕುಟುಂಬ. ಆ ಕುಟುಂಬದಲ್ಲಿ ಬೇಸರ ಇದೆ. ಈ ಪರಿಸ್ಥಿತಿಗೆ ಬಲಿಯಾದ ಇನ್ನೊಂದು ಕುಟುಂಬ ಇದೆ. ಈ ಘಟನೆ ಆಗಿಹೋಗಿದೆ. ನಮ್ಮ ಸಿನಿಮಾರಂಗದ ಕುಟುಂಬದವರೇ ಆದ ದರ್ಶನ್​ ಅವರು ಈ ರೀತಿಯ ಪರಿಸ್ಥಿತಿಯಲ್ಲಿ ಇದ್ದಾರೆ ಎಂಬ ಬೇಸರ ನಮಗೆ ಇದೆ’ ಎಂದಿದ್ದಾರೆ ವಿಜಯ್​ ರಾಘವೇಂದ್ರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ