ಒಂದೆಡೆ ಇಡಿ ಶೋಧ: ಇತ್ತ ದದ್ದಲ್ ನಿವಾಸದಲ್ಲಿ ಅನಾಥವಾಗಿದ್ದ ಶ್ವಾನ ಇಂದು ಸೆಲೆಬ್ರಿಟಿ

ಒಂದೆಡೆ ಇಡಿ ಶೋಧ: ಇತ್ತ ದದ್ದಲ್ ನಿವಾಸದಲ್ಲಿ ಅನಾಥವಾಗಿದ್ದ ಶ್ವಾನ ಇಂದು ಸೆಲೆಬ್ರಿಟಿ

ಕಿರಣ್ ಹನುಮಂತ್​ ಮಾದಾರ್
|

Updated on:Jul 11, 2024 | 8:21 PM

ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿರುವ ದದ್ದಲ್ ನಿವಾಸದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಈ ವೇಳೆ ದದ್ದಲ್ ನಿವಾಸದಲ್ಲಿ ಅನಾಥವಾಗಿದ್ದ ಶ್ವಾನದ ಜೊತೆ ಸಿಐಎಸ್​ಎಫ್ ಭದ್ರತಾ ಸಿಬ್ಬಂದಿ ಸೆಲ್ಫಿ‌ ತೆಗೆದುಕೊಂಡು ಮೌನವಾಗಿದ್ದ ಶ್ವಾನವನ್ನ ಮುದ್ದಾಡಿ ಖುಷಿ ಪಟ್ಟಿದ್ದರು. ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅನಾಥವಾಗಿದ್ದ ಶ್ವಾನ ಇಂದು ಸೆಲೆಬ್ರಿಟಿಯಾಗಿದೆ.

ರಾಯಚೂರು, ಜು.11: ವಾಲ್ಮೀಕಿ ನಿಗಮದಲ್ಲಿ ನಡೆದ ಕೋಟ್ಯಾಂತರ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ರಾಯಚೂರು ಗ್ರಾಮೀಣ ಶಾಸಕ ಹಾಗೂ ನಿಗಮದ ಅಧ್ಯಕ್ಷ ದದ್ದಲ್ ಮನೆ ಮೇಲೆ ಇಡಿ ದಾಳಿ ನಡೆಸಿತ್ತು. ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿರುವ ದದ್ದಲ್ ನಿವಾಸದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಈ ವೇಳೆ ದದ್ದಲ್ ನಿವಾಸದಲ್ಲಿ ಅನಾಥವಾಗಿದ್ದ ಶ್ವಾನದ ಜೊತೆ ಸಿಐಎಸ್​ಎಫ್ ಭದ್ರತಾ ಸಿಬ್ಬಂದಿ ಸೆಲ್ಫಿ‌ ತೆಗೆದುಕೊಂಡು ಮೌನವಾಗಿದ್ದ ಶ್ವಾನವನ್ನ ಮುದ್ದಾಡಿ ಖುಷಿ ಪಟ್ಟಿದ್ದರು. ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅನಾಥವಾಗಿದ್ದ ಶ್ವಾನ ಇಂದು ಸೆಲೆಬ್ರಿಟಿಯಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 11, 2024 08:20 PM