10 ಹುದ್ದೆಗೆ ನೂರಾರು ಯುವಕರ ನೂಕುನುಗ್ಗಲು; ಇಂಟರ್ವ್ಯೂ ವೇಳೆ ಕಾಲ್ತುಳಿತದ ವಿಡಿಯೋ ವೈರಲ್
ಗುಜರಾತಿನ ಭರೂಚ್‌ನಲ್ಲಿ ಕೇವಲ 10 ಖಾಲಿ ಹುದ್ದೆಗಳಿಗೆ ಕೆಮಿಕಲ್ ಸಂಸ್ಥೆ ಥರ್ಮಾಕ್ಸ್ ಕಂಪನಿ ಆಯೋಜಿಸಿದ್ದ ಉದ್ಯೋಗ ಸಂದರ್ಶನಕ್ಕೆ ನೂರಾರು ಯುವಕರು ಆಗಮಿಸಿದ್ದರಿಂದ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ.
ಭರೂಚ್: ಗುಜರಾತ್ನಲ್ಲಿ ಇಂಟರ್ವ್ಯೂಗೆ ಬಂದಿದ್ದ ನಿರುದ್ಯೋಗಿಗಳ ತಳ್ಳಾಟದಿಂದ ನೂಕುನುಗ್ಗಲು ಉಂಟಾಗಿರುವ ಘಟನೆಯೊಂದು ನಡೆದಿದೆ. ಅಂತರ್ಜಾಲದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಹೆಚ್ಚಿನ ಸಂಖ್ಯೆಯ ಅರ್ಜಿದಾರರು ಹೋಟೆಲ್‌ಗೆ ಪ್ರವೇಶಿಸಲು ಹೆಣಗಾಡುತ್ತಿರುವುದನ್ನು ಕಾಣಬಹುದು. ಅಲ್ಲಿ ವಾಕ್-ಇನ್ ಸಂದರ್ಶನಗಳನ್ನು ನಡೆಸಲಾಯಿತು. ಈ ವೇಳೆ ಕೆಲವು ಯುವಕರು ಸೈಡ್ ರೇಲಿಂಗ್ ಮೇಲೆ ನಿಂತ ಕಾರಣ ಅದು ಮುರಿದುಹೋಯಿತು.
ಥರ್ಮಾಕ್ಸ್ ಅವರು ಅಂಕಲೇಶ್ವರದ ಲಾರ್ಡ್ಸ್ ಪ್ಲಾಜಾ ಹೋಟೆಲ್‌ನಲ್ಲಿ ಶಿಫ್ಟ್-ಇನ್-ಚಾರ್ಜ್, ಪ್ಲಾಂಟ್ ಆಪರೇಟರ್, ಸೂಪರ್‌ವೈಸರ್, ಫಿಟ್ಟರ್-ಮೆಕ್ಯಾನಿಕಲ್ ಮತ್ತು ಎಕ್ಸಿಕ್ಯೂಟಿವ್ (ಇಟಿಪಿ) ಹುದ್ದೆಗಳಿಗೆ ಸಂದರ್ಶನಗಳನ್ನು ನಡೆಸುತ್ತಿದ್ದರು. ಈ ವೇಳೆ ಈ ಘಟನೆ ನಡೆದಿದೆ. ಈ ವಿಡಿಯೋ ನಿರುದ್ಯೋಗದ ಸಮಸ್ಯೆಯನ್ನು ಎತ್ತಿ ತೋರಿಸುವಂತಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Jul 11, 2024 09:48 PM
Latest Videos