ಬಿಜೆಪಿಯಲ್ಲಿ ಸ್ಥಾನಮಾನ ಸಿಗದ ಕಾರಣ ಶೆಟ್ಟರ್ ಮತ್ತು ಸವದಿ ಕಾಂಗ್ರೆಸ್ ಸೇರಿದರು, ನಮ್ಮ ಪಕ್ಷ ಅದನ್ನು ನೀಡಿದೆ: ಸತೀಶ್ ಜಾರಕಿಹೊಳಿ
ಬಿಜೆಪಿಯಲ್ಲಿ ಸ್ಥಾನಮಾನ ಸಿಗದ ಕಾರಣ ಶೆಟ್ಟರ್ ಮತ್ತು ಸವದಿ ಕಾಂಗ್ರೆಸ್ ಗೆ ಬಂದಿದ್ದಾರೆ ಮತ್ತು ತಮ್ಮ ಪಕ್ಷ ಅವರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡಿ ಗೌರವಿಸಿದೆ ಎಂದು ಜಾರಕಿಹೊಳಿ ಹೇಳಿದರು. ಲೋಕಸಭಾ ಟಿಕೆಟ್ ಸಿಕ್ಕರೂ ಸಂಸತ್ತಿಗೆ ಹೋಗಿ ಅವರು ಮಾಡುವುದಾದರೂ ಏನು? ಎಂದು ಸತೀಶ್ ಜಾರಕಿಹೊಳಿ ಕೇಳಿದರು.
ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಟಿಕೆಟ್ ಕೊಡದ ಕಾರಣಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ (Jagadish Shettar) ಮತ್ತು ಲಕ್ಷ್ಮಣ್ ಸವದಿ (Laxman Savadi) ಅವರನ್ನು ಪುನಃ ಪಕ್ಷಕ್ಕೆ ಸೆಳೆದುಕೊಳ್ಳುವ ಹುನ್ನಾರ ಬಿಜೆಪಿ ನಾಯಕರು ನಡೆಸಿದ್ದಾರೆಯೇ? ಕಳೆದ 2-3 ದಿನಗಳಿಂದ ಅಂಥದೊಂದು ಸುದ್ದಿ ಹರಿದಾಡುತ್ತಿದೆ ಮಾರಾಯ್ರೇ. ಗೊಂದಲ ಪರಿಹರಿಸಿಕೊಳ್ಳಲು ಮಾಧ್ಯಮ ಪ್ರತಿನಿಧಿಗಳು ಇಂದು ಲೊಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿಯವರನ್ನು (Satish Jarkiholi) ಅವರ ಕಚೇರಿಯಲ್ಲಿ ಮಾತಾಡಿಸಿದರು. ಸತೀಶ್ ಒಬ್ಬ ನುರಿತ ರಾಜಕಾರಣಿ, ಅವರಿಗೆ ಯಾವುದೇ ಆಘಾತಕಾರಿ ಸುದ್ದಿ ನೀಡಿದರೂ ವಿಚಲಿತರಾಗದೆ ತಮ್ಮ ಎಂದಿನ ಶಾಂತ ಸ್ವಭಾವದಲ್ಲಿ ಪ್ರತಿಕ್ರಿಯಿಸುತ್ತಾರೆ. ಶೆಟ್ಟರ್ ಮತ್ತು ಸವದಿಗೆ ಬಿಜೆಪಿ ಗಾಳ ಹಾಕುತ್ತಿರುವ ವಿಷಯ ಅವರ ಗಮನಕ್ಕೆ ತಂದಾಗ, ಇಬ್ಬರಿಗೂ ವಾಪಸ್ಸು ಹೋಗುವ ಅವಶ್ಯಕತೆಯಿಲ್ಲ, ಬಿಜೆಪಿಯಲ್ಲಿ ಸ್ಥಾನಮಾನ ಸಿಗದ ಕಾರಣ ಅವರು ಕಾಂಗ್ರೆಸ್ ಬಂದಿದ್ದಾರೆ ಮತ್ತು ತಮ್ಮ ಪಕ್ಷ ಅವರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡಿ ಗೌರವಿಸಿದೆ ಎಂದು ಹೇಳಿದರು. ಲೋಕಸಭಾ ಟಿಕೆಟ್ ಸಿಕ್ಕರೂ ಸಂಸತ್ತಿಗೆ ಹೋಗಿ ಅವರು ಮಾಡುವುದಾದರೂ ಏನು? ಶಾಸಕರಾಗೇ ಕರ್ನಾಟಕದಲ್ಲಿ ಆರಾಮಾಗಿ ಇರುತ್ತಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ