ಶಾಲಾ ಮಕ್ಕಳಿಗೆ ಹಾಲು ಮತ್ತು ಮೊಟ್ಟೆ ಜೊತೆ ವಾರದಲ್ಲಿ 3 ದಿನ ರಾಗಿಮಾಲ್ಟ್: ಮಧು ಬಂಗಾರಪ್ಪ, ಶಿಕ್ಷಣ ಸಚಿವ

|

Updated on: Feb 21, 2024 | 11:23 AM

ಸುಮಾರು 59 ಲಕ್ಷ ಶಾಲಾ ಮಕ್ಕಳಿಗೆ ಈಗಾಗಲೇ ವಾರದಲ್ಲಿ 5 ದಿನ ನೀಡುತ್ತಿರುವ ಹಾಲು ಮತ್ತು ವಾರದಲ್ಲಿ ಎರಡು ದಿನ ಮೊಟ್ಟೆ ಸೇರಿದಂತೆ ಇನ್ನು ಮುಂದೆ ವಾರಲ್ಲಿ 3 ದಿನ ರಾಗಿಮಾಲ್ಟ್ ಕೂಡ ನೀಡಲಾಗುವುದು ಎಂದು ಸಚಿವ ಹೇಳಿದರು. ರಾಗಿಮಾಲ್ಟ್ ಸ್ವಾದಿಷ್ಟವಾಗಿರುವ ಜೊತೆಗೆ ಮಕ್ಕಳನ್ನು ದೈಹಿಕವಾಗಿ ಸದೃಢವಾಗಿಸಲಿದೆ ಎಂದು ಅವರು ಹೇಳಿದರು.

ಶಿವಮೊಗ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಇಂದು ನಗರದಲ್ಲಿ ಮಾಧ್ಯಮ ಗೋಷ್ಟಿ ನಡೆಸಿ ಹಲವು ವಿಚಾರಳನ್ನು ಹಂಚಿಕೊಂಡರು. ಮೊದಲಿಗೆ ಅವರು ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ ಮತ್ತು ಭದ್ರಾವತಿ-ಮೂರು ಪ್ರದೇಶಗಳಲ್ಲಿ ವಾಸವಾಗಿರುವ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ (guarantee scheme beneficiaries) ಒಂದು ಸಮಾವೇಶ ನಡೆಸುವ ಬಗ್ಗೆ ಹೇಳಿದರು. ಅದಕ್ಕಿಂತ ಮುಖ್ಯವಾಗಿ ನಾಳೆಯಿಂದ ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ವಾರದಲ್ಲಿ ಮೂರು ದಿನ ಪೌಷ್ಠಿಕಾಂಶಭರಿತ ರಾಗಿಮಾಲ್ಟ್ ಅನ್ನು (Ragi malt) ಹಾಲಿನೊಂದಿಗೆ ಬೆರೆಸಿ ನೀಡುವ ಯೋಜನೆ ಆರಂಭವಾಗಲಿದೆ ಮತ್ತು ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಲ್ಲಿ ಲಾಂಚ್ ಮಾಡಲಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದರು. ಸುಮಾರು 59 ಲಕ್ಷ ಶಾಲಾ ಮಕ್ಕಳಿಗೆ ಈಗಾಗಲೇ ವಾರದಲ್ಲಿ 5 ದಿನ ನೀಡುತ್ತಿರುವ ಹಾಲು ಮತ್ತು ವಾರದಲ್ಲಿ ಎರಡು ದಿನ ಮೊಟ್ಟೆ ಸೇರಿದಂತೆ ಇನ್ನು ಮುಂದೆ ವಾರಲ್ಲಿ 3 ದಿನ ರಾಗಿಮಾಲ್ಟ್ ಕೂಡ ನೀಡಲಾಗುವುದು ಎಂದು ಸಚಿವ ಹೇಳಿದರು. ರಾಗಿಮಾಲ್ಟ್ ಸ್ವಾದಿಷ್ಟವಾಗಿರುವ ಜೊತೆಗೆ ಮಕ್ಕಳನ್ನು ದೈಹಿಕವಾಗಿ ಸದೃಢವಾಗಿಸಲಿದೆ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ