ಸೀಟು ಹಂಚಿಕೆಯ ವಿಚಾರ ಸುಗಮವಾಗಿ ನಡೆದುಹೋಗುತ್ತದೆ, ಅದು ಸಮಸ್ಯೆಯೇ ಅಲ್ಲ: ಹೆಚ್ ಡಿ ಕುಮಾರಸ್ವಾಮಿ
ಅಸಲಿಗೆ ಸೀಟು ಹಂಚಿಕೆ ವಿಷಯ ಚರ್ಚೆ ಮಾಡಲೆಂದೇ ದೇವೇಗೌಡರ ಕುಟುಂಬ ಇವತ್ತು ದೆಹಲಿಗೆ ತೆರಳಿದೆ. ಪ್ರಾಯಶಃ ಇವರು ಇಟ್ಟಿರುವ ಬೇಡಿಕೆಯನ್ನು ಬಿಜೆಪಿ ವರಿಷ್ಠರು ಗಣನೆಗೆ ತೆಗೆದುಕೊಂಡಿರಲಾರರು. ಹಾಗಾಗೇ, ಸೀಟು ಹಂಚಿಕೆಯ ಬಗ್ಗೆ ಪತ್ರಕರ್ತರು ಕೇಳಿದರೆ ಅದು ವಿಷಯವೇ ಅಲ್ಲ ಎಂದು ಕುಮಾರಸ್ವಾಮಿ ಎಲ್ಲೋ ನೋಡುತ್ತಾ ಹೇಳುತ್ತಾರೆ.
ದೆಹಲಿ: ಜೆಡಿಎಸ್ ನಾಯಕರಾಗಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ (HD Devegowda), ಹೆಚ್ ಡಿ ಕುಮಾರಸ್ವಾಮಿ (HD Kumaraswamy), ಶಾಸಕ ಹೆಚ್ ಡಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಹಾಸನ ಶಾಸಕ ಸ್ವರೂಪ್ ಪ್ರಕಾಶ್ ಮೊದಲಾದವರು ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರೊಂದಿಗೆ ನಡೆಸಿದ ಮಾತುಕತೆಯು ರಾಜ್ಯದ ನಾಯಕರು ನಿರೀಕ್ಷಿಸಿದ ನಿಟ್ಟನಲ್ಲಿ ಸಾಗಿಲ್ಲ ಅನ್ನೋದು ಪತ್ರಿಕಾ ಗೋಷ್ಟಿಯಲ್ಲಿ ಕುಮಾರಸ್ವಾಮಿ ಆಡಿದ ಮಾತುಗಳಿಂದ ಸ್ಪಷ್ಟವಾಗುತ್ತದೆ. ಇಂದು ನಡೆದ ಮಾತುಕತೆಯಲ್ಲಿ ಸೀಟು ಹಂಚಿಕೆ ಒಂದು ವಿಷಯವೇ ಅಗಿರಲಿಲ್ಲ ಅನ್ನೋ ರೀತಿಯಲ್ಲಿ ಕುಮಾರಸ್ವಾಮಿ ಮಾತಾಡಿದರು. ರಾಜ್ಯ ಮತ್ತು ದೆಹಲಿಯಲ್ಲಿರುವ ಬಿಜೆಪಿ ನಾಯಕರು ಮತ್ತು ಜೆಡಿಎಸ್ ನಾಯಕರ ಜೊತೆ ಹೊಂದಾಣಿಕೆ ಮತ್ತು ವಿಶ್ವಾಸ ಮೂಡಬೇಕು, ತಮ್ಮ ಪ್ರಥಮ ಆದ್ಯತೆ ಅದೇ ಆಗಿದೆ ಎಂದು ಕುಮಾರಸ್ವಾಮಿ ಹೇಳಿದರು. ಸೀಟು ಹಂಚಿಕೆ ಯಾವುದೇ ಸಮಸ್ಯೆಗಳಿಲ್ಲದೆ ಸುಗಮವಾಗಿ ನಡೆಯುತ್ತದೆ, ಜನೆವರಿ ಅಂತ್ಯದ ವೇಳೆಗೆ ಸೀಟು ಹಂಚಿಕೆಯ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ