CCB Raid: ಬಾಂಬೆ ರೆಡ್ ಲೈಟ್ ಏರಿಯಾ ಮಾದರಿಯಲ್ಲೇ ಇತ್ತು ಸೀಕ್ರೇಟ್​ ರೂಮ್

CCB Raid: ಬಾಂಬೆ ರೆಡ್ ಲೈಟ್ ಏರಿಯಾ ಮಾದರಿಯಲ್ಲೇ ಇತ್ತು ಸೀಕ್ರೇಟ್​ ರೂಮ್

TV9 Web
| Updated By: ಅಕ್ಷತಾ ವರ್ಕಾಡಿ

Updated on: Nov 17, 2022 | 1:15 PM

ದುರ್ಗಾ ಪ್ಯಾಲೇಸ್ ಲಾಡ್ಜ್​ ದಾಳಿ ವೇಳೆ ಅಲ್ಲಿನ ಸೀಕ್ರೇಟ್ ರೂಮ್ ನೋಡಿ ಶಾಕ್ ಆದ ಸಿಸಿಬಿ, ಸೀಕ್ರೇಟ್ ರೂಮ್​ನಲ್ಲಿ ಮಹಿಳೆಯರಿನ್ನಿಟ್ಟು ದಂಧೆ ನಡೆಸುತ್ತಿದ್ದ 6 ಆರೋಪಿಗಳ ಮೇಲೆ ಕೇಸು ದಾಖಲಿಸಿ ಬಂಧಿಸಲಾಗಿದೆ.

ಬೆಂಗಳೂರಿನ ಮೂರು ಲಾಡ್ಜ್​​ಗಳಾದ ಸಿಟಿ ಮಾರ್ಕೆಟ್​​​ನಲ್ಲಿರುವ ವಾಸವಿ ಮತ್ತು ದುರ್ಗಾ ಪ್ಯಾಲೇಸ್ ಲಾಡ್ಜ್ ಹಾಗೂ ಕಲಾಸಿಪಾಳ್ಯದ ಸಫೇರ್​​ ಬೋರ್ಡಿಂಗ್  ಆ್ಯಂಡ್ ಲಾಡ್ಜಿಂಗ್ ಮೇಲೆ ಸಿಸಿಬಿ ದಾಳಿ ನಡೆಸಿ ಕೇಸು ದಾಖಲಿಸಿಕೊಂಡಿದೆ.

ದುರ್ಗಾ ಪ್ಯಾಲೇಸ್ ಲಾಡ್ಜ್​ ದಾಳಿ ವೇಳೆ ಅಲ್ಲಿನ ಸೀಕ್ರೇಟ್ ರೂಮ್ ನೋಡಿ ಶಾಕ್ ಆದ ಸಿಸಿಬಿ, ಸೀಕ್ರೇಟ್ ರೂಮ್​ನಲ್ಲಿ ಮಹಿಳೆಯರಿನ್ನಿಟ್ಟು ದಂಧೆ ನಡೆಸುತ್ತಿದ್ದ 6 ಆರೋಪಿಗಳ ಮೇಲೆ ಕೇಸು ದಾಖಲಿಸಿ ಬಂಧಿಸಿದೆ. ಪೊಲೀಸರ ರೇಡ್ ಸಂದರ್ಭದಲ್ಲಿ ಸೀಕ್ರೇಟ್ ರೂಮ್ ಒಳಗೆ ಕೂಡಿಹಾಕಲಾಗಿದ್ದ ಒಟ್ಟು 7 ಮಹಿಳೆಯರನ್ನು ಸಹ ರಕ್ಷಿಸಲಾಗಿದೆ.