Sriramulu: ಸಾರಿಗೆ ಸಚಿವ ಆಯೋಜಿಸಿದ್ದ ಬಾಡೂಟದಲ್ಲಿ ಅವ್ಯವಸ್ಥೆ
ಬಾಡೂಟ ವೇಳೆ ನೆಲಕ್ಕೆ ಚೆಲ್ಲಿರುವ ಮಾಂಸದ ಸಾರು. ನೆಲಕ್ಕೆಬಿದ್ದ ಮಾಂಸದ ತುಂಡು ಹಾಯ್ದುಕೊಂಡು ಹೋಗುತ್ತಿರುವ ಜನ. ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಸಖತ್ತ್ ವೈರಲ್ ಆಗಿದೆ.
ಚಿತ್ರದುರ್ಗ: ಎಸ್ಟಿ, ಎಸ್ಸಿ ಮೀಸಲಾತಿ ಹೆಚ್ಚಳ, ಬಿಜೆಪಿ ಸರ್ಕಾರದ ಪ್ರತಿಫಲ ಕಾರ್ಯಕ್ರಮವನ್ನು ಚಿತ್ರ ದುರ್ಗ ಜಿಲ್ಲೆ ಮೊಳಕಾಲ್ಮೂರು ಕ್ಷೇತ್ರದ ಗೌರ ಸಮುದ್ರ ಗ್ರಾಮದಲ್ಲಿ ಏರ್ಪಡಿಸಲಾಗಿತ್ತು. ಮೊಳಕಾಲ್ಮೂರಿನಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಔತಣಕೂಟ ಹೆಸರಿನಲ್ಲಿ ಭರ್ಜರಿಯಾಗಿ ಬಾಡೂಟವನ್ನು ಪಕ್ಷದ ಕಾರ್ಯಕರ್ತರಿಗೆ ಆಯೋಜಿಸಿದ್ದರು. ಬಾಡೂಟ ತಿನ್ನುವ ವೇಳೆ ನೆಲಕ್ಕೆ ಚೆಲ್ಲಿದ ಮಾಂಸದ ಸಾರು, ಮಾಂಸದ ತುಂಡುಗಳನ್ನು ತುಳಿಯುತ್ತಾ ಹೋಗುತ್ತಿರುವ ಜನರನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ಸಖತ್ ವೈರಲ್ ಆಗಿದೆ.
Latest Videos