ಸೋನಿಯಾ ಗಾಂಧಿ ತಂಗಲಿರುವ ಮಡಿಕೇರಿ ಬಳಿಯ ರೆಸಾರ್ಟ್​ಗೆ ಹೆಚ್ಚುವರಿ ಭದ್ರತೆ

ಸೋನಿಯಾ ಗಾಂಧಿ ತಂಗಲಿರುವ ಮಡಿಕೇರಿ ಬಳಿಯ ರೆಸಾರ್ಟ್​ಗೆ ಹೆಚ್ಚುವರಿ ಭದ್ರತೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 03, 2022 | 12:56 PM

ಸೋನಿಯಾ ಅವರು ವಿರಾಜಪೇಟೆ ಮುಖ್ಯರಸ್ತೆಯಲ್ಲಿರುವ ಕೂರ್ಗ್ ವಿಲ್ಟರ್ ನೆಸ್ ರೆಸಾರ್ಟ್ ನಲ್ಲಿ ತಂಗಲಿದ್ದಾರೆ. ಈ ಹಿನ್ನೆಲೆಯಲ್ಲಿ ರೆಸಾರ್ಟ್ ಗೆ ಹೆಚ್ಚಿನ ಭದ್ರತೆಯನ್ನು ಕಲ್ಪಿಸಲಾಗಿದೆ.

ಮಡಿಕೇರಿ: ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರ ಪಕ್ಷ ನಡೆಸುತ್ತಿರುವ ಭಾರತ್ ಜೋಡೋ (Bharat Jodo) ಯಾತ್ರೆಯಲ್ಲಿ ಭಾಗಿಯಾಗಲು ಸೋಮವಾರ ಮಡಿಕೇರಿಗೆ ಆಗಮಿಸಲಿದ್ದಾರೆ. ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ ಅವರು ವಿರಾಜಪೇಟೆ ಮುಖ್ಯರಸ್ತೆಯಲ್ಲಿರುವ ಕೂರ್ಗ್ ವಿಲ್ಟರ್ ನೆಸ್ ರೆಸಾರ್ಟ್ ನಲ್ಲಿ (Wilderness Resort) ತಂಗಲಿದ್ದಾರೆ. ಈ ಹಿನ್ನೆಲೆಯಲ್ಲಿ ರೆಸಾರ್ಟ್ ಗೆ ಹೆಚ್ಚಿನ ಭದ್ರತೆಯನ್ನು ಕಲ್ಪಿಸಲಾಗಿದೆ. ಬಾಂಬ್ ತಪಾಸಣೆ ದಳದ ಸಿಬ್ಬಂದಿ ವಾಹನವೊಂದರಲ್ಲಿ ರೆಸಾರ್ಟ್ ಗೆ ತೆರಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.