ದೆಹಲಿಯಲ್ಲೂ ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ, ಕರ್ನಾಟಕ ಭವನಕ್ಕೆ ಬಿಗಿ ಭದ್ರತೆ
ಕರ್ನಾಟಕದಲ್ಲಂತೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ವಿವಾದದ ವಿಚಾರಣೆ ನಡೆಸುತ್ತಿರುವ ರಾಜ್ಯ ಹೈಕೋರ್ಟ್ ತಾನು ತೀರ್ಪು ನೀಡದವರೆಗೆ ಧಾರ್ಮಿಕತೆಯನ್ನು ಪ್ರತಿಬಿಂಬಿಸುವ ಯಾವುದೇ ಬಗೆಯ ಉಡುಪುಗಳನ್ನು ಧರಿಸಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗಬಾರದು ಅಂತ ಮಧ್ಯಂತರ ಆದೇಶ ನೀಡಿದೆ.
ಉಡುಪಿಯಲ್ಲಿ ಆರಂಭಗೊಂಡ ಹಿಜಾಬ್ ಗಲಾಟೆ ಕೇವಲ ಕರಾವಳಿ ಕರ್ನಾಟಕ್ಕೆ ಮಾತ್ರ ಸೀಮಿತವಾಗದೆ ರಾಜ್ಯದಾದ್ಯಂತ ಮತ್ತು ದೇಶದಾದ್ಯಂತ ಹಬ್ಬಿದೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ವಿದೇಶದ ಟಿವಿ ಚ್ಯಾನೆಲ್ಗಳು ಸಹ ಸುದ್ದಿಯನ್ನು ಬಿತ್ತರಿಸುತ್ತಿವೆ. ಇದನ್ನು ಯಾಕೆ ಹೇಳಬೇಕಾಗಿದೆ ಅಂದರೆ ರಾಷ್ಟ್ರದ ರಾಜಧಾನಿ ದೆಹಲಿಗೂ ಹಿಜಾಬ್ ವಿವಾದ ಪ್ರತಿಭಟನೆಯ ಬಿಸಿ ತಾಕಿದೆ. ಅಲ್ಲೂ ವಿದ್ಯಾರ್ಥಿಗಳು ಸಂಘಟನೆಗಳು ಹಿಜಾಬ್ ಪರ ನಿಲುವು ಪ್ರಕಟಿಸಿ ಪ್ರತಿಭಟನೆಗೆ ಇಳಿಯುತ್ತಿವೆ. ನಿಮಗೆ ಈ ವಿಡಿಯೋನಲ್ಲಿ ಕಾಣುತ್ತಿರೋದು ದೆಹಲಿಯಲ್ಲಿರುವ ಕರ್ನಾಟಕ ಭವನ ಮುಂದಿನ ಚಿತ್ರಣ. ಪೊಲೀಸರು ಮತ್ತು ಆರ್ ಪಿ ಎಫ್ಯೋಧರು ಕರ್ನಾಟಕ ಭವನದ ಸುತ್ತ ನೆರೆದು ಭದ್ರತೆ ಒದಗಿಸಿದ್ದಾರೆ. ದೆಹಲಿಯ ಕೆಲವು ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭವನಕ್ಕೆ ಮುತ್ತಿಗೆ ಹಾಕಲು ಬರುತ್ತಿರುವ ಸುಳಿವು ಸಿಗುತ್ತಿದಂತೆಯೇ ಪೊಲೀಸ್ ಮತ್ತು ಆರ್ ಪಿ ಎಫ್ ಭದ್ರತೆಯನ್ನು ಕಟ್ಟಡಕ್ಕೆ ಒದಗಿಸಲಾಗಿದೆ.
ಕರ್ನಾಟಕದಲ್ಲಂತೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ವಿವಾದದ ವಿಚಾರಣೆ ನಡೆಸುತ್ತಿರುವ ರಾಜ್ಯ ಹೈಕೋರ್ಟ್ ತಾನು ತೀರ್ಪು ನೀಡದವರೆಗೆ ಧಾರ್ಮಿಕತೆಯನ್ನು ಪ್ರತಿಬಿಂಬಿಸುವ ಯಾವುದೇ ಬಗೆಯ ಉಡುಪುಗಳನ್ನು ಧರಿಸಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗಬಾರದು ಅಂತ ಮಧ್ಯಂತರ ಆದೇಶ ನೀಡಿದೆ.
ಸೋಮವಾರದಿಂದ 9 ಮತ್ತು 10 ನೇ ತರಗತಿಗಳು ಆರಂಭಿಸಲಾಗುವುದೆಂದು ಕರ್ನಾಟಕ ಸರ್ಕಾರ ಶುಕ್ರವಾರ ಹೇಳಿದೆ. ಒಂದೆರಡು ದಿನಗಳ ಬಳಿಕ ಕಾನೂನು ಮತ್ತು ಸುವ್ಯವಸ್ಥೆ ಗಮನಿಸಿ ಕಾಲೇಜುಗನ್ನು ಆರಂಭಿಸಲಾಗುವುದೆಂದು ಸರ್ಕಾರ ಹೇಳಿದೆ.
ಇದನ್ನೂ ಓದಿ: ಹಿಜಾಬ್ ವಿವಾದ: ಡಾ.ಎ.ಪಿ.ಜೆ ಅಬ್ದುಲ್ ಕಲಾಂರ ಸಂದೇಶದ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಮುಂದಾದ ಕಲಾವಿದ