siddeshwara swamiji: ಸಿದ್ದೇಶ್ವರ ಸ್ವಾಮೀಜಿಗಳು ಮುಂಚೆ ವಾಸವಿದ್ದ ಮನೆ ಸದ್ಯ ಹೇಗಿದೆ ನೋಡಿ

siddeshwara swamiji: ಸಿದ್ದೇಶ್ವರ ಸ್ವಾಮೀಜಿಗಳು ಮುಂಚೆ ವಾಸವಿದ್ದ ಮನೆ ಸದ್ಯ ಹೇಗಿದೆ ನೋಡಿ

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jan 02, 2023 | 8:52 PM

ತಮಶೆಟ್ಟಿ ಕುಟುಂಬದ ಮನೆಯಲ್ಲಿ ಸಿದ್ದೇಶ್ವರ ಸ್ವಾಮೀಜಿ ಉಪಯೋಗಿಸಿದ ವಸ್ತುಗಳ ರಕ್ಷಣೆ ಮಾಡಲಾಗಿದ್ದು, ಸಿದ್ದೇಶ್ವರ ಸ್ವಾಮೀಜಿ‌ಯವರ ಗುರುಗಳು ನೀಡಿರುವ ದಂಡ, ಮಂಚ, ದಿಂಬು ರಕ್ಷಣೆ ಮಾಡಲಾಗಿದೆ.

ವಿಜಯಪುರ: ನಡೆದಾಡುವ ದೇವರು ಎಂದು ಖ್ಯಾತಿ ಹೊಂದಿರುವ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ (Siddeshwar swamiji) ಅವರು ಕಳೆದ ಒಂದು ವಾರಕ್ಕಿಂತಲೂ ಹೆಚ್ಚು ದಿನದಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸದ್ಯ ಅವರಿಗೆ ಆಶ್ರಮದಲ್ಲಿಯೇ ಚಿಕಿತ್ಸೆ ಮುಂದುವರೆಸಲಾಗುತ್ತಿದೆ. ಸಿದ್ದೇಶ್ವರ ಸ್ವಾಮೀಜಿ ಅವರು ವಿಜಯಪುರದ ಅಕ್ಕಮಹಾದೇವಿ ರಸ್ತೆಯ ತಮಶೆಟ್ಟಿ ಕುಟುಂಬದಲ್ಲಿ ಜನಿಸಿದರು. ತಮಶೆಟ್ಟಿ ಕುಟುಂಬದ ಮನೆಯಲ್ಲಿ ಸಿದ್ದೇಶ್ವರ ಸ್ವಾಮೀಜಿ ಉಪಯೋಗಿಸಿದ ವಸ್ತುಗಳ ರಕ್ಷಣೆ ಮಾಡಲಾಗಿದ್ದು, ಸಿದ್ದೇಶ್ವರ ಸ್ವಾಮೀಜಿ‌ಯವರ ಗುರುಗಳು ನೀಡಿರುವ ದಂಡ, ಮಂಚ, ದಿಂಬು ರಕ್ಷಣೆ ಮಾಡಲಾಗಿದೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.