ಹಿರಿಯ ನಟ ಶಿವರಾಂ ಅವರ ಅಂತ್ಯಕ್ರಿಯೆ ವಿಡಿಯೋ ಇಲ್ಲಿದೆ
ಅಕ್ಟೋಬರ್ ತಿಂಗಳಲ್ಲಿ ಪುನೀತ್ ರಾಜ್ಕುಮಾರ್ ಅಕಾಲಿಕ ಮರಣ ಹೊಂದಿದ್ದರು. ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಶಾಕ್ಗೆ ಒಳಗಾಗಿತ್ತು. ಇದಾದ ಬೆನ್ನಲ್ಲೇ ಶಿವರಾಂ ಕೂಡ ನಿಧನ ಹೊಂದಿರುವ ವಿಚಾರ ಸ್ಯಾಂಡಲ್ವುಡ್ಗೆ ಆಘಾತ ತಂದಿದೆ.
ಸ್ಯಾಂಡಲ್ವುಡ್ನ ಹಿರಿಯ ನಟ ಹಾಗೂ ನಿರ್ಮಾಪಕ ಶಿವರಾಂ ಅವರ ಅಂತ್ಯಕ್ರಿಯೆ ಇಂದು (ಡಿಸೆಂಬರ್ 5) ಮಧ್ಯಾಹ್ನ ನೆರವೇರಿದೆ. ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಶಿವರಾಂ ಮಕ್ಕಳಾದ ರವಿಶಂಕರ್, ಲಕ್ಷ್ಮೀಶ್ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಸ್ಯಾಂಡಲ್ವುಡ್ಗೆ ಮಾರ್ಗದರ್ಶಕರಾಗಿದ್ದ ಶಿವರಾಂ ಅವರು, ಪಂಚಭೂತಗಳಲ್ಲಿ ಲೀನರಾದರು. ಅವರನ್ನು ಕಳೆದುಕೊಂಡ ಚಿತ್ರರಂಗ ಬಡವಾಗಿದೆ. ಅಂತ್ಯ ಸಂಸ್ಕಾರಕ್ಕೂ ಮೊದಲು ಪಾರ್ಥಿವ ಶರೀರಕ್ಕೆ ಅಷ್ಟಾಭಿಷೇಕದ ಪೂಜೆ ಮಾಡಲಾಯಿತು. ತುಪ್ಪ, ಹೂವು, ಗಂಧ, ವಿಭೂತಿ, ಖರ್ಜೂರ, ಕೆಂಪು, ಕಲ್ಲು ಸಕ್ಕರೆ, ಹಾಲು, ಮೊಸರು , ಅವಲಕ್ಕಿಯಿಂದ ಪೂಜೆ ನಡೆಸಲಾಯಿತು. ಅಕ್ಟೋಬರ್ ತಿಂಗಳಲ್ಲಿ ಪುನೀತ್ ರಾಜ್ಕುಮಾರ್ ಅಕಾಲಿಕ ಮರಣ ಹೊಂದಿದ್ದರು. ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಶಾಕ್ಗೆ ಒಳಗಾಗಿತ್ತು. ಇದಾದ ಬೆನ್ನಲ್ಲೇ ಶಿವರಾಂ ಕೂಡ ನಿಧನ ಹೊಂದಿರುವ ವಿಚಾರ ಸ್ಯಾಂಡಲ್ವುಡ್ಗೆ ಆಘಾತ ತಂದಿದೆ. ಸಾಕಷ್ಟು ಸೆಲೆಬ್ರಿಟಿಗಳು ಅವರ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ.
ಇದನ್ನೂ ಓದಿ: ಪಂಚಭೂತಗಳಲ್ಲಿ ಹಿರಿಯ ನಟ ಶಿವರಾಂ ಲೀನ; ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ