Viral Video: ರೈಲಿನ ಎಂಜಿನ್​ಗೆ ಸಿಲುಕಿದ ವೃದ್ಧ ಕೂದಲೆಳೆ ಅಂತರದಲ್ಲಿ ಪಾರು; ಮೈ ಜುಂ ಎನ್ನಿಸುವ ವಿಡಿಯೋ
ಅಪಘಾತದ ದೃಶ್ಯ

Viral Video: ರೈಲಿನ ಎಂಜಿನ್​ಗೆ ಸಿಲುಕಿದ ವೃದ್ಧ ಕೂದಲೆಳೆ ಅಂತರದಲ್ಲಿ ಪಾರು; ಮೈ ಜುಂ ಎನ್ನಿಸುವ ವಿಡಿಯೋ

Edited By:

Updated on: Jul 19, 2021 | 8:52 AM

ರೈಲಿಗೆ ಸಿಲುಕಿದ್ದ ಹಿರಿಯ ಜೀವ ಅಚ್ಚರಿಯ ರೀತಿಯಲ್ಲಿ ಸ್ವಲ್ಪದರಲ್ಲೇ ಕೂದಲೆಳೆ ಅಂತರದಿಂದ ಬಚಾವಾಗಿದ್ದಾರೆ. ಪ್ರಾಣಾಪಾಯದಿಂದ ಪಾರಾದ ವೃದ್ಧ ಯಮನನ್ನೇ ಜಯಿಸಿದ್ದು, ಅಪಘಾತದ ದೃಶ್ಯ ಮೈ ಜುಮ್ಮೆನ್ನಿಸುವಂತಿದೆ.

ಮಹಾರಾಷ್ಟ್ರದ ಮುಂಬೈನಲ್ಲಿ ಪವಾಡ ಸದೃಶ್ಯ ರೀತಿಯಲ್ಲಿ ವೃದ್ಧರೊಬ್ಬರು ಬದುಕುಳಿದಿದ್ದಾರೆ. ಮುಂಬೈನ ಕಲ್ಯಾಣದಲ್ಲಿ ವೃದ್ಧ ವ್ಯಕ್ತಿ ರೈಲು ಹಳಿ ದಾಟುವಾಗ ಈ ಚಮತ್ಕಾರ ನಡೆದಿದ್ದು, ರೈಲಿಗೆ ಸಿಲುಕಿದ್ದ ಹಿರಿಯ ಜೀವ ಅಚ್ಚರಿಯ ರೀತಿಯಲ್ಲಿ ಸ್ವಲ್ಪದರಲ್ಲೇ ಕೂದಲೆಳೆ ಅಂತರದಿಂದ ಬಚಾವಾಗಿದೆ. ಪ್ರಾಣಾಪಾಯದಿಂದ ಪಾರಾದ ವೃದ್ಧ ಯಮನನ್ನೇ ಜಯಿಸಿದ್ದು, ಅಪಘಾತದ ದೃಶ್ಯ ಮೈ ಜುಮ್ಮೆನ್ನಿಸುವಂತಿದೆ.

ಮುಂಬೈನ ಕಲ್ಯಾಣದಲ್ಲಿ ರೈಲ್ವೈ ಕ್ರಾಸ್‌ ಮಾಡುವಾಗ ಈ ಅಪಘಾತದಲ್ಲಿ ನಡೆದಿದೆ. ರೈಲು ಹಳಿ ದಾಟುತ್ತಿದ್ದ ಹಿರಿಯ ನಾಗರಿಕನನ್ನು ಕಂಡು ಟ್ರೈನ್‌ ಚಾಲಕ ತಕ್ಷಣವೇ ಬ್ರೇಕ್ ಹಾಕಿ ಸಮಯ ಪ್ರಜ್ಞೆ ಮೆರೆದಿದ್ದರಿಂದ ಅನಾಹುತ ತಪ್ಪಿದೆ. ಹಿರಿಯ ಜೀವ ಕೂದಲೆಳೆಯ ಅಂತರದಲ್ಲಿ ಪವಾಡದ ರೀತಿಯಲ್ಲಿ ಸಾವು ಗೆದ್ದಿದ್ದು, ಟ್ರೈನ್‌ ಎಂಜಿನ್‌ ಮುಂದೆ ಸಿಲುಕಿಕೊಂಡಿದ್ದ ಅವರನ್ನು ಸ್ಥಳೀಯರು ಕೂಡಲೇ ರಕ್ಷಿಸಿದ್ದಾರೆ.

(Senior Citizen escaped from death while crossing Railway in Mumbai)

ಇದನ್ನೂ ಓದಿ:
ತಡೆಗೋಡೆ ಮೇಲೆ ಕುಳಿತು ಸೆಲ್ಫಿ ತೆಗೆದುಕೊಳ್ಳುವಾಗ ಸಮುದ್ರಕ್ಕೆ ಬಿದ್ದ ಯುವತಿ; ವ್ಯಕ್ತಿಯ ಸಮಯಪ್ರಜ್ಞೆಯಿಂದ ಬಚಾವ್