Assembly Polls: ಪ್ರಜಾಧ್ವನಿ ಯಾತ್ರೆಗೆ ಸೇರದ ಜನ, ಹೋಟೆಲೊಂದರಲ್ಲಿ ಹರಟುತ್ತಾ ಸಮಯ ಕಳೆದ ಕಾಂಗ್ರೆಸ್ ನಾಯಕರು!
ಕೋಲಾರ ಜಿಲ್ಲೆ ಪ್ರವಾಸದಲ್ಲಿ ಡಿಕೆ ಶಿವಕುಮಾರ ಸಿದ್ದರಾಮಯ್ಯ, ಬಿಕೆ ಹರಿಪ್ರಸಾದ್, ರಾಮಲಿಂಗಾರೆಡ್ಡಿ ಮೊದಲಾದ ಘಟಾನುಘಟಿ ನಾಯಕರಿದ್ದರೂ ಜನರ ಕೊರತೆ ಎದ್ದುಕಾಣುತಿತ್ತು
ಕೋಲಾರ: ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಪ್ರಜಾಧ್ವನಿ ಯಾತ್ರೆಗೆ (Prajadhvani Yatre) ಆಗಲೇ ಹಿನ್ನೆಡೆ ಉಂಟಾಗುತ್ತಿದೆಯೇ? ಈ ವರದಿಯನ್ನು ನೋಡುತ್ತಿದ್ದರೆ ಹೌದೆನಿಸುತ್ತದೆ. ಸೋಮವಾರ ಕೋಲಾರ ಜಿಲ್ಲೆ ಪ್ರವಾಸದಲ್ಲಿ ಡಿಕೆ ಶಿವಕುಮಾರ (DK Shivakumar), ಸಿದ್ದರಾಮಯ್ಯ (Siddaramaiah), ಬಿಕೆ ಹರಿಪ್ರಸಾದ್, ರಾಮಲಿಂಗಾರೆಡ್ಡಿ ಮೊದಲಾದ ಘಟಾನುಘಟಿ ನಾಯಕರಿದ್ದರೂ ಜನರ ಕೊರತೆ ಎದ್ದುಕಾಣುತಿತ್ತು. ಹಾಗಾಗೇ, ಈ ನಾಯಕರೆಲ್ಲ, ಜಿಲ್ಲೆಯ ನರಸಾಪುರದಲ್ಲಿರುವ ಹೋಟೆಲೊಂದರಲ್ಲಿ ಲೋಕಾಭಿರಾಮವಾಗಿ ಮಾತಾಡುತ್ತಾ ಹೆಚ್ಚಿನ ಸಮಯ ಕಳೆದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ