IND vs SA: ಭರ್ಜರಿ ಶತಕ ಸಿಡಿಸಿದ ಮುತ್ತುಸಾಮಿ
India vs South Africa 2nd Test: ಎರಡನೇ ದಿನದಾಟದ ಭೋಜನಾ ವಿರಾಮದ ವೇಳೆ ಸೌತ್ ಆಫ್ರಿಕಾ ತಂಡವು 7 ವಿಕೆಟ್ ಕಳೆದುಕೊಂಡು 428 ರನ್ ಕಲೆಹಾಕಿದೆ. ಸದ್ಯ ಸೆನುರಾನ್ ಮುತ್ತುಸಾಮಿ (107) ಹಾಗೂ ಮಾರ್ಕೊ ಯಾನ್ಸನ್ (51) ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಆಫ್ರಿಕಾ ಪಡೆ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.
ಗುವಾಹಟಿಯಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಸೌತ್ ಆಫ್ರಿಕಾ ತಂಡದ ಆಲ್ರೌಂಡರ್ ಸೆನುರಾನ್ ಮುತ್ತುಸಾಮಿ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೆನುರಾನ್ ಆಕರ್ಷಕ ಬ್ಯಾಟಿಂಗ್ನೊಂದಿಗೆ ಗಮನ ಸೆಳೆದರು. ಅಷ್ಟೇ ಅಲ್ಲದೆ 191 ಎಸೆತಗಳಲ್ಲಿ ಶತಕ ಪೂರೈಸಿದರು.
ವಿಶೇಷ ಎಂದರೆ ಇದು ಸೆನುರಾನ್ ಮುತ್ತುಸಾಮಿ ಅವರ ಚೊಚ್ಚಲ ಟೆಸ್ಟ್ ಶತಕವಾಗಿದೆ. ಈ ಶತಕದೊಂದಿಗೆ ಸೌತ್ ಆಫ್ರಿಕಾ ತಂಡದ ಸ್ಕೋರ್ 400 ರನ್ಗಳ ಗಡಿದಾಟಿದೆ.
ಎರಡನೇ ದಿನದಾಟದ ಭೋಜನಾ ವಿರಾಮದ ವೇಳೆ ಸೌತ್ ಆಫ್ರಿಕಾ ತಂಡವು 7 ವಿಕೆಟ್ ಕಳೆದುಕೊಂಡು 428 ರನ್ ಕಲೆಹಾಕಿದೆ. ಸದ್ಯ ಸೆನುರಾನ್ ಮುತ್ತುಸಾಮಿ (107) ಹಾಗೂ ಮಾರ್ಕೊ ಯಾನ್ಸನ್ (51) ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಆಫ್ರಿಕಾ ಪಡೆ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.
ಸೌತ್ ಆಫ್ರಿಕಾ ಪ್ಲೇಯಿಂಗ್ 11: ಐಡೆನ್ ಮಾರ್ಕ್ರಾಮ್, ರಯಾನ್ ರಿಕೆಲ್ಟನ್, ವಿಯಾನ್ ಮುಲ್ಡರ್, ಟೆಂಬಾ ಬವುಮಾ (ನಾಯಕ), ಟೋನಿ ಡಿ ಝೋರ್ಝಿ, ಟ್ರಿಸ್ಟನ್ ಸ್ಟಬ್ಸ್, ಕೈಲ್ ವೆರ್ರೆನ್ (ವಿಕೆಟ್ ಕೀಪರ್), ಮಾರ್ಕೊ ಯಾನ್ಸೆನ್, ಸೆನುರಾನ್ ಮುತ್ತುಸಾಮಿ, ಸೈಮನ್ ಹಾರ್ಮರ್, ಕೇಶವ್ ಮಹಾರಾಜ್.
ಭಾರತ ಪ್ಲೇಯಿಂಗ್ 11: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಧ್ರುವ ಜುರೆಲ್, ರಿಷಭ್ ಪಂತ್ (ನಾಯಕ), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.