PAK vs SA: ಮುತ್ತುಸಾಮಿ ಸ್ಪಿನ್ಗೆ ತಿರುಗಿ ಬಿದ್ದ ಪಾಕಿಸ್ತಾನ್
Pakistan vs South Africa, 1st Test : ಈ ಅರ್ಧಶತಕಗಳ ನೆರವಿನೊಂದಿಗೆ ಪಾಕಿಸ್ತಾನ್ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 313 ರನ್ ಕಲೆಹಾಕಿತ್ತು. ಇನ್ನು ದ್ವಿತೀಯ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಪಾಕಿಸ್ತಾನ್ ತಂಡಕ್ಕೆ ಆಘಾತ ಮೇಲೆ ಆಘಾತ ನೀಡುವಲ್ಲಿ ಸೌತ್ ಆಫ್ರಿಕಾ ಸ್ಪಿನ್ನರ್ ಸೆನುರಾನ್ ಮುತ್ತುಸಾಮಿ ಯಶಸ್ವಿಯಾಗಿದ್ದಾರೆ. ಪರಿಣಾಮ 65 ರನ್ ಪೇರಿಸುವಷ್ಟರಲ್ಲಿ ಪಾಕಿಸ್ತಾನ್ ತಂಡ 5 ವಿಕೆಟ್ ಕಳೆದುಕೊಂಡಿದೆ.
ಲಾಹೋರ್ನಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಪಾಕಿಸ್ತಾನ್ ತಂಡ 378 ರನ್ಗಳಿಸಿ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಶಾನ್ ಮಸೂದ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ಪರ ಇಮಾಮ್ ಉಲ್ ಹಕ್ (93) ಹಾಗೂ ಶಾನ್ ಮಸೂದ್ (76) ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದರು.
ಈ ಅರ್ಧಶತಕಗಳ ನೆರವಿನೊಂದಿಗೆ ಪಾಕಿಸ್ತಾನ್ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 313 ರನ್ ಕಲೆಹಾಕಿತ್ತು. ಇನ್ನು ದ್ವಿತೀಯ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಪಾಕಿಸ್ತಾನ್ ತಂಡಕ್ಕೆ ಆಘಾತ ಮೇಲೆ ಆಘಾತ ನೀಡುವಲ್ಲಿ ಸೌತ್ ಆಫ್ರಿಕಾ ಸ್ಪಿನ್ನರ್ ಸೆನುರಾನ್ ಮುತ್ತುಸಾಮಿ ಯಶಸ್ವಿಯಾಗಿದ್ದಾರೆ. ಪರಿಣಾಮ 65 ರನ್ ಪೇರಿಸುವಷ್ಟರಲ್ಲಿ ಪಾಕಿಸ್ತಾನ್ ತಂಡ 5 ವಿಕೆಟ್ ಕಳೆದುಕೊಂಡಿದೆ.
ಅದರಂತೆ ಇದೀಗ ಪಾಕಿಸ್ತಾನ್ ತಂಡವು 378 ರನ್ಗಳಿಗೆ ಆಲೌಟ್ ಆಗಿ ಮೊದಲ ಇನಿಂಗ್ಸ್ ಅಂತ್ಯಗೊಳಿಸಿದೆ. ಸೌತ್ ಆಫ್ರಿಕಾ ಪರ 32 ಓವರ್ಗಳನ್ನು ಎಸೆದ ಸೆನುರಾನ್ ಮುತ್ತುಸಾಮಿ 117 ರನ್ ನೀಡಿ 6 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
