ನೆಲಮಂಗಲ ಬಳಿ ಸರಣಿ ಅಪಘಾತ ಸಂಭವಿಸಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ
ರಾಷ್ಟ್ರೀಯ ಹೆದ್ದಾರಿ ಹಾದುಬರುವ ಮತ್ತು ನೆಲಮಂಗಲ ಪಟ್ಟಣಕ್ಕೆ ಬಹಳ ಹತ್ತಿರದಲ್ಲಿರುವ ಎಡೆಹಳ್ಳಿ ಹೆಸರಿನ ಊರಿನ ಬಳಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಒಂದು ಕಾರು ಸಹ ಸ್ವಲ್ಪ ಜಖಂಗೊಂಡಿದೆ. ಹಾಗಾಗಿ ಇದೊಂದು ಸರಣಿ ಅಪಘಾತ ಅನ್ನಲು ಅಡ್ಡಿಯಿಲ್ಲ.
ನೆಲಮಂಗಲದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಸೋಮವಾರ ಬೆಳಗ್ಗೆ ತಮ್ಮ ತಮ್ಮ ವಾಹನಗಳಲ್ಲಿ ಬೆಂಗಳೂರು ಕಡೆ ಬರುತ್ತಿದ್ದ ಜನ ತೀವ್ರ ಸ್ವರೂಪ ಅಡಚಣೆ ಎದುರಿಸಬೇಕಾಯಿತು. ಒಂದು ಸರಣಿ ಆಪಘಾತದಿಂದಾಗಿ ವಾಹನಗಳ ಓಡಾಟಕ್ಕೆ (vehicular movement) ವ್ಯತ್ಯಯ ಉಂಟಾಗಿತ್ತು. ಬೆಂಗಳೂರಿಗೆ ಹೊರಟಿದ್ದ ದಾವಣಗೆರೆ ವಿಭಾಗ (Davanagere Division) ಮತ್ತು ದಾವಣಗೆರೆ ಡಿಪೋದ ಐರಾವತ ಬಸ್ಸೊಂದು (Airavat Super Delux Bus) ರಸ್ತೆ ಪಕ್ಕ ನಿಂತಿದ್ದ ಟ್ರಕ್ಕ್ ಒಂದಕ್ಕೆ ಹಿಂದಿನಿಂದ ಗುದ್ದಿದೆ. ಬಸ್ಸಿನ ಕ್ಯಾಬಿನ್ನಿನ ಗ್ಲಾಸ್ ಒಡೆದು ಚೂರಾಗಿ ಮುಂಭಾಗ ಸ್ವಲ್ಪ ನಗ್ಗಿ ಹೋಗಿರುವುದರಿಂದ ಢಿಕ್ಕಿಯ ತೀವ್ರತೆ ಜೋರಾಗಿತ್ತೆಂದು ಹೇಳಬಹುದು. ಆದರೆ ಗಮನಿಸಬೇಕಾದ ಅಂಶವೇನೆಂದರೆ, ಬಸ್ಸಿನ ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕರಲ್ಲಿ ಯಾರಿಗೂ ಗಾಯವಾಗಿಲ್ಲ. ರಾಷ್ಟ್ರೀಯ ಹೆದ್ದಾರಿ ಹಾದುಬರುವ ಮತ್ತು ನೆಲಮಂಗಲ ಪಟ್ಟಣಕ್ಕೆ ಬಹಳ ಹತ್ತಿರದಲ್ಲಿರುವ ಎಡೆಹಳ್ಳಿ ಹೆಸರಿನ ಊರಿನ ಬಳಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಒಂದು ಕಾರು ಸಹ ಸ್ವಲ್ಪ ಜಖಂಗೊಂಡಿದೆ. ಹಾಗಾಗಿ ಇದೊಂದು ಸರಣಿ ಅಪಘಾತ ಅನ್ನಲು ಅಡ್ಡಿಯಿಲ್ಲ. ಕಾರಿನ ಚಾಲಕ ಅವರೊಂದಿಗೆ ಪ್ರಯಾಣಿಸುತ್ತಿದ್ದ ಜನ ಸಹ ಸುರಕ್ಷಿತವಾಗಿದ್ದಾರೆ.
ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣವೊಂದು ದಾಖಲಾಗಿದೆ. ಸೋಮವಾರ ವಾರದ ಮೊದಲ ದಿನ ಆಗಿರುವುದರಿಂದ ಆಫೀಸಿಗೆ ಬರುವ ನೌಕರರು ಮತ್ತು ವೈಯಕ್ತಿಕ ಕೆಲಸಗಳ ನಿಮಿತ್ತ ಬೆಂಗಳೂರಿನಲ್ಲಿರುವ ಬೇರೆ ಬೇರೆ ಕಚೇರಿಗಳಿಗೆ ಬರುವವರ ಸಂಖ್ಯೆ ವಾರದ ಇತರ ದಿನಗಳಿಗಿಂತ ಜಾಸ್ತಿ ಇರುತ್ತದೆ.
ಬೆಳಗಿನ ಹೊತ್ತೇ ನೆಲಮಂಗಲದಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗಿದ್ದರಿಂದ ಅವರೆಲ್ಲ ಬಸ್ ಡ್ರೈವರನ್ನು ಶಪಿಸುತ್ತಿದ್ದಿದ್ದು ಕಂಡುಬಂತು.
ಇದನ್ನೂ ಓದಿ: Viral Video: ಆನೆ ಜತೆಗೆ ಫುಟ್ಬಾಲ್ ಆಡುತ್ತಿದ್ದ ಬಾಲಕಿ ಆನೆ ಹಾಲು ಕುಡಿಯಲು ಮುಂದಾಗಿದ್ದೇಕೆ? ಇಲ್ಲಿದೆ ವೈರಲ್ ವಿಡಿಯೋ