ಉತ್ತರ ಕನ್ನಡದಲ್ಲಿ ಅಪರೂಪದ ಆಲಿವ್ ರಿಡ್ಲೆ ಆಮೆಯ ಮೊಟ್ಟೆಗಳು ಪತ್ತೆ

ಕಾರವಾರ ತಾಲೂಕಿನ ಮಾಜಾಳಿ ಕಡಲ ತೀರದಲ್ಲಿ 113 ಆಲಿವ್ ರಿಡ್ಲ್ ಆಮೆಗಳ ಮೊಟ್ಟೆಗಳು ಪತ್ತೆಯಾಗಿವೆ.

TV9kannada Web Team

| Edited By: sandhya thejappa

Jan 31, 2022 | 6:06 PM

ಉತ್ತರ ಕನ್ನಡ: ಜಿಲ್ಲೆಯ ಕಡಲತೀರ ಅನೇಕ ಜೀವವೈವಿಧ್ಯ ಸಂಕುಲಗಳ ವಾಸಸ್ಥಾನ ಅಂತಾ ಮತ್ತೆ ಮತ್ತೆ ಸಾಭಿತಾಗುತ್ತಿದೆ. ಅಳಿವಿನ ಅಂಚಿನಲ್ಲಿರುವ ಆಲಿವ್ ರಿಡ್ಲೆ (Alive Riddle) ಆಮೆಗಳು ಜಿಲ್ಲೆಯ ಕಡಲತೀರವನ್ನ ಸಂತಾನೋತ್ಪತ್ತಿ ತಾಣವನ್ನಾಗಿ ಮಾಡಿಕೊಂಡಿದ್ದು, ಕಡಲತೀರ ಭಾಗಗಳಲ್ಲಿ ಅಲ್ಲಲ್ಲಿ ಮೊಟ್ಟೆಗಳನ್ನ ಇಟ್ಟು ತೆರಳುತ್ತಿವೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಒಳಪಡುವ ಆಮೆಗಳ ಮೊಟ್ಟೆಗಳನ್ನು ಸಂರಕ್ಷಣೆ ಮಾಡುವುದಕ್ಕೆ ಅರಣ್ಯ ಅಧಿಕಾರಿಗಳು ಮುಂದಾಗಿದ್ದಾರೆ.

140 ಕೀ.ಮೀ ಗೂ ಅಧಿಕ ವ್ಯಾಪ್ತಿಯ ಕಡಲತೀರವನ್ನ ಹೊಂದಿರುವ ಉತ್ತರ ಕನ್ನಡ ಜಿಲ್ಲೆ, ಸಹಸ್ರಾರು ವೈವಿಧ್ಯಮಯ ಜೀವಿಸಂಕುಲಗಳ ವಾಸಸ್ಥಾನವಾಗಿದೆ. ವಿವಿಧ ಜಾತಿಯ ಮೀನುಗಳು, ಕಪ್ಪೆಚಿಪ್ಪು, ನೀಲಿಕಲ್ಲು, ವೈಟ್ ಸ್ಟಾರ್, ಆಲಿವ್ ರಿಡ್ಲೆ ಆಮೆಗಳು, ಡಾಲ್ಪಿನ್ ಹೀಗೆ ಹಲವು ವೈವಿಧ್ಯಮಯ ಜೀವಿಗಳ ವಾಸಸ್ಥಾನವಾಗಿದೆ. ಅದರಲ್ಲೂ ಅಳಿವಿನ ಅಂಚಿನಲ್ಲಿರುವ ಆಲಿವ್ ರಿಡ್ಲೆ ಆಮೆಗಳು ಉತ್ತರ ಕನ್ನಡ ಜಿಲ್ಲೆಯ ಕಡಲತೀರವನ್ನ ಸಂತಾನೋತ್ಪತ್ತಿ ತಾಣವನ್ನಾಗಿ ಮಾಡಿಕೊಂಡಿವೆ. ಜಿಲ್ಲೆಯ ದೇವಬಾಗ, ಅಂಕೋಲ, ಮಾಜಾಳಿ ಹೀಗೆ ಹಲವು ಪ್ರದೇಶದಲ್ಲಿ ಆಮೆಗಳು ಮೊಟ್ಟೆ ಇಟ್ಟು ತೆರಳುತ್ತಿವೆ.

ಇಂದು (ಜ.31) ಮಾಜಾಳಿ ಕಡಲತೀರದಲ್ಲಿ 113 ಆಮೆಗಳ ಮೊಟ್ಟೆಗಳು ಸಿಕ್ಕಿವೆ. ಅವುಗಳ ಸಂರಕ್ಷಣೆ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ. ಅಳಿವಿನ ಅಂಚಿನಲ್ಲಿರುವ ಆಲಿವ್ ರಿಡ್ಲೆ ಆಮೆಗಳು, ವನ್ಯಜೀವಿ ಸಂರಕ್ಷಣೆಗೊಳಪಡುತ್ತದೆ. ಇಲ್ಲಿಯವರಗೆ ಸುಮಾರು 350 ಕ್ಕೂ ಅಧಿಕ ಆಲಿವ್ ರಿಡ್ಲೆ ಆಮೆಗಳ ಮೊಟ್ಟೆಗಳನ್ನು ಅರಣ್ಯ ಇಲಾಖೆ ರಕ್ಷಣೆ ಮಾಡಿದೆ.

ಹೆಚ್ಚಾಗಿ ಈ ಆಮೆಗಳು ಡಿಸೆಂಬರ್​ನಿಂದ ಮಾಚ್೯ ತಿಂಗಳವರಗೆ ಮೊಟ್ಟೆಗಳನ್ನು ಇಡುತ್ತವೆ. ವಿಶೇಷ ಅಂದರೆ ಹುಣ್ಣಿಮೆ ಬೆಳಕಿನಂದು ಮತ್ತು ಶಾಂತ ಪ್ರದೇಶದಲ್ಲಿ ಮಾತ್ರ ಆಮೆಗಳು ಮೊಟ್ಟೆಗಳನ್ನು ಇಡುತ್ತವೆ. ಅಳಿವಿನ ಅಂಚಿನಲ್ಲಿರುವ ಆಮೆಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಜನ ಮೊಟ್ಟೆಗಳನ್ನ ತಿನ್ನುತ್ತಾರೆ ಮತ್ತು ಹಣಕ್ಕಾಗಿ ಮಾರಟ ಮಾಡುತ್ತಾರೆ. ಹೀಗಾಗಿ ಅರಣ್ಯ ಇಲಾಖೆ ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ ಮೊಟ್ಟೆಗಳ ಇರುವಿಕೆ ಬಗ್ಗೆ ಮಾಹಿತಿ ನೀಡಿದವರಿಗೆ ಗೌರವ ಧನ ಸಹ ನೀಡ ಪ್ರೋತ್ಸಾಹ ಮಾಡುತ್ತಿದ್ದಾರೆ. ಮೊಟ್ಟೆಗಳಿಂದ ಆಮೆ ಮರಿಗಳು ಹೊರ ಬರುವುದಕ್ಕೆ ಸುಮಾರು 45 ದಿನಗಳ ಕಾಲ ಬೇಕಾಗುತ್ತದೆ.

ಇದನ್ನೂ ಓದಿ;

ಶಾಸಕಿ ಅಂಜಲಿ ನಿಂಬಾಳ್ಕರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರದ ಕನ್ನಡಿಗರು! ಕಾರಣ ಇಲ್ಲಿದೆ

ಮೊಬೈಲ್​ನಲ್ಲೇ ವೋಟರ್ ಐಡಿ ಡೌನ್​ಲೋಡ್ ಮಾಡೋದು ಹೇಗೆ? ಇಲ್ಲಿದೆ ಸರಳ ವಿಧಾನ

Follow us on

Click on your DTH Provider to Add TV9 Kannada