ಖದೀಮರಿಗಿಲ್ಲ ಪೊಲೀಸರ ಭಯ: ಠಾಣೆ ಸುತ್ತಮುತ್ತನೇ ದರೋಡೆ
ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಸೂರ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗಿದೆ. ಮನೆ, ಕ್ಲಿನಿಕ್ಗಳ ಬೀಗ ಮುರಿದು ನಗದು, ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆ. ಧನುಷ್ ಎಂಬುವರ ಮನೆ ಬೀಗ ಮುರಿದು 50 ಸಾವಿರ ನಗದು, 80 ಗ್ರಾಂ ಚಿನ್ನಾಭರಣ, 1 ವಜ್ರದ ಉಂಗುರ, ಬೆಳ್ಳಿ ಆಭರಣ ಸೇರಿ ಸುಮಾರು 10 ಲಕ್ಷ ರೂ. ಮೌಲ್ಯದ ವಸ್ತುಗಳನ್ನ ಎಗರಿಸಿಕೊಂಡು ಹೋಗಿದ್ದಾರೆ. ಇನ್ನು ಸಂಗಮೇಶ್ವರ ಪಾಲಿ ಕ್ಲಿನಿಕ್ನಲ್ಲಿದ್ದ 5 ಲಕ್ಷ ನಗದು, 10 ಗ್ರಾಂ ಚಿನ್ನಾಭರಣ ಕಳ್ಳತನವಾಗಿದ್ದು, ಈ ಸಂಬಂಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಘಟನೆ ಸಂಬಂಧ ಪೊಲೀಸ್ ಅಧಿಕಾರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಆನೇಕಲ್, (ಡಿಸೆಂಬರ್ 08): ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಸೂರ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗಿದೆ. ಮನೆ, ಕ್ಲಿನಿಕ್ಗಳ ಬೀಗ ಮುರಿದು ನಗದು, ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆ. ಧನುಷ್ ಎಂಬುವರ ಮನೆ ಬೀಗ ಮುರಿದು 50 ಸಾವಿರ ನಗದು, 80 ಗ್ರಾಂ ಚಿನ್ನಾಭರಣ, 1 ವಜ್ರದ ಉಂಗುರ, ಬೆಳ್ಳಿ ಆಭರಣ ಸೇರಿ ಸುಮಾರು 10 ಲಕ್ಷ ರೂ. ಮೌಲ್ಯದ ವಸ್ತುಗಳನ್ನ ಎಗರಿಸಿಕೊಂಡು ಹೋಗಿದ್ದಾರೆ. ಇನ್ನು ಸಂಗಮೇಶ್ವರ ಪಾಲಿ ಕ್ಲಿನಿಕ್ನಲ್ಲಿದ್ದ 5 ಲಕ್ಷ ನಗದು, 10 ಗ್ರಾಂ ಚಿನ್ನಾಭರಣ ಕಳ್ಳತನವಾಗಿದ್ದು, ಈ ಸಂಬಂಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಘಟನೆ ಸಂಬಂಧ ಪೊಲೀಸ್ ಅಧಿಕಾರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
