ಕೋಲಾರದಲ್ಲಿ ಹಣದ ವಿಚಾರವಾಗಿ ಗಲಾಟೆ: ಮನೆಗೆ ಬೆಂಕಿ ಹಚ್ಚಿ ಹಲ್ಲೆ

| Updated By: ವಿವೇಕ ಬಿರಾದಾರ

Updated on: Jan 01, 2024 | 11:25 AM

ಹಣದ ವಿಚಾರವಾಗಿ ಗಲಾಟೆ ನಡೆದು, ಮನೆಗೆ ಬೆಂಕಿ ಹಚ್ಚಿ ಹಲ್ಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಯಡಹಳ್ಳಿ ಗ್ರಾಮದಲ್ಲಿ ರವಿವಾರ (ಡಿ.31)ರ ರಾತ್ರಿ ನಡೆದಿದೆ.

ಹೊಸ ವರ್ಷದ ದಿನವೇ ಹಣದ ವಿಚಾರವಾಗಿ ಗಲಾಟೆ ನಡೆದು, ಮನೆಗೆ ಬೆಂಕಿ ಹಚ್ಚಿ ಹಲ್ಲೆ ಮಾಡಿರುವ ಘಟನೆ ಕೋಲಾರ (Kolar) ಜಿಲ್ಲೆಯ ಮುಳಬಾಗಿಲು (Mulabagilu) ತಾಲೂಕಿನ ಯಡಹಳ್ಳಿ ಗ್ರಾಮದಲ್ಲಿ ರವಿವಾರ (ಡಿ.31)ರ ರಾತ್ರಿ ನಡೆದಿದೆ. ಸಂತೋಷ್, ಸುರೇಶ್ ಸೇರಿದಂತೆ ಹಲವರು ರೆಡ್ಡಪ್ಪ ಎಂಬುವವರ ಮನೆಗೆ ಬೆಂಕಿ ಹಚ್ಚಿ ಗಲಾಟೆ ಮಾಡಿದ್ದಾರೆ. ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಘಟನೆ ಸಂಬಂಧ ಪೊಲೀಸರು ಆರು ಜನರನ್ನು ವಶಕ್ಕೆ ಪಡೆದಿದ್ದಾರೆ.