ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ? ಇಲ್ಲಿದೆ ವಿಶ್ಲೇಷಣೆ

|

Updated on: Jan 10, 2025 | 8:11 PM

ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಸಮಸ್ಯೆ ಎದುರಾಗಲೆಲ್ಲ ಮೊದಲು ಬಂಡೆಯಂತೆ ನಿಲ್ಲೋದೇ ಡಿ.ಕೆ.ಶಿವಕುಮಾರ್. ಇದೇ ಡಿಕೆ ನಿನ್ನೆ ತಮಿಳುನಾಡಿನ ದೇಗುಲಗಳಿಗೆ ಪತ್ನಿ ಸಮೇತ ಭೇಟಿ ನೀಡಿದ್ರು. ಕುಂಭಕೋಣಂನಲ್ಲಿರುವ ಪ್ರತ್ಯಂಗಿರಾ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ, ಹವನ ನಡೆಸಿದ್ರು. ಹಾಗಾದ್ರೆ, ಏನಿದು ಪ್ರತ್ಯಂಗಿರಾ ಹೋಮ? ಈ ಹೋಮ ಮಾಡಿದ್ರೆ ರಾಜಕೀಯ ಶತ್ರು ನಾಶವಾಗ್ತಾರಾ? ಪ್ರತ್ಯಂಗಿರಾ ಹೋಮದ ಬಗ್ಗೆ ಶಲ್ವಪಿಳ್ಳೆ ಅಯ್ಯಂಗಾರ್‌ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ.

ಯಾಗ.. ಸುದರ್ಶನ ಮಹಾ ಯಾಗ.. ಪ್ರತ್ಯಂಗಿರಾ ದೇವಿಗೆ ವಿಶೇಷ ಪೂಜೆ.. ರಾಜಕೀಯ ನಾಯಕರು ಅಧಿಕಾರದ ದೃಷ್ಟಿಯಲ್ಲಿಟ್ಟುಕೊಂಡು, ತಮ್ಮ ಕನಸು ಈಡೇರಿಕೆಗಾಗಿ ದೇಗುಲಗಳಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿಸೋದು ಸಾಮಾನ್ಯ, ಈ ಹಿಂದೆ ಅದೆಷ್ಟೋ ಘಟಾನುಘಟಿ ನಾಯಕರು, ಅಧಿಕಾರಕ್ಕೇರುವ ಮುನ್ನ ಹೋಮ, ಯಾಗ ನಡೆಸಿರೋ ಉದಾಹಣೆಗಳು ಇದೆ.. ಇದೀಗ ಕನಸು ಈಡೇರಿಕೆಗಾಗಿ ತಮಿಳುನಾಡಿನ ಕುಂಭಕೋಣಂನಲ್ಲಿರುವ ಪ್ರತ್ಯಂಗಿರಾ ದೇವಿಗೆ ಡಿಸಿಎಂ ಡಿಕೆ ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಭಕ್ತಿ ಭಾವದಿಂದ ನಮಸ್ಕರಿಸಿದ್ದಾರೆ.

ಹೌದು… ಡಿ.ಕೆ.ಶಿವಕುಮಾರ್..ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಸಮಸ್ಯೆ ಎದುರಾಗಲೆಲ್ಲ ಮೊದಲು ಬಂಡೆಯಂತೆ ನಿಲ್ಲೋದೇ ಡಿ.ಕೆ.ಶಿವಕುಮಾರ್. ಇದೇ ಡಿಕೆ ನಿನ್ನೆ ತಮಿಳುನಾಡಿನ ದೇಗುಲಗಳಿಗೆ ಪತ್ನಿ ಸಮೇತ ಭೇಟಿ ನೀಡಿದ್ರು. ಕುಂಭಕೋಣಂನಲ್ಲಿರುವ ಪ್ರತ್ಯಂಗಿರಾ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ, ಹವನ ನಡೆಸಿದ್ರು. ಬಳಿಕ ಕಾಂಚೀಪುರಂನಲ್ಲಿರೋ ವರದರಾಜ್ ಪೆರುಮಾಳ್ ದೇವಸ್ಥಾನದಲ್ಲಿ ಮಹಾ ಸುದರ್ಶನ ಯಾಗ, ಗೋವರ್ಧನ ಹೋಮ ನೆರವೇರಿಸಿದ್ರು.

ಈ ಹಿಂದೆಯೂ ಅಧಿಕಾರಕ್ಕೇರೋ ಮುನ್ನ, ಹಲವು ರಾಜಕೀಯ ನಾಯಕರು ವಿಶೇಷ ಪೂಜೆ ಸಲ್ಲಿಸಿರೋ ಉದಾಹರಣೆಯೂ ಇದೆ, ಕೇರಳದ ಪುರಾಣ ಪ್ರಸಿದ್ಧ ರಾಜರಾಜೇಶ್ವರ ದೇಗುಲದಲ್ಲಿ ಕುಮಾರಸ್ವಾಮಿ ಪೂಜೆ ಸಲ್ಲಿಕೆ ಮಾಡಿದ್ದಾರೆ, ಇದಿಷ್ಟೇ ಅಲ್ಲ ಮಾಜಿ ಸಿಎಂ ಯಡಿಯೂರಪ್ಪರೂ ಕೂಡ ಪೂಜೆಯನ್ನ ಸಲ್ಲಿಸಿದ್ರು. ನಂತರದಲ್ಲಿ ಉನ್ನತ ಪಟ್ಟಕ್ಕೇರಿರುವ ಸಂಗತಿಯೂ ನಡೆದಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮನೆಯಲ್ಲಿ ಕೆಲ ಬೆಳವಣಿಗೆಗಳು ಆಗ್ತಿವೆ. ಅಧಿಕಾರ ಹಂಚಿಕೆಯ ಮಾತುಗಳು ಕೇಳಿ ಬರ್ತಿವೆ. ಇವೆಲ್ಲದರ ನಡುವೆಯೇ ಡಿಸಿಎಂ ಡಿಕೆ, ದೇಗುಲಕ್ಕೆ ಭೇಟಿ ನೀಡಿರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹಾಗಾದ್ರೆ, ಈ ವಿಶೇಷ ಪೂಜೆ, ಯಾಗ, ಹೋಮದ ಹಿಂದಿನ ರಹಸ್ಯವೇನು? ಈ ಹೋಮ ಮಾಡಿದ್ರೆ ರಾಜಕೀಯ ಶತ್ರು ನಾಶವಾಗ್ತಾರಾ? ಪ್ರತ್ಯಂಗಿರಾ ಹೋಮದ ಬಗ್ಗೆ ಶಲ್ವಪಿಳ್ಳೆ ಅಯ್ಯಂಗಾರ್‌ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ.