Lohitashwa: ‘ನನ್ನ ಕಣ್ಣೆದುರಲ್ಲೇ ತಂದೆಗೆ ಹೃದಯಾಘಾತ ಆಯ್ತು’: ಲೋಹಿತಾಶ್ವ ಆರೋಗ್ಯದ ಬಗ್ಗೆ ಪುತ್ರ ಶರತ್​ ಮಾಹಿತಿ

| Updated By: ಮದನ್​ ಕುಮಾರ್​

Updated on: Oct 11, 2022 | 2:08 PM

Kannada Actor Lohitashwa: 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಕಲಾವಿದ ಲೋಹಿತಾಶ್ವ ಅವರಿಗೆ ತೀವ್ರ ಅನಾರೋಗ್ಯ ಕಾಡುತ್ತಿದೆ. ಅವರ ಸ್ಥಿತಿ ಬಗ್ಗೆ ಪುತ್ರ ಶರತ್​ ಲೋಹಿತಾಶ್ವ ಮಾತನಾಡಿದ್ದಾರೆ.

ನಟ ಲೋಹಿತಾಶ್ವ (Lohitashwa) ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ‘ತಂದೆಯ ಸ್ಥಿತಿ ತುಂಬ ಗಂಭೀರವಾಗಿದೆ. ಸದ್ಯಕ್ಕೆ ಅವರು ವೆಂಟಿಲೇಟರ್​ನಲ್ಲಿ ಇದ್ದಾರೆ. ಶೀಘ್ರದಲ್ಲೇ ವೈದ್ಯರು ಹೆಚ್ಚಿನ ಮಾಹಿತಿ ನೀಡುತ್ತಾರೆ’ ಎಂದು ಪುತ್ರ ಶರತ್​ ಲೋಹಿತಾಶ್ವ ಹೇಳಿದ್ದಾರೆ. ಕೆಲವೇ ದಿನಗಳ ಹಿಂದೆ ಲೋಹಿತಾಶ್ವ ಅವರಿಗೆ ಇನ್ಫೆಕ್ಷನ್​ ಆಗಿತ್ತು. ಅದಕ್ಕೆ ಚಿಕಿತ್ಸೆ ನೀಡುತ್ತಿರುವಾಗಲೇ ಪರಿಸ್ಥಿತಿ ಗಂಭೀರ ಆಯಿತು. ‘ಇನ್ನೇನು ಚೇತರಿಸಿಕೊಳ್ಳುತ್ತಾರೆ ಎನ್ನುವಾಗಲೇ ಅವರಿಗೆ ಚಳಿ ಶುರುವಾಯಿತು. ಉಸಿರಾಟದ ತೊಂದರೆ ಕೂಡ ಕಾಣಿಸಿಕೊಂಡಿತು. ನನ್ನ ಕಣ್ಣ ಮುಂದೆಯೇ ಅವರಿಗೆ ಹೃದಯಾಘಾತ (Heart Attack) ಆಯಿತು’ ಎಂದು ಆ ಘಟನೆಯನ್ನು ಶರತ್​ ಲೋಹಿತಾಶ್ವ (Sharath Lohitashwa) ವಿವರಿಸಿದ್ದಾರೆ. ತಂದೆಯ ಪರಿಸ್ಥಿತಿಯ ಬಗ್ಗೆ ಮಾತನಾಡುವಾಗ ಅವರು ಭಾವುಕರಾಗಿದ್ದಾರೆ.

 

Published on: Oct 11, 2022 02:06 PM