ಕರ್ನಾಟಕ ವಿಧಾನ ಪರಿಷತ್ ಸದಸ್ಯರಿಗೆ ಶರವಣ ವತಿಯಿಂದ ಚಿನ್ನ ಲೇಪಿತ ಗಂಡಬೇರುಂಡ ಲಾಂಛನ ವಿತರಣೆ

Updated on: Aug 19, 2025 | 11:54 AM

ಚಿನ್ನಾಭರಣ ಉದ್ಯಮಿಯೂ ಆಗಿರುವ ಜೆಡಿಎಸ್ ಎಂಎಲ್​ಸಿ ಟಿಎ ಶರವಣ ಕರ್ನಾಟಕ ವಿಧಾನಪರಿಷತ್ ಎಲ್ಲ ಸದಸ್ಯರಿಗೆ ಸರ್ಕಾರದ ಅಧಿಕೃತ ಲಾಂಛನವಾದ ಗಂಡಬೇರುಂಡವನ್ನು ವಿತರಣೆ ಮಾಡಿದ್ದಾರೆ. ಬೆಳ್ಳಿಯ ಅಚ್ಚಿನಲ್ಲಿ ನಿರ್ಮಿಸಿದ ಚಿನ್ನಲೇಪಿತ ಲಾಂಛನ ಇದಾಗಿದೆ. ಮಂಗಳವಾರ ವಿಧಾನಪರಿಷತ್​​ನಲ್ಲಿ ಲಾಂಛನ ವಿತರಣೆ ಮಾಡಲಾಯಿತು. ವಿಡಿಯೋ ಇಲ್ಲಿದೆ ನೋಡಿ.

ಬೆಂಗಳೂರು, ಆಗಸ್ಟ್ 19: ಕರ್ನಾಟಕ ವಿಧಾನ ಪರಿಷತ್ ಸದಸ್ಯರಿಗೆ ಜೆಡಿಎಸ್ ಎಂಎಲ್​ಸಿ ಟಿಎ ಶರವಣ ವತಿಯಿಂದ ಅಚ್ಚಿನ ಬೆಳ್ಳಿ ಲೋಹದ ಮೇಲೆ ಬಂಗಾರದ ಲೇಪನ ಹಾಕಿ ಸಿದ್ದಪಡಿಸಿರುವ ಕರ್ನಾಟಕ ಸರ್ಕಾರದ ಲಾಂಛನ ಗಂಡಬೇರುಂಡವನ್ನು ಮಂಗಳವಾರ ವಿತರಣೆ ಮಾಡಲಾಯಿತು. ಶರವಣ ಎಂಎಲ್​​ಸಿಗಳಿಗೆ ಲಾಂಛನ ಸಿದ್ದಪಡಿಸಿದ್ದಾರೆ. ಅವರ ವ್ಯಾಪಾರದಲ್ಲಿ ಶ್ರಮ ಪಟ್ಟು ಗಳಿಸಿದ್ದಾರೆ. ಅದರಲ್ಲಿ ಲಾಂಛನ ಸಿದ್ಧಪಡಿಸಿ ನಮ್ಮೆಲ್ಲರಿಗೂ ತಂದುಕೊಟ್ಟಿದ್ದಾರೆ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ