ಪುನೀತ್ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದ ‘ಜೇಮ್ಸ್’ ಚಿತ್ರ ನೋಡಲು ಬಂದಿದ್ದೇವೆ: ಮೊಹಮ್ಮದ್ ನಲಪಾಡ್

ಪುನೀತ್ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದ ‘ಜೇಮ್ಸ್’ ಚಿತ್ರ ನೋಡಲು ಬಂದಿದ್ದೇವೆ: ಮೊಹಮ್ಮದ್ ನಲಪಾಡ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 17, 2022 | 10:45 PM

ನಾವೆಲ್ಲ ಇಲ್ಲಿ ಸೇರಿರುವುದು ಟೀಮ್ ಬಿಲ್ಡಿಂಗ್ ಎಕ್ಸರ್​ಸೈಜ್​ನ ಒಂದು ಭಾಗವಾಗಿ; ನಾವೆಲ್ಲ ಒಂದು, ನಾವೆಲ್ಲ ಕನ್ನಡಿಗರು ಮತ್ತು ಭಾರತೀಯರು ಎಂಬ ಸಂದೇಶ ಸಾರಲು ಎಂದು ಮೊಹಮ್ಮದ್ ಹೇಳಿದರು.

ಪುನೀತ್ ರಾಜಕುಮಾರ (Puneeth Rajkumar) ಅವರ ದೊಡ್ಡ ಫ್ಯಾನ್ ಅಗಿರುವ ರಾಜ್ಯ ಯುವ ಕಾಂಗ್ರೆಸ್ ಮೋರ್ಚಾದ ಅಧ್ಯಕ್ಷ ಮೊಹಮ್ಮದ್ ನಲಪಾಡ್ (Mohammed Nalapad) ಗುರುವಾರ ಬೆಳಗ್ಗೆ 8 ಗಂಟೆಗೆ ಆಯೋಜಿಸಲಾಗಿದ್ದ ‘ಜೇಮ್ಸ್’ (‘James’) ಚಿತ್ರದ ಫ್ಯಾನ್ ಶೋ ವೀಕ್ಷಿಸಲು ತಮ್ಮ ಸ್ನೇಹಿತರೊಂದಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಮೊಹಮ್ಮದ್, ಪುನೀತ್ ಅವರೊಂದಿಗೆ ತಮಗಿದ್ದ ಬಾಂಧವ್ಯ ನೆನೆದರು. ಯುವ ಕಾಂಗ್ರೆಸ್ ಪದಾಧಿಕಾರಿಗಳು, ಬೇರೆ ಬೇರೆ ಜಿಲ್ಲೆಗಳ ಕಾರ್ಯಕರ್ತರು ಮತ್ತು ಸ್ನೇಹಿತರೊಂದಿಗೆ ‘ಜೇಮ್ಸ್’ ಚಿತ್ರ ನೋಡಲು ಬಂದಿದ್ದು ಪುನೀತ್ ಮೇಲಿನ ಉತ್ಕಟವಾದ ಪ್ರೀತಿ ಮತ್ತು ಅಭಿಮಾನದಿಂದ ಬಂದಿದ್ದೇವೆಯೇ ಹೊರತು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಜೊತೆಗಿನ ಪೈಪೋಟಿಗಲ್ಲ ಅಂತ ಅವರು ಹೇಳಿದರು.

ಪುನೀತ್ ಅವರ ಸಾವು ಕನ್ನಡಿಗರಿಗೆ ಆಗಿರುವ ಅತಿದೊಡ್ಡ ಹಾನಿ ಮತ್ತು ಆ ಲಾಸನ್ನು ಸರಿದೂಗಿಸುವುದು ಸಾಧ್ಯವಿಲ್ಲ ಎಂದ ಮೊಹಮ್ಮದ್, ವೈಯಕ್ತಿಕವಾಗಿ ಅವರು ತನಗೆ ಸ್ನೇಹಿತರಾಗಿದ್ದರು ಮತ್ತು ಅವರೊಂದಿಗೆ ನಿಕಟ ಒಡನಾಟ ಇತ್ತು ಅಂತ ಮೊಹಮ್ಮದ್ ಹೇಳಿದರು.

‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆ ಬಿಜೆಪಿ ನಾಯಕರು ಆಡುತ್ತಿರುವ ಮಾತುಗಳು, ಇತ್ತೀಚಿಗೆ ಪರಿಷತ್ ನಲ್ಲಿ ನಡೆದ ಗಲಾಟೆ ಬಗ್ಗೆ ಮೊಹಮ್ಮದ್ ಅವರನ್ನು ಕೇಳಿದಾಗ, ನಮಗೆ ಬಿಜೆಪಿಯಂತೆ ಒಡೆದು ಆಳುವ ರಾಜಕಾರಣ ಮತ್ತು ಧೃವೀಕರಣದ ರಾಜಕೀಯ ಮಾಡುವುದು ಬರೋದಿಲ್ಲ, ನಮ್ಮದೇನಿದ್ದರೂ ಜನಪರವಾದ ಪಾಲಿಟಿಕ್ಸ್ ಅಂತ ಹೇಳಿದರು.

ನಾವೆಲ್ಲ ಇಲ್ಲಿ ಸೇರಿರುವುದು ಟೀಮ್ ಬಿಲ್ಡಿಂಗ್ ಎಕ್ಸರ್​ಸೈಜ್​ನ ಒಂದು ಭಾಗವಾಗಿ; ನಾವೆಲ್ಲ ಒಂದು, ನಾವೆಲ್ಲ ಕನ್ನಡಿಗರು ಮತ್ತು ಭಾರತೀಯರು ಎಂಬ ಸಂದೇಶ ಸಾರಲು ಎಂದು ಮೊಹಮ್ಮದ್ ಹೇಳಿದರು.

ಇದನ್ನೂ ಓದಿ: ‘ಜೇಮ್ಸ್​’ ಚಿತ್ರದ ಆ ಒಂದು ಸೀನ್​ ನೋಡಿ ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿ; ಪುನೀತ್​ ಮೇಲಿನ ಅಭಿಮಾನ​ ಶಾಶ್ವತ