‘ಜೇಮ್ಸ್’ ನೋಡಿ ಶಿವಣ್ಣನಿಗೆ ಉಮ್ಮಳಿಸಿ ಬಂತು ದುಃಖ; ಹರಿಯಿತು ಕಣ್ಣೀರ ಧಾರೆ
‘ಜೇಮ್ಸ್’ ಚಿತ್ರವನ್ನು ಪುನೀತ್ ಸಹೋದರ ಶಿವರಾಜ್ಕುಮಾರ್ ಕೂಡ ವೀಕ್ಷಣೆ ಮಾಡಿದ್ದಾರೆ. ಸಿನಿಮಾ ನೋಡಿದ ನಂತರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಈ ವಿಡಿಯೋ ಅಭಿಮಾನಿಗಳ ಮನ ಕಲಕುವಂತಿದೆ.
ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡು ಐದು ತಿಂಗಳು ಆಗುತ್ತಾ ಬಂದಿದೆ. ಅವರಿಲ್ಲದೆ ಇಂದು (ಮಾರ್ಚ್ 17) ಬರ್ತ್ಡೇ ಆಚರಿಸಲಾಗಿದೆ. ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತ್ತು. ಎಲ್ಲಾ ಚಿತ್ರಮಂದಿರಗಳಲ್ಲಿ ಪುನೀತ್ ಅವರ ಕಟೌಟ್ ನಿಲ್ಲಿಸಿ ಹಬ್ಬದ ರೀತಿಯಲ್ಲಿ ಬರ್ತ್ಡೇ ಆಚರಿಸಲಾಗಿದೆ. ಪುನೀತ್ ಜತೆಗೆ ಕಳೆದ ಸಂತೋಷವನ್ನು ಮೆಲಕು ಹಾಕಲಾಗುತ್ತಿದೆ. ಪುನೀತ್ ಅವರು ಈಗಲೂ ನಮ್ಮ ಜತೆಗೆ ಇದ್ದಾರೆ ಎನ್ನುವ ಭಾವನೆಯನ್ನು ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ವ್ಯಕ್ತಪಡಿಸುತ್ತಿದ್ದಾರೆ. ‘ಜೇಮ್ಸ್’ ಚಿತ್ರವನ್ನು (James Movie) ಪುನೀತ್ ಸಹೋದರ ಶಿವರಾಜ್ಕುಮಾರ್ (Shivarajkumar) ಕೂಡ ವೀಕ್ಷಣೆ ಮಾಡಿದ್ದಾರೆ. ಸಿನಿಮಾ ನೋಡಿದ ನಂತರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಈ ವಿಡಿಯೋ ಅಭಿಮಾನಿಗಳ ಮನ ಕಲಕುವಂತಿದೆ.
ಇದನ್ನೂ ಓದಿ: James Movie Review: ಜೇಮ್ಸ್ ವಿಮರ್ಶೆ: ಗೆಳೆತನದ ಕಥೆ ಹೇಳುವ ಒಂದು ‘ಪವರ್ಫುಲ್’ ಶೋ
‘ಕೈ ನಡುಕ ಬರುತ್ತಿತ್ತು’; ‘ಜೇಮ್ಸ್’ ಡಬ್ಬಿಂಗ್ ವೇಳೆ ಸಾಧು ಕೋಕಿಲಗೆ ಆದ ಅನುಭವ ಎಂಥದ್ದು?