ಕಾನೂನು ಮತ್ತು ಶಿಕ್ಷಣ ಸಚಿವರ ಹೇಳಿಕೆಗಳನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಉಗ್ರವಾಗಿ ಖಂಡಿಸಿದರು!

ಕಾನೂನು ಮತ್ತು ಶಿಕ್ಷಣ ಸಚಿವರ ಹೇಳಿಕೆಗಳನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಉಗ್ರವಾಗಿ ಖಂಡಿಸಿದರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 17, 2022 | 6:14 PM

ಹಿಜಾಬ್ ಧರಿಸಿದ ಕಾರಣ ಪರೀಕ್ಷೆ ಬರೆಯಲು ಅವಕಾಶ ಪಡೆಯದ ವಿದ್ಯಾರ್ಥಿನಿಯರಿಗೆ ಮತ್ತೊಮ್ಮೊ ಪರೀಕ್ಷೆ ಬರೆಯುವ ಅವಕಾಶ ನೀಡಲಾಗದು ಅಂತ ಕಾನೂನು ಮತ್ತು ಶಿಕ್ಷಣ ಸಚಿವ ಹೇಳಿರುವದನ್ನು ಅವರ ಗಮನಕ್ಕೆ ತಂದಾಗ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೊಣೆಯರಿತು ಮಾತಾಡಬೇಕು ಎಂದು ಕುಮಾರಸ್ವಾಮಿ ಹೇಳಿದರು.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ರಾಜ್ಯದ ಕಾನೂನು (law) ಮತ್ತು ಶಿಕ್ಷಣ ಸಚಿವರನ್ನು (education minister) ಅವರು ನೀಡಿರುವ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದರು. ಗುರುವಾರ ವಿಧಾನಸೌಧದ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಕುಮಾರಸ್ವಾಮಿಯವರು ಹಿಜಾಬ್ ವಿವಾದ ಪ್ರಕರಣದಲ್ಲಿ ಕೋರ್ಟ್ ತನ್ನ ತೀರ್ಪಿನಲ್ಲಿ ಕಾಣದ ಕೈಗಳ ಬಗ್ಗೆ ಮಾತಾಡಿದೆ, ಈ ಕಾಣದ ಕೈಗಳು ಯಾವು ಅನ್ನೋದನ್ನು ಪತ್ತೆ ಮಾಡುವುದು ಸರ್ಕಾರದ ಕೆಲಸವಾಗಿದೆ ಎಂದು ಹೇಳಿದರು. ಅದೇ ಸಂದರ್ಭದಲ್ಲಿ, ಹಿಜಾಬ್ ಧರಿಸಿದ ಕಾರಣ ಪರೀಕ್ಷೆ ಬರೆಯಲು ಅವಕಾಶ ಪಡೆಯದ ವಿದ್ಯಾರ್ಥಿನಿಯರಿಗೆ ಮತ್ತೊಮ್ಮೊ ಪರೀಕ್ಷೆ ಬರೆಯುವ ಅವಕಾಶ ನೀಡಲಾಗದು ಅಂತ ಕಾನೂನು ಮತ್ತು ಶಿಕ್ಷಣ ಸಚಿವ ಹೇಳಿರುವದನ್ನು ಅವರ ಗಮನಕ್ಕೆ ತಂದಾಗ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೊಣೆಯರಿತು ಮಾತಾಡಬೇಕು ಎಂದು ಕುಮಾರಸ್ವಾಮಿ ಹೇಳಿದರು.

ಸಚಿವರಾಗಿರುವವರು ಕೇವಲ ಒಂದು ಸಮಾಜವನ್ನು ಪ್ರತಿನಿಧಿಸುವುದಿಲ್ಲ, ಅವರು ಆರೂವರೆ ಕೋಟಿ ಕನ್ನಡಿಗರ ಪ್ರತಿನಿಧಿಗಳಾಗಿರುತ್ತಾರೆ, ಹಾಗಾಗಿ ಅವರು ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ಮಾತಾಡಬೇಕು. ಇಲ್ಲಿ ಪ್ರತಿಷ್ಠೆಯ ವಿಷಯ ಬರುವುದಿಲ್ಲ. ಅವರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಮಾಡುವ ಪ್ರಮಾಣವನ್ನು ಅಷ್ಟು ಬೇಗ ಮರೆತುಬಿಡುತ್ತಾರೆಯೇ? ತಮ್ಮ ಪಕ್ಷದೊಳಗೆ ಅವರು ಏನಾದರೂ ಮಾತಾಡಿಕೊಳ್ಳಲಿ, ಅದನ್ನು ಯಾರೂ ಪ್ರಶ್ನಿಸುವುದಿಲ್ಲ. ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಸೂಚಿಸಿರುವ ಇತಿಮಿತಿಗಳನ್ನು ಸಚಿವರು ಮಾನ್ಯ ಮಾಡಬೇಕು, ಸಂವಿಧಾನ ಅವರಿಗೆ ನೀಡುವ ಅಧಿಕಾರವನ್ನು ಸಮರ್ಪಕವಾದ ರೀತಿಯಲ್ಲಿ ಬದ್ಧತೆಯೊಂದಿಗೆ ಬಳಸಬೇಕು ಎಂದು ಕುಮಾರಸ್ವಾಮಿ ಹೇಳಿದರು.

ವಿಷಯ ಕುರಿತಂತೆ ಅಧಿವೇಶನದಲ್ಲಿ ಬಹಳಷ್ಟು ಚರ್ಚಿಸಬೇಕಿದೆ, ಅದಕ್ಕೆಂದೇ ನಿಲುವಳಿ ಸೂಚನೆಯನ್ನು ಮಂಡಿಸಿದ್ದೇನೆ, ಎಲ್ಲವನ್ನೂ ಚರ್ಚೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ:  ಸರ್ಕಾರಿ ಬಂಗ್ಲೆ ಇರಲಿಲ್ಲ, ಅದಕ್ಕೇ ರೆಸ್ಟ್ ಮಾಡಲು ತಾಜ್ ಹೋಟೆಲ್​ಗೆ ಹೋಗ್ತಿದ್ದೆ, ನನ್ನದು ತೆರೆದ ಪುಸ್ತಕ -ಕುಮಾರಸ್ವಾಮಿ ತಿರುಗೇಟು