ಸಾಲದ ಕಂತು ಕಟ್ಟದೇ ಹೋಗಿದ್ದಕ್ಕೆ ಹಣಕಾಸು ಸಂಸ್ಥೆಯೊಂದರ ಸಿಬ್ಬಂದಿ ಸಾಲಗಾರನ ಬೈಕ್ ಗೆ ಬೆಂಕಿಯಿಟ್ಟರು!
ಬೈಕ್ ಮಾಲೀಕ ಒಂದು ಒಂದು ಫೈನಾನ್ಸ್ ಸಂಸ್ಥೆಯಲ್ಲಿ ಸಾಲ ಮಾಡಿದ್ದಾರೆ. ಪ್ರಾಯಶಃ ಮಾಸಿಕ ಕಂತುಗಳನ್ನು ನಿಗದಿತ ಸಮಯದಲ್ಲಿ ಕಟ್ಟಿಲ್ಲ. ಹಾಗಾಗಿ, ಸಂಸ್ಥೆಯು ವಸೂಲಿ ಪಡೆಯನ್ನು ಕಳಿಸಿದೆ. ಆ ಪಡೆ ಮಾಡಿರುವ ದುಷ್ಕೃತ್ಯ ಇದು.
ಬೆಂಗಳೂರು: ಮನೆಕಟ್ಟಲು, ಮಕ್ಕಳ ಓದು, ವಾಹನ ಇಲ್ಲ ಸೈಟ್ ಖರೀದಿಗಾಗಿ ರಾಷ್ಟ್ರೀಕೃತ, ಖಾಸಗಿ ವಲಯದ ಬ್ಯಾಂಕ್ ಅಥವಾ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ (finance firms) ಸಾಲ ಪಡೆಯುವವರು ಪ್ರತಿ ತಿಂಗಳು ಬ್ಯಾಂಕ್ ಇಲ್ಲವೇ ಸಂಸ್ಥೆ ನಿಗದಿಪಡಿಸಿರುವ ಮಾಸಿಕ ಕಂತು (EMI) ಕಟ್ಟಲೇಬೇಕು. ಕಟ್ಟುವುದು ಒಂದೇ ದಿನ ತಡವಾದರೂ ಸಂಬಂಧಪಟ್ಟ ಬ್ಯಾಂಕ್ ನಿಂದ ಟೆಕ್ಸ್ಟ್ ಮೇಸೆಜು (text message) ಬರುತ್ತದೆ. 3-4 ದಿನಗಳ ಬಳಿಕ ಬ್ಯಾಂಕ್ ನಿಂದ ಕರೆ ಬರುತ್ತದೆ. ಕರೆ ಮಾಡಿದವರು ಒಂದೆರಡು ಮೃದುವಾಗಿ ಮಾತಾಡಿದ ಬಳಿಕ ಅವರು ಧ್ವನಿ ಗಡುಸಾಗುತ್ತಾ ಹೋಗುತ್ತದೆ. ಅಮೇಲೆ ಬೈದಾಟ ಶುರುವಾಗುತ್ತದೆ. ಅದಾದ ಮೇಲೂ ಈ ಎಮ್ ಐ ಕಟ್ಟಿಲ್ಲ ಅಂತಾದರೆ, ಬ್ಯಾಂಕ್ ಗಳು ಒಂದು ವಸೂಲಾತಿ ಪಡೆಯನ್ನು ನಿಯೋಜಿಸಿಕೊಂಡಿರುತ್ತವೆ. ಸ್ಥಳೀಯ ಗೂಂಡಾಗಳು, ಸ್ಕೂಲ್ ಮತ್ತು ಕಾಲೇಜು ಡ್ರಾಪ್ ಔಟ್ ಗಳು ಈ ಪಡೆಯ ಸದಸ್ಯರು. ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ಈ ಗುಂಪಿಗೆ ಸಾಲಗಾರನ ವಿಳಾಸ ನೀಡಿ ವಸೂಲಿಗೆ ಕಳಿಸುತ್ತದೆ. ಇವು ತಮ್ಮದೇ ಆದ ರೀತಿಯಲ್ಲಿ ಹಣ ವಸೂಲಿ ಮಾಡಿಕೊಂಡು ಬರುತ್ತವೆ.
ಅಂಥದ್ದೇ ಒಂದು ಘಟನೆ ಬೆಂಗಳೂರು ಯಲಹಂಕದ ಸುರದೇನಪುರ ಗೇಟ್ ಬಳಿ ನಡೆದಿದೆ. ವಿಡಿಯೋನಲ್ಲಿ ಒಂದು ಬೈಕ್ ಹೊತ್ತಿ ಉರಿಯುತ್ತಿರುವುದು ನಿಮಗೆ ಕಾಣುತ್ತದೆ. ಅದು ಆಕಸ್ಮಿಕವಾಗಿ ಹೊತ್ತಿಕೊಂಡ ಉರಿ ಅಲ್ಲ. ಈ ಬೈಕ್ ಮಾಲೀಕ ಒಂದು ಒಂದು ಫೈನಾನ್ಸ್ ಸಂಸ್ಥೆಯಲ್ಲಿ ಸಾಲ ಮಾಡಿದ್ದಾರೆ. ಪ್ರಾಯಶಃ ಮಾಸಿಕ ಕಂತುಗಳನ್ನು ನಿಗದಿತ ಸಮಯದಲ್ಲಿ ಕಟ್ಟಿಲ್ಲ. ಹಾಗಾಗಿ, ಸಂಸ್ಥೆಯು ವಸೂಲಿ ಪಡೆಯನ್ನು ಕಳಿಸಿದೆ. ಆ ಪಡೆ ಮಾಡಿರುವ ದುಷ್ಕೃತ್ಯ ಇದು.
ಬೈಕ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿರುವುದು ನಿಮಗೆ ವಿಡಿಯೋನಲ್ಲಿ ಕಾಣಿಸುತ್ತದೆ. ಅಗ್ನಿ ಶಾಮಕ ದಳದವರು ಬೆಂಕಿ ನಂದಿಸುವ ಕೆಲಸ ಮಾಡಿದ್ದಾರಾದರೂ ಬೈಕ್ ಗುರುತಿಸಲಾಗಷ್ಟು ಸುಟ್ಟು ಹೋಗಿದೆ. ಏನು ನಡೆಯಿತು ಅನ್ನೋದನ್ನು ಒಬ್ಬ ಪ್ರತ್ಯಕ್ಷದರ್ಶಿ ವಿವರಿಸುತ್ತಿದ್ದಾರೆ. ಕಂತು ಕಟ್ಟದಿರುವುದಕ್ಕೆ ಹಣಕಾಸು ಸಂಸ್ಥೆಯ ಮೂರು ಜನ ಬೈಕರ್ ನನ್ನು ಅಡ್ಡಗಟ್ಟಿ ವಾಹನವನ್ನು ನೆಲಕ್ಕುರುಳಿಸಿ ಬೆಂಕಿ ಹಚ್ಚಿದ್ದಾರೆ.
ಬೈಕ್ ಸವಾರ ಹಣಕಾಸು ಸಂಸ್ಥೆಯ ವಿರುದ್ಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ: ಜಗ್ಗೇಶ್ ಜನ್ಮದಿನ: ಪುನೀತ್ ವಿಶ್ ಮಾಡಿದ್ದ ಆ ವಿಡಿಯೋ ಮತ್ತೆ ವೈರಲ್; ಭಾವುಕರಾದ ‘ನವರಸ ನಾಯಕ’