ಶೆಟ್ಟರ್ ಬಿಜೆಪಿ ಸೇರಿದರೆನ್ನುವ ಕಾರಣಕ್ಕೆ ನಾನು ಕಾಂಗ್ರೆಸ್ ತೊರೆಯುವುದಿಲ್ಲ: ಲಕ್ಷ್ಮಣ ಸವದಿ, ಶಾಸಕ
ಶೆಟ್ಟರ್ ಹಳೆ ಸ್ನೇಹಿತರಾಗಿರುವುದರಿಂದ ತಮ್ಮೊಂದಿಗೆ ಮಾತಾಡುತ್ತಿರುತ್ತಾರೆ ಎಂದ ಅವರು ಕಾಂಗ್ರೆಸ್ ಪಕ್ಷವನ್ನು ತಾನು ಸೇರಿದ ಬಳಿಕ ಶೆಟ್ಟರ್ ಸೇರ್ಪಡೆಯಾಗಿದ್ದರು, ಕಾಂಗ್ರೆಸ್ ಸೇರುವುದು ಜಂಟಿ ನಿರ್ಧಾರವೇನೂ ಆಗಿರಲಿಲ್ಲ ಹಾಗಾಗಿ ಜಂಟಿಯಾಗಿ ನಿರ್ಗಮಿಸುತ್ತೇವೆ ಅಂತ ಅಂದ್ಕೊಳ್ಳಬೇಡಿ ಎಂದು ಸುದ್ದಿಗಾರರಿಗೆ ಹೇಳಿದರು.
ಬೆಂಗಳೂರು: ಜಗದೀಶ್ ಶೆಟ್ಟರ್ (Jagadish Shettar) ವಿಕೆಟ್ ಉರುಳಿದೆ, ಮುಂದಿನ ಟಾರ್ಗೆಟ್ ಮತ್ತೊಬ್ಬ ವಲಸಿಗ (migrant) ಲಕ್ಷ್ಮಣ್ ಸವದಿ (Laxman Savadi)? ಊಹೂಂ, ಸಾಧ್ಯವಿಲ್ಲ ಎನ್ನುತ್ತಾರೆ ಖುದ್ದು ಸವದಿ. ಶೆಟ್ಟರ್ ಬಿಜೆಪಿಗೆ ಮರುಸೇರ್ಪಡೆಯಾದ ಸುದ್ದಿ ರಾಜ್ಯದೆಲ್ಲೆಡೆ ಹಬ್ಬಿದ ಬಳಿಕ ಸಹಜವಾಗೇ ಮಾಧ್ಯಮ ಪ್ರತಿನಿಧಿಗಳು ಸವದಿ ಬಳಿಗೋಡಿದರು. ಕಾಂಗ್ರೆಸ್ ಬಿಡುವ ಯಾವ ಯೋಚನೆಯೂ ತನಗಿಲ್ಲ ಎಂದು ಹೇಳಿದ ಅಥಣಿ ಶಾಸಕ ಶೆಟ್ಟರ್ ಪಕ್ಷ ತೊರೆದಿದ್ದಾರೆ ಎಂಬ ಕಾರಣಕ್ಕೆ ತಾನೂ ಅದೇ ಹಾದು ಹಿಡಿಯುತ್ತೇನೆ ಅಂತ ಭಾವಿಸೋದು ತಪ್ಪು ಎಂದರು. ಶೆಟ್ಟರ್ ಹಳೆ ಸ್ನೇಹಿತರಾಗಿರುವುದರಿಂದ ತಮ್ಮೊಂದಿಗೆ ಮಾತಾಡುತ್ತಿರುತ್ತಾರೆ ಎಂದ ಅವರು ಕಾಂಗ್ರೆಸ್ ಪಕ್ಷವನ್ನು ತಾನು ಸೇರಿದ ಬಳಿಕ ಶೆಟ್ಟರ್ ಸೇರ್ಪಡೆಯಾಗಿದ್ದರು, ಕಾಂಗ್ರೆಸ್ ಸೇರುವುದು ಜಂಟಿ ನಿರ್ಧಾರವೇನೂ ಆಗಿರಲಿಲ್ಲ ಹಾಗಾಗಿ ಜಂಟಿಯಾಗಿ ನಿರ್ಗಮಿಸುತ್ತೇವೆ ಅಂತ ಅಂದ್ಕೊಳ್ಳಬೇಡಿ ಎಂದು ಸುದ್ದಿಗಾರರಿಗೆ ಹೇಳಿದರು. ಲೋಕಸಭಾ ಚುನಾವಣೆ ಹತ್ತಿರದಲ್ಲಿರುವುದರಿಂದ ಬಿಜೆಪಿಯವರಿಗೆ ಪಕ್ಷ ಬಿಟ್ಟು ಹೋದವರ ಅಗತ್ಯವಿದೆ ಮತ್ತು ವಾಪಸ್ಸು ಕರೆಸಿಕೊಳ್ಳುವ ಅನಿವಾರ್ಯತೆಯ ಇದೆ, ಬಿಟ್ಟು ಬಂದವರು ತಮ್ಮ ವಿವೇಚನೆಗೆ ತಿಳಿದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಸವದಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ