‘ಪಿಚ್ಚರ್’ ಚಿತ್ರದ ಮೂಲಕ ಗಾಯಕಿಯಾದ ಶಿಲ್ಪಾ ಗಣೇಶ್; ಬರ್ತಿವೆ ಭರ್ಜರಿ ಆಫರ್ಸ್

Edited By:

Updated on: Jul 01, 2026 | 7:04 PM

Shilpa Ganesh: ‘ಪಿಚ್ಚರ್’ ಚಿತ್ರದ ಮೂಲಕ ಗಾಯಕಿಯಾಗಿ ಶಿಲ್ಪಾ ಗಣೇಶ್ ಪದಾರ್ಪಣೆ ಮಾಡಿದ್ದಾರೆ. ಗಣೇಶ್ ಅವರ ಪ್ರೋತ್ಸಾಹದಿಂದ ಈ ಹಾಡು ಹಾಡಿದ್ದು, ಈಗ ಬೇರೆ ಚಿತ್ರಗಳಿಂದಲೂ ಗಾಯನಕ್ಕೆ ಆಫರ್ಸ್‌ ಬರುತ್ತಿವೆ. ಪಿಚ್ಚರ್ ಒಂದು ಪಕ್ಕಾ ಕೌಟುಂಬಿಕ ಮನರಂಜನಾ ಚಿತ್ರವಾಗಿದ್ದು, ಜುಲೈ 24ಕ್ಕೆ ಬಿಡುಗಡೆಯಾಗಲಿದೆ.

ನಿರ್ಮಾಪಕಿ ಶಿಲ್ಪಾ ಗಣೇಶ್ ಅವರು ‘ಪಿಚ್ಚರ್’ ಚಿತ್ರದ ಮೂಲಕ ಮೊದಲ ಬಾರಿಗೆ ಗಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ತಮ್ಮ ಗಾಯನ ಪ್ರತಿಭೆಯನ್ನು ಈವರೆಗೆ ಹೆಚ್ಚು ಜನರಿಗೆ ಪರಿಚಯಿಸದಿದ್ದ ಶಿಲ್ಪಾ, ತಮ್ಮ ಕುಟುಂಬ ಮತ್ತು ಸ್ನೇಹಿತರ ಪ್ರೋತ್ಸಾಹದಿಂದ ಹಾಡಲು ಮುಂದಾದರು.

ಪತಿ ಗೋಲ್ಡನ್ ಸ್ಟಾರ್ ಗಣೇಶ್ ಅವರೇ ಈ ಚಿತ್ರದಲ್ಲಿ ಹಾಡುವಂತೆ ಪ್ರೇರಣೆ ನೀಡಿದರಂತೆ. ತಮ್ಮ ಹಾಡನ್ನು ಕೇಳಿದ ಬಳಿಕ, ಹಲವು ನಿರ್ದೇಶಕರು ಮತ್ತು ಸಂಗೀತ ನಿರ್ದೇಶಕರು ತಮ್ಮ ಮುಂದಿನ ಯೋಜನೆಗಳಿಗೆ ಹಾಡುವಂತೆ ಶಿಲ್ಪಾ ಗಣೇಶ್ ಅವರಿಗೆ ಆಫರ್ಸ್‌ಗಳನ್ನು ನೀಡಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅವರು, ಭವಿಷ್ಯದಲ್ಲಿ ಗಾಯನ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಸಂದೀಪ್ ನಿರ್ದೇಶನದ ಪಿಚ್ಚರ್ ಚಿತ್ರವು ಪ್ಯಾನ್ ಇಂಡಿಯಾ ಫ್ಯಾಮಿಲಿ ಎಂಬ ಟ್ಯಾಗ್‌ಲೈನ್ ಹೊಂದಿದೆ. ಈ ಚಿತ್ರ ಒಂದು ಫ್ಯಾಮಿಲಿ ಎಂಟರ್‌ಟೈನರ್ ಆಗಿದ್ದು, ಕಾಮಿಡಿ, ಭಾವನೆ ಮತ್ತು ಕುಟುಂಬದ ಮಹತ್ವವನ್ನು ಎತ್ತಿಹಿಡಿಯುತ್ತದೆ. ಸ್ವತಃ ಗಣೇಶ್ ಅವರೇ ಚಿತ್ರದ ಹಾಸ್ಯವನ್ನು ನೋಡಿ ಮೆಚ್ಚಿಕೊಂಡಿದ್ದಾರೆ ಎಂದು ಶಿಲ್ಪಾ ಹೇಳಿದ್ದಾರೆ. ಜುಲೈ 24ರಂದು ಪಿಚ್ಚರ್ ಚಿತ್ರವು ತೆರೆಕಾಣಲು ಸಜ್ಜಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published on: Jul 01, 2026 07:03 PM
Loading...
Unable to load recommendations.
Follow Us
ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More