ಕೋರ್ಟ್​ ಮೆಟ್ಟಿಲೇರಿದ ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ; 50 ಕೋಟಿ ರೂ. ನೀಡಲು ಆಗ್ರಹ

| Updated By: ರಾಜೇಶ್ ದುಗ್ಗುಮನೆ

Updated on: Oct 20, 2021 | 5:02 PM

ನೀಲಿ ಚಿತ್ರ ದಂಧೆಯಲ್ಲಿ ಶೆರ್ಲಿನ್​ ಹೆಸರು ಕೂಡ ಪ್ರಮುಖವಾಗಿ ಕೇಳಿಬಂದಿದೆ. ತಮ್ಮನ್ನು ರಾಜ್​ ಕುಂದ್ರಾ ಅವರು ಮೋಸದಿಂದ ಅಶ್ಲೀಲ ಸಿನಿಮಾ ದಂಧೆಗೆ ಎಳೆದುತಂದರು ಎಂದು ಶೆರ್ಲಿನ್​ ಚೋಪ್ರಾ ಮೊದಲಿನಿಂದಲೂ ಆರೋಪ ಮಾಡುತ್ತಲೇ ಇದ್ದಾರೆ.

ಅಶ್ಲೀಲ ಸಿನಿಮಾ ನಿರ್ಮಾಣದ ದಂಧೆಯಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್​ ಕುಂದ್ರಾ ಬರೋಬ್ಬರಿ ಎರಡು ತಿಂಗಳ ಬಳಿಕ ಜಾಮೀನು ಪಡೆದು ಹೊರ ಬಂದಿದ್ದಾರೆ. ಇದರ ಬೆನ್ನಲ್ಲೇ ರಾಜ್​ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ನಟಿ ಶೆರ್ಲಿನ್​ ಚೋಪ್ರಾ ವಿರುದ್ಧ 50 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ.

ನೀಲಿ ಚಿತ್ರ ದಂಧೆಯಲ್ಲಿ ಶೆರ್ಲಿನ್​ ಹೆಸರು ಕೂಡ ಪ್ರಮುಖವಾಗಿ ಕೇಳಿಬಂದಿದೆ. ತಮ್ಮನ್ನು ರಾಜ್​ ಕುಂದ್ರಾ ಅವರು ಮೋಸದಿಂದ ಅಶ್ಲೀಲ ಸಿನಿಮಾ ದಂಧೆಗೆ ಎಳೆದುತಂದರು ಎಂದು ಶೆರ್ಲಿನ್​ ಚೋಪ್ರಾ ಮೊದಲಿನಿಂದಲೂ ಆರೋಪ ಮಾಡುತ್ತಲೇ ಇದ್ದಾರೆ. ಜೊತೆಗೆ ಅವರು ಶಿಲ್ಪಾ ಶೆಟ್ಟಿಯನ್ನೂ ಕುಟುಕುತ್ತಿದ್ದಾರೆ. ಈ ಎಲ್ಲಾ ಕಾರಣಕ್ಕೆ ಸ್ಟಾರ್​ ದಂಪತಿ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳಿಗೆ ಹೊಸ ವಾರ್ಮ್​​ಅಪ್​ ಹೇಳಿಕೊಟ್ಟ ಶಿಲ್ಪಾ ಶೆಟ್ಟಿ; ವಿಡಿಯೋ ವೈರಲ್